ಹೊಸಪೇಟೆ (ವಿಜಯನಗರ): ಅಪರೂಪದ ‘ಯುರೇಶಿಯನ್ ಗ್ರಿಫನ್ ವಲ್ಚರ್’ (ರಣಹದ್ದು) ಗುರುವಾರ ನಗರದಲ್ಲಿ ಕಾಣಿಸಿಕೊಂಡಿತು.

ರಾಮನಗರ ಸುತ್ತಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ಈ ಜಾತಿಯ ರಣಹದ್ದುಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಈ ಭಾಗದಲ್ಲಿ ಇವುಗಳಿಲ್ಲ. ಆದರೆ, ಚಳಿಗಾಲ ಇರುವುದರಿಂದ ಕೆಲವೊಂದು ವಲಸೆ ಬಂದಿರುವ ಸಾಧ್ಯತೆ ಇದೆ ಎನ್ನುವುದು ಪಕ್ಷಿತಜ್ಞರ ಅಭಿಪ್ರಾಯ.

ಗುರುವಾರ ರಣಹದ್ದು ಅಸ್ವಸ್ಥಗೊಂಡು ನೆಲಕ್ಕೆ ಬಿದ್ದಿತ್ತು. ಅದನ್ನು ಗಮನಿಸಿದ ರಾಣಿಪೇಟೆಯ ಶಾಲಾ ಮಕ್ಕಳು ನೀರು ಹಾಕಿ ಉಪಚರಿಸಿದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ವಲಯ ಅರಣ್ಯ ಅಧಿಕಾರಿ ವಿನಯ್ ಅವರು ರಣಹದ್ದಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ ಕಳುಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.