ವಿಜಯಪುರ: ಪ್ಯಾಕ್ ಮಾಡಿರುವ, ಲೇಬಲ್ ಇರುವ ಆಹಾರದ ಧಾನ್ಯಗಳ ಮೇಲೆ ಶೇ 5ರಷ್ಟು ಜಿಎಸ್‌ಟಿ ವಿಧಿಸುವ ಶಿಫಾರಸು ಒಪ್ಪಿಕೊಳ್ಳಬಾರದು ಎಂದು ಆಗ್ರಹಿಸಿ ವಿಜಯಪುರ ಎಪಿಎಂಸಿ ವರ್ತಕರು ಶನಿವಾರ ದಿನಪೂರ್ತಿ ವ್ಯಾಪಾರ, ವಹಿವಾಟು ಬಂದ್ ಮಾಡಿ ಪ್ರತಿಭಟಿಸಿದರು.

ಮರ್ಚಂಟ್ಸ ಅಸೋಸಿಯೇಶನ್ ಹಾಗೂ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ವತಿಯಿಂದ ರೈತರು, ರೈತ ಸಂಘದ ಪ್ರತಿನಿಧಿಗಳು, ವ್ಯಾಪಾರಸ್ಥರು, ಗುಮಾಸ್ತರು, ವೇಮನರು, ಹಮಾಲರು ಹಾಗೂ ತಳದವರು ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಜಾಥಾ ನಡೆಸಿ, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ ಅವರಿಗೆ ಮನವಿ ಸಲ್ಲಿಸಿದರು.

ಇತ್ತೀಚಿಗೆ ನಡೆದ 47ನೇ ಜಿ.ಎಸ್.ಟಿ ಕೌನ್ಸೆಲಿಂಗ್ ಕಮಿಟಿ ಸಭೆಯಲ್ಲಿ ಆಹಾರ ಧಾನ್ಯ,ದ್ವಿದಳ ಧಾನ್ಯಗಳ ಮೇಲೆ ಶೇ 5ರ ತೆರಿಗೆ ವಿಧಿಸುವ ಕುರಿತು ಶಿಫಾರಸನ್ನು ಕೇಂದ್ರ ಸರ್ಕಾರಕ್ಕೆ ಮಾಡಿದ್ದು ಇದರಿಂದ ರೈತರಿಗೆ, ವರ್ತಕರಿಗೆ, ಜನ ಸಾಮಾನ್ಯರಿಗೆ, ಕೂಲಿಕಾರ್ಮಿಕರಿಗೆ ಹೊರೆಯಾಗುತ್ತದೆ ಎಂದು ಆರೋಪಿಸಿದರು.

ಮರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ರವೀಂದ್ರ ಎಸ್. ಬಿಜ್ಜರಗಿ, ಪದಾಧಿಕಾರಿಗಳಾದ ಜಯಾನಂದ ತಾಳಿಕೋಟಿ, ರಮೇಶ ನಿಡೋಣಿ, ನಿಲೇಶ ಶಹಾ, ಪ್ರವೀಣ ವಾರದ, ಸಿದ್ದಪ್ಪ ಸಜ್ಜನ, ರೈತ ಸಂಘದ ಮುಖಂಡ ಭೀಮಶಿ ಕಲಾದಗಿ, ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ರಾಜಶೇಖರ ಪಾಟೀಲ, ಕಿರಣಾ ಬಜಾರ ವ್ಯಾಪಾರಸ್ಥ ಅಧ್ಯಕ್ಷ ಲಾಲು ಶೇಟ್, ಜವಳಿ ವರ್ತಕರ ಸಂಘದ ಅಧ್ಯಕ್ಷ ಗೋಕುಲ ಮಹೀಂದ್ರಕರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಜನ ಸಾಮಾನ್ಯರು ಉಪಯೋಗಿಸುವ ಆಹಾರ ಧಾನ್ಯಗಳ ಮೇಲೂಜಿಎಸ್‌ಟಿ ವಿಧಿಸಲು ಮುಂದಾಗಿರುವ ಜನವಿರೋಧಿ ಕ್ರಮಖಂಡನೀಯ. ಜಿಎಸ್‌ಟಿ ವಿಧಿಸುವುದನ್ನು ಕೈಬಿಡಬೇಕು

–ರವೀಂದ್ರ ಎಸ್. ಬಿಜ್ಜರಗಿ, ಅಧ್ಯಕ್ಷ, ಮರ್ಚಂಟ್ಸ್ ಅಸೋಸಿಯೇಶನ್, ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.