ದೇವರಹಿಪ್ಪರಗಿ: ಪಟ್ಟಣದ ಕೆರೆಗಳಿಗೆ ನೀರು ಪೂರೈಸುವ ಕಾಲುವೆ ಒಡೆದು ಪಡಗಾನೂರ ಗ್ರಾಮ ವ್ಯಾಪ್ತಿಯಲ್ಲಿನ ಕಲ್ಲು ಕ್ರಷರ್ ಮಾಲೀಕರು ಅನಧಿಕೃತವಾಗಿ ನೀರು ಪಡೆಯುತ್ತಿರುವ ಪ್ರದೇಶಕ್ಕೆ ತಹಶೀಲ್ದಾರ್ ಸಿ.ಎ. ಗುಡದಿನ್ನಿ ಹಾಗೂ ಕೆಬಿಜೆಎನ್ಎಲ್ ಅಧಿಕಾರಿಗಳು ಭೇಟಿ ನೀಡಿ ಸರಿಪಡಿಸಿದರು.

‘ಕ್ರಷರ್ ಒಡೆದು ಕಾಲುವೆಗೆ ನೀರು’ ಶೀರ್ಷಿಕೆಯ ಸುದ್ದಿಯನ್ನು ‘ಪ್ರಜಾವಾಣಿ’ ಶನಿವಾರ ಪ್ರಕಟಿಸಿತ್ತು. ಭಾನುವಾರ ತಹಶೀಲ್ದಾರ್ ಹಾಗೂ ಕೃಷ್ಣಾ ಭಾಗ್ಯ ಜಲನಿಗಮದ ಇಇ ಬಿ.ಟಿ. ಪಾಟೀಲ, ಎಇಇ ಮಾರುತಿ ಕದಮ್ ಹಾಗೂ ಎಇ ನಿಂಗನಗೌಡ ಪಾಟೀಲ ಅವರು ಪಡಗಾನೂರ ಹಾಗೂ ದೇವರಹಿಪ್ಪರಗಿ ಮಧ್ಯದ ಕ್ರಷರ್ ಗಳಿರುವ ಪ್ರದೇಶಕ್ಕೆ ಭೇಟಿ ನೀಡಿ, ಕಾಲುವೆ ಸರಿಪಡಿಸಿದರು. ಸರಾಗವಾಗಿ ಕೆರೆಗಳಿಗೆ ನೀರು ಪೂರೈಕೆಯಾಗುವಂತೆ ಕ್ರಮ ಕೈಗೊಂಡರು. ಜೊತೆಗೆ ಮುಂದಿನ ದಿನಗಳಲ್ಲಿ ಇಂಥ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ರೈತರನ್ನು ಸಮಾಧಾನಪಡಿಸಿದರು.

ರೈತರಾದ ನಾಗಪ್ಪ ವಡ್ಡೋಡಗಿ, ರಾಮು ದೇಸಾಯಿ, ಯಲ್ಲಾಲಿಂಗ ವಡ್ಡೋಡಗಿ, ಶರಣು ಸೌದಿ, ಮಲ್ಲು ಭಂಡಾರಿ, ಗುರುರಾಜ್ ಜಡಗೊಂಡ, ಮುದುಕಪ್ಪ ಹಡಪದ, ಶಂಕ್ರೆಪ್ಪ ಸಾಸಾಬಾಳ, ಸಿದ್ದಪ್ಪ ಹಡಪದ, ಉಮೇಶ ಕೋಟಿನ್, ಸಿದ್ದು ಮಸಬಿನಾಳ, ರಮೇಶ ಅಸ್ಕಿ, ಕಾಶೀನಾಥ ಮಡಗೊಂಡ, ಸಂಜು ಕೋಟಿನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.