ವಿಜಯಪುರ: ಹೃದಯಾಘಾತದಿಂದ ಶನಿವಾರ ನಿಧನರಾದ ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಜಿಲ್ಲಾ ಕಾಂಗ್ರೆಸ್ನಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ರಾಜ್ಯ ಕಂಡಂತಹ, ಅಪರೂಪದ ಸರಳ, ಸ್ನೇಹಜೀವಿ ಹಾಗೂ ಚಿಂತನ ಶೀಲ ರಾಜಕಾರಣಿಯಾದ್ದ ಧ್ರುವನಾರಾಯಣ್ ಅವರ ಅಕಾಲಿಕ ನಿಧನದಿಂದಾಗಿ ಪಕ್ಷಕ್ಕೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ ಹೇಳಿದರು.

ಅದ್ಭುತ ಸಂಘಟನಾ ಶಕ್ತಿಯನ್ನು ಹೊಂದಿದ್ದ ಅವರ ಮಾರ್ಗದರ್ಶನದಲ್ಲಿ ನಾನು ಕುಂದಗೋಳ, ಸಿಂದಗಿ ಹಾಗೂ ಬೆಳಗಾವಿ ಲೋಕಸಭಾ ಉಪಚುನಾವಣೆಗಳಲ್ಲಿ ಪಕ್ಷದ ಕಾರ್ಯಕರ್ತರು ಅದ್ಬುತ ಕೆಲಸ ಮಾಡಿದ್ದಾರೆ. ಯಾರ ಮನಸ್ಸಿಗೂ ನೋವನ್ನು ಮಾಡದ ಅವರು, ತಮ್ಮ ಮೃದು ಮಾತುಗಳಿಂದಲೇ ನಮ್ಮನ್ನೆಲ್ಲ ಅತ್ಯಂತ ಕ್ರಿಯಾಶೀಲವಾಗಿ ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದರು. ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ನೀಡಲಿ, ಅವರ ಕುಟುಂಬದ ಸದಸ್ಯರಿಗೆ ದುಃಖ ಸಹಿಸಿಕೊಳ್ಳುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಎಂದರು.

ಮುಖಂಡರಾದ ಚಾಂದಸಾಬ ಗಡಗಲಾವ, ಸುಭಾಷ ಕಾಲೇಬಾಗ, ಚಂದ್ರಶೇಖರ ಕೊಡಬಾಗಿ, ವಿನೋದ ವ್ಯಾಸ, ಅಡಿವೆಪ್ಪ ಸಾಲಗಲ, ಸುರೇಶ ಗೊಣಸಗಿ, ವಸಂತ ಹೊನಮೊಡೆ, ಸಮದ ಸುತಾರ, ಆರತಿ ಶಹಾಪೂರ, ಪಿರೋಜ ಶೇಖ, ಬಾಬು ಯಾಳವಾರ, ತಾಜುದ್ದೀನ್ ಖಲಿಫಾ, ಪ್ರಭಾವತಿ ನಾಟೀಕರ, ಭಾರತಿ ಹೊಸಮನಿ ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.