ಬಸವನಬಾಗೇವಾಡಿ: ಪತ್ರಿಕೆ ಓದುವ ಹವ್ಯಾಸ, ‘ಪ್ರಜಾವಾಣಿ’ ಪತ್ರಿಕೆ ಬಗ್ಗೆ ಇದ್ದ ಅಭಿಮಾನದಿಂದ ಕಳೆದ 27 ವರ್ಷದಿಂದ ಪತ್ರಿಕೆ ವಿತರಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪಟ್ಟಣದ ವಿಠ್ಠಲ ಕುಲಕರ್ಣಿ ಅವರು ನೆಮ್ಮದಿಯ ಬದುಕು ಕಟ್ಟಿಕೊಳ್ಳುವುದರೊಂದಿಗೆ ಕೆಲವರಿಗೆ ಉದ್ಯೋಗ ನೀಡಿದ ಸಂತೃಪ್ತಿ ಇದೆ.

ಆರಂಭದಲ್ಲಿ ‘ಪ್ರಜಾವಾಣಿ’ ಪತ್ರಿಕೆ ಏಜೆಂಟರಾಗಿ ಪತ್ರಿಕೆ ವಿತರಣೆ ಕಾರ್ಯದಲ್ಲಿ ತೊಡಗಿದ ಅವರು ಓದುಗರ ವಿಶ್ವಾಸ ಬೆಳೆಸಿಕೊಂಡರು. ಪತ್ರಿಕೆ ವಿತರಣೆ ಒಬ್ಬರಿಂದಲೇ ಸಾಧ್ಯವಾಗದೇ ಹೋದಾಗ ಕೆಲ ಯುವಕರಿಗೆ ಸಂಬಳ ನೀಡಿ ಪತ್ರಿಕೆ ವಿತರಣೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಪತ್ರಿಕೆ ವಿತರಣೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಅವರು ವಿಜಯವಾಣಿ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಉದಯವಾಣಿ, ಕನ್ನಡಪ್ರಭ ಸೇರಿದಂತೆ ವಿವಿಧ ಪತ್ರಿಕೆಗಳ ವಿತರಣೆಯಲ್ಲಿ ತೊಡಗಿಕೊಂಡಿದ್ದಾರೆ. ಓದುಗರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ 15ಕ್ಕೂ ಹೆಚ್ಚು ಜನರು ಪತ್ರಿಕೆಗಳ ವಿತರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆರ್ಥಿಕವಾಗಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವುದರೊಂದಿಗೆ ಕೆಲವರಿಗೆ ಉದ್ಯೋಗ ನೀಡಿದ ತೃಪ್ತಿ ಅವರದು.

‘ಮಳೆ, ಚಳಿಯನ್ನು ಲೆಕ್ಕಿಸದೇ ಪ್ರತಿದಿನ ನಸುಕಿನ ಜಾವದಲ್ಲೇ ಪತ್ರಿಕೆ ವಿತರಣೆ ಕಾರ್ಯ ಆರಂಭಿಸುತ್ತೇವೆ. ನಮ್ಮ ಮನೆಯಲ್ಲಿ ಹಾಗೂ ಸಂಬಂಧಿಕರ ಮನೆಯಲ್ಲಿ ಸಮಾರಂಭ ಇದ್ದರೂ ಪತ್ರಿಕೆ ವಿತರಣೆ ಕಾರ್ಯ ನಿಲ್ಲಿಸಿಲ್ಲ. ಪತ್ನಿ ವಿಜಯಲಕ್ಷ್ಮೀ ಸೇರಿದಂತೆ ಮಕ್ಕಳು ನನ್ನ ಕೆಲಸಲದಲ್ಲಿ ಸಹಾಯ ಮಾಡುತ್ತಿದ್ದಾರೆ’ ಎನ್ನುತ್ತಾರೆ ವಿಠ್ಠಲ ಕುಲಕರ್ಣಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.