ವಿಜಯಪುರ ನಗರದ ರಾಜೇಂದ್ರ ಕಾಲೋನಿಯಲ್ಲಿನ ಉದ್ಯಾನದಲ್ಲಿ ಅಳವಡಿಸಿದ್ದ ಜೋಕಾಲಿ ಹಾಗೂ ಆಟಿಕೆ ಸಲಕರಣೆಗಳು ಹಾಳಾಗಿರುವುದು.
ವಿಜಯಪುರ ನಗರದ ಪ್ರಕೃತಿ ಕಾಲೋನಿಯಲ್ಲಿ ನಿರ್ವಹಣೆ ಇಲ್ಲದೆ ಆಟದ ಮೈದಾನದಂತೆ ಭಾಸವಾಗುತ್ತಿರುವ ಉದ್ಯಾನವನ
ವಿಜಯಪುರ ನಗರದ ಸ್ವಾತಂತ್ರ್ಯ ಕಾಲೋನಿಯಲ್ಲಿ ಹಾಳಾಗಿ ಮೂಲೆಗುಂಪಾಗಿರುವ ಸಲಕರಣೆಗಳು.
ಉದ್ಯಾನದಲ್ಲಿನ ಕಸದ ರಾಶಿ ತೆರವುಗೊಳಸದೆ ಉಳಿಸಿರುವುದು.
ನಗರಲ್ಲಿ ಸಂಜೆ ಸಮಯದಲ್ಲಿ ಮಕ್ಕನ್ನು ಉದ್ಯಾನಗಳಿಗೆ ಕರೆದೊಯ್ಯಬೇಕೆಂದರೆ ಅನೇಕ ಉದ್ಯಾನಗಳಲ್ಲಿ ನಿರ್ಮಿಸಲಾದ ಜೋಕಾಲಿ ಜಾರುಗುಂಡಿ ಸಲಕರಣೆಗಳು ಮುರಿದುಹೋಗಿದೆ.
–ಮಂಜುನಾಥ ಪವಾರ ವಿಜಯಪುರಪಾಲಿಕೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಉದ್ಯಾನ ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ. ಅನೇಕ ವರ್ಷಗಳಿಂದ ಸಲಕರಣೆಗಳು ಹಾಳಾಗಿದ್ದು ಯಾರೂ ಗಮನಿಸುತ್ತಿಲ್ಲ.
–ಎಂ.ಬಿ ಶ್ರೀಧರ ವಿಜಯಪುರನಗರದ ಅನೇಕ ಉದ್ಯಾನಗಳು ಸರಿಯಾದ ನಿರ್ವಹಣೆಯಿಲ್ಲದೆ ಹಾಳಾಗಿವೆ. ನಾಗರಿಕರು ವಾಯುವಿಹಾರವನ್ನು ರಸ್ತೆಗಳ ಪಕ್ಕದಲ್ಲೆ ಮಾಡುತ್ತಾರೆ.
–ರವಿ ಲಮಾಣಿ ಜಿಲ್ಲಾಧ್ಯಕ್ಷ ಎಐಬಿಎಸ್‌ಎಸ್ ಯುವಘಟಕನೀರಿಲ್ಲದೆ ಸೊರಗಿದ ಉದ್ಯಾನ
ಉದ್ಯಾನ ಹಸಿರಿನಿಂದ ಕೂಡಿದ್ದರೆ ಮಾತ್ರ ಉದ್ಯಾನವನ ಎನ್ನುವ ಅರ್ಥವನ್ನು ಪಡೆದುಕೊಳ್ಳುತ್ತದೆ. ಆದರೆ ನಗರದ ಬಹುತೇಕ ಉದ್ಯಾನಗಳಲ್ಲಿ ಗಾರ್ಡ್‍ನ್ ಸೇರಿದಂತೆ ಹೂವಿನ ಗಿಡಗಳು ನೀರಿಲ್ಲದೇ ಒಣಗಿ ಹೋಗಿದೆ. ಉದ್ಯಾನವನ ನಿರ್ಮಿಸಿದ ಸಮಯದಲ್ಲಿ ನೀರಿನ ಸೌಲಭ್ಯ ನೀಡಲಾಗಿತ್ತು. ಆದರೆ ಸದ್ಯ ನಗರದ ಬಹುತೇಕ ಉದ್ಯಾನಗಳಲ್ಲಿ ನೀರಿಲ್ಲದೆ ಒಣಗುತ್ತಿದೆ. ಹೂವಿನ ಗಿಡಗಳು ಒಣಗಿ ಕಂಟಿಗಳಾಗಿ ಮಾರ್ಪಟ್ಟಿದೆ. ಸ್ಥಳೀಯ ನಿವಾಸಿಗಳು ಪಾರ್ಕ್ ಒಣಗುತ್ತಿರುವುದನ್ನು ಗಮನಿಸಿ ಪಾಲಿಕೆಗೆ ಮಾಹಿತಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಸದಾ ಹಸಿರಿನಿಂದ ಕಂಗೋಳಿಸಬೇಕಾಗಿದ್ದ ಉದ್ಯಾನಗಳಿಗೆ ನೀರಿನ ಕೊರತೆಯಿಂದ ಹಾಳು ಕೊಂಪೆಗಳಂತೆ ಉದ್ಯಾನವನಗಳು ಭಾಸವಾಗುತ್ತಿದೆ.
ಬೆರಳೆಣಿಕೆ ಉದ್ಯಾನ ಮಾದರಿ
ನಗರದಲ್ಲಿನ ಬೆರಳೆಣಿಕೆಯ ಉದ್ಯಾನಗಳು ಮಾತ್ರ ಹಸಿರು ಹೊದಿಕೆ ಹೊದ್ದು ಆಕರ್ಷಣೀಯವಾಗಿ ಮಾದರಿಯಾಗಿವೆ. ಆಯಾ ವಾರ್ಡ್‌ನ ಸಾರ್ವಜನಿಕರ ಮುತುವರ್ಜಿಯಿಂದ ವ್ಯವಸ್ಥಿತವಾಗಿವೆ. ವಾಯು ವಿಹಾರಿಗಳಿಗೆ ಹಿತ ನೀಡುವ ವಾತಾರವಣವಿದೆ. ನಗರದ ಹೊರವಲಯದ ಭೂತನಾಳ ಕೆರೆ ಉದ್ಯಾನ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿನ ಉದ್ಯಾನ ಜಲನಗರ ಉದ್ಯಾನ ಸೇರಿದಂತೆ ಬೆರಳೆಣಿಕೆಯ ಉದ್ಯಾನಗಳು ಮಾತ್ರ ವಾಯು ವಿಹಾರಿಗಳಿಗೆ ಹಿತ ನೀಡುತ್ತಿದೆ. ಇದೇ ಮಾದರಿಗಳಲ್ಲಿ ಇತರೆ ಉದ್ಯಾನಗಳು ಆಗಲಿ ಎನ್ನುವುದು ಜನಸಾಮಾನ್ಯರ ಆಗ್ರಹ.