ಬಸವನ ಬಾಗೇವಾಡಿ: ಪಠ್ಯ ಹಾಗೂ ಪಠ್ಯೇತರ ಚಟುವಟಿಕೆ ಗಳೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತಿ ರುವ ಇಲ್ಲಿನ ನೇತಾಜಿ ಶಿಕ್ಷಣ ಸಂಸ್ಥೆಯು ಸ್ಪರ್ಧಾ ಜಗತ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದೆ.

ಸಂಸ್ಥೆಯಡಿ ನೇತಾಜಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ, ನೇತಾಜಿ ಪ್ರೌಢಶಾಲೆ ಹಾಗೂ ನಂದ
ಗೋಕುಲ ಇಂಗ್ಲಿಷ್ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಗಳನ್ನು ನಡೆಸಲಾಗುತ್ತಿದೆ.

ಮುದ್ದೇಬಿಹಾಳ ರಸ್ತೆಯಲ್ಲಿರುವ ನೇತಾಜಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ
ಪ್ರೌಢಶಾಲೆಯ ಕಟ್ಟಡ ಆಕರ್ಷಿಸುತ್ತಿದೆ. ಶಾಲೆ ಆವರಣದಲ್ಲಿ 400ಕ್ಕೂ ಹೆಚ್ಚು ವಿವಿಧ ಸಸ್ಯಗಳನ್ನು ನೆಡಲಾಗಿದೆ. ಶಾಲೆಯ ಆವರಣದಲ್ಲಿನ ಕೈತೋಟ ಗಮನ ಸೆಳೆಯುತ್ತದೆ. ಇಂಥ ಸುಂದರ ಪರಿಸರದ ನಡುವೆ ಓದುತ್ತಿರುವ ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಮುಂದಿದ್ದಾರೆ.

ಅಗಸಿ ಒಳಗಿನ ರಿಲಯನ್ಸ್ ಟವರ್ ಸಮೀಪದ ಸುಸಜ್ಜಿತ ಕಟ್ಟಡದಲ್ಲಿ ಪೂರ್ವ ಪ್ರಾಥಮಿಕ ಇಂಗ್ಲಿಷ್
ಮಾಧ್ಯಮ ತರಗತಿ ನಡೆಯುತ್ತಿದೆ.

‘ವಿದ್ಯಾರ್ಥಿಗಳಿಗೆ ಪಠ್ಯದ ಜತೆ ಪರಿಣಾಮಕಾರಿ ಬೋಧನೆಗಾಗಿ ‘ಸ್ಮಾರ್ಟ್ ಕ್ಲಾಸ್’ಗಳ ಬಳಕೆ, ಸ್ಪರ್ಧಾತ್ಮಕ ಪರೀಕ್ಷೆಗಾಗಿ ವಿಶೇಷ ಬೋಧನೆ, ಮಕ್ಕಳ ಮನೋಸಾಮರ್ಥ್ಯ ವೃದ್ಧಿಸುವ ವಿವಿಧ ಆಟಗಳ ತರಬೇತಿ, ದೈಹಿಕ ಹಾಗೂ ಮಾನಸಿಕ ಸದೃಢತೆಗಾಗಿ ಯೋಗ, ಕ್ರೀಡೆ, ಧ್ಯಾನ, ವಚನ ಪಠಣ ಸೇರಿ ವಿವಿಧ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ’ ಎಂದು ಮುಖ್ಯಶಿಕ್ಷಕರಾದ ರಮೇಶ ಹರನಾಳ, ಸೌಮ್ಯಾ ಪತ್ತಾರ, ಅನುಜಾ ಬಾಗೇವಾಡಿ, ಗೀತಾ ಗಂಗನಗೌಡರ ತಿಳಿಸಿದರು.

‘ಸಂಸ್ಥೆಯ ಅಧ್ಯಕ್ಷ ರಾಜಶೇಖರ ಪಾಟೀಲ, ಆಡಳಿತಾಧಿಕಾರಿ ಸಿದ್ದು ಸಾಸನೂರ ಅವರ ಮಾರ್ಗ
ದರ್ಶನದಲ್ಲಿ 30ಕ್ಕೂ ಹೆಚ್ಚು ಶಿಕ್ಷಕರು ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸುತ್ತಿದ್ದೇವೆ. ಮಕ್ಕಳ ಕಲಿಕಾ
ಸಾಮರ್ಥ್ಯ ಅರಿತು ವೈಜ್ಞಾನಿಕ ನೆಲೆಯ ಶಿಕ್ಷಣವನ್ನು ಒದಗಿಸುವತ್ತ ಹೆಚ್ಚಿನ ಗಮನ ಹರಿಸಲಾಗುತ್ತಿದೆ’ ಎಂದು ಶಿಕ್ಷಕ ಶಶಿಧರ ಬಿರಾದರ ಹೇಳಿದರು.

ಸಂಸ್ಥೆಯ ಅಧ್ಯಕ್ಷ ರಾಜಶೇಖರ ಪಾಟೀಲ ಅವರು ಎರಡು ದಶಕದ ಹಿಂದೆ ಪಟ್ಟಣದಲ್ಲಿ ಮನೆ
ಪಾಠವನ್ನು ಆರಂಭಿಸಿದ್ದರು. ಇವರು ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸಲು ವಿವಿಧ ಕಾರ್ಯಕ್ರಮ
ಗಳನ್ನು ಹಾಕಿಕೊಂಡಿದ್ದರು. ಇದರಿಂದ ಪ್ರಭಾವಿತರಾದ ಹಲವಾರು ಪಾಲಕರು ಸ್ವತಂತ್ರ ಶಾಲೆಯನ್ನು ಆರಂಭಿಸುವಂತೆ ಸಲಹೆ ನೀಡಿದ್ದರು. ಪಾಲಕರ ಸಲಹೆಯಂತೆ 2009ರಲ್ಲಿ ಪೂರ್ವ ಪ್ರಾಥಮಿಕ ಹಂತದ ತರಗತಿಯೊಂದಿಗೆ ಆರಂಭವಾದ ನೇತಾಜಿ ಶಿಕ್ಷಣ ಸಂಸ್ಥೆಯಲ್ಲಿ ಪ್ರಸಕ್ತ 10ನೇ ತರಗತಿವರೆಗೆ ಒಟ್ಟು 752 ವಿದ್ಯಾರ್ಥಿಗಳು ಓದುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.