ಸಿಂದಗಿ: ಆಹೇರಿ ಗ್ರಾಮದ ಪ್ರಗತಿಪರ ಕೃಷಿಕ ಚಂದ್ರಶೇಖರಗೌಡ ಸಂಗನಗೌಡ ಪಾಟೀಲ ಅವರು ಆರ್ಥಿಕವಾಗಿ ಸಬಲರಾಗಿದ್ದರೂ ಮಗನ ವಿವಾಹವನ್ನು ಸರಳವಾಗಿ ಮಾಡುವ ಮೂಲಕ ಮಾದರಿಯಾಗಿದ್ದಾರೆ. ತೋಟದ ಮನೆಯಲ್ಲಿ ನಡೆದ ಅತ್ಯಂತ ಸರಳ ಸಮಾರಂಭದಲ್ಲಿ ಸೋಮನಗೌಡ ಅವರು ರೈತ ಬಾಬಾಗವಡ ಪಾಟೀಲ ಅವರ ಮಗಳು ಲಕ್ಷ್ಮಿಯನ್ನು ಕೈಹಿಡಿಯುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟರು.

ಆರ್ಥಿಕವಾಗಿ ಸಬಲರಾಗಿರುವ ಅವರು 5 ಎಕರೆ ತೋಟಕ್ಕೆ ಹನಿ ನೀರಾವರಿ ಅಳವಡಿಸಿದ್ದಾರೆ. ಸಾವಯವ ಗೊಬ್ಬರ ಬಳಸಿ ದಾಳಿಂಬೆ, ಕಬ್ಬು, ನಿಂಬೆ ಬೆಳೆಯುತ್ತಿದ್ದಾರೆ. ಅದರಿಂದ ಹೆಚ್ಚಿನ ಆದಾಯವನ್ನು ಗಳಿಸುತ್ತಿದ್ದಾರೆ. ಆದಾಗ್ಯೂ ಮಗನ ವಿವಾಹವನ್ನು ಕೇವಲ ₹ 25 ಸಾವಿರ ವೆಚ್ಚದಲ್ಲಿ ಮಾಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

‘ನಾವು ಕಾಯಕ ಜೀವಿಗಳು. ಒಂದು ದಿನ ಕೃಷಿ ಕಾರ್ಯ ಮಾಡದಿದ್ದರೆ ಸಮಾಧಾನ ಇರುವುದಿಲ್ಲ. ಅದ್ಧೂರಿ ವಿವಾಹಕ್ಕಾಗಿ ತಿಂಗಳುಗಟ್ಟಲೇ ಸಮಯ ವ್ಯಯಿಸಬೇಕಾಗುತ್ತದೆ. ಅಲ್ಲದೆ ಹಣವನ್ನು ವ್ಯರ್ಥ ಎನಿಸುವ ರೀತಿ ಖರ್ಚು ಮಾಡುವುದು ನನಗೆ ಇಷ್ಟವಿಲ್ಲ. ಇವತ್ತು ಒಂದು ದಿನ ಮಾತ್ರ ನಮ್ಮ ಕೃಷಿ ಕಾರ್ಯ ಇಲ್ಲ. ನಿನ್ನೆ ಇತ್ತು, ನಾಳೆಯೂ ಇರುತ್ತದೆ. ಸಹೋದರ ಬಾಗಪ್ಪಗೌಡರ ಸಲಹೆ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ರಂಜಣಗಿ ಅವರ ಪ್ರೇರಣೆಯಿಂದಾಗಿ ಸರಳ ವಿವಾಹ ಮಹೋತ್ಸವ ನಡೆಯಿತು’ ಎಂದು ಚಂದ್ರಶೇಖರ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಸರಳ ವಿವಾಹಕ್ಕೆ ಬೀಗರು, ವರ–ವಧು, ಇಡೀ ಕುಟುಂಬ ಖುಷಿಯಿಂದ ಒಪ್ಪಿಕೊಂಡಿದ್ದು ವಿಶೇಷ. ವಿವಾಹ ಸಮಾರಂಭದಲ್ಲಿ ಬೀಗರಿಗೆ– ಸಂಬಂಧಿಕರಿಗೆ ಯಾವುದೇ ಉಡುಗೊರೆ ಕೊಟ್ಟಿಲ್ಲ ಹಾಗೂ ತೆಗೆದುಕೊಂಡಿಲ್ಲ ಎಂದು ವರನ ಕಾಕಾ ಪ್ರಗತಿಪರ ರೈತ ಬಾಗಪ್ಪಗೌಡ ಪಾಟೀಲ ಹೇಳಿದರು.

ಹಳ್ಳಿ ಊಟವನ್ನು ತಯಾರಿಸಲಾಗಿತ್ತು. ಸಜ್ಜಿ ರೊಟ್ಟಿ, ಹುಳಿಬಾನ, ಬದನೆಕಾಯಿ ಪಲ್ಲೆ, ಶೇಂಗಾ ಚಟ್ನಿ, ಅಗಸಿ ಚಟ್ನಿ, ಅನ್ನ ಸಾರು ಜವಾರಿ ಊಟವನ್ನು ಎಲ್ಲರೂ ಸವಿದರು. ಬಸವಕೇಂದ್ರ ನಾಗರಹಳ್ಳಿ ಗ್ರಾಮದ ನಾನಾಗೌಡ ಪಾಟೀಲ, ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ, ಪ್ರಗತಿಪರ ರೈತ ಮಾಂತೂ ಉಪ್ಪಿನ, ನಿಂಗನಗೌಡ ಪಾಟೀಲ ಮೋರಟಗಿ, ಸಿದ್ರಾಮಪ್ಪ ಸಾಹು ಚಿಂಚೋಳಿ, ಶಾಂತಗೌಡ ಬಿರಾದಾರ ಮುಂತಾದ ನೂರಾರು ಜನರಿಗೆ ವಧು–ವರರು ಸೀತಾಫಲ ಸಸಿ ನೀಡಿ ಗೌರವಿಸಿದರು.

ಶ್ರೀಮಂತ ರೈತ ತನ್ನ ಮಗನ ವಿವಾಹವನ್ನು ಅತ್ಯಂತ ಸರಳವಾಗಿ ಮಾಡಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಿರುವುದು ಎಲ್ಲರಿಗೂ ಮಾದರಿ.
- ಸಿದ್ರಾಮಪ್ಪ ರಂಜಣಗಿ,ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.