ವಿಜಯಪುರ: ‘ಭಾರತ ಹಿಂದೂ ರಾಷ್ಟ್ರವಾಗಲು ಇನ್ನೇನೂ ಬಾಕಿಯಿದೆ’ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯರೂ ಆದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರಶ್ನಿಸಿದರು.

‘ಭಾರತದಲ್ಲಿ ಬಹುಸಂಖ್ಯಾತರಾದ ಹಿಂದುಗಳು ಅಭಿಮಾನದಿಂದ ನಮ್ಮದು ಹಿಂದು ರಾಷ್ಟ್ರ ಎಂದು ಹೇಳಿಕೊಳ್ಳುವುದರಲ್ಲಿ ತಪ್ಪೇನಿದೆ? ಹಾಗೆ ಕರೆಯಲು ಹೆಮ್ಮೆಯಾಗುತ್ತದೆ. ಹಿಂದುಗಳಾದ ನಾವು ನಮ್ಮ ದೇಶವನ್ನು ಹಿಂದೂಸ್ತಾನ, ಹಿಂದೂರಾಷ್ಟ್ರ ಎಂದು ಹೇಳಿಕೊಳ್ಳಬಾರದು ಎಂದು ಯಾವ ಸಂವಿಧಾನದಲ್ಲೂ ಹೇಳಿಲ್ಲ’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ಈ ಹಿಂದೂಸ್ತಾನದಲ್ಲಿ ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ ಸೇರಿದಂತೆ ಎಲ್ಲ ಧರ್ಮೀಯರಿಗೆ ಅವಕಾಶ ಇದೆ. ಸ್ವಾತಂತ್ರ ಪೂರ್ವದಿಂದಲೂ ಎಲ್ಲ ಧರ್ಮೀಯರಿಗೂ ಹಿಂದೂಸ್ತಾನ ಆಶ್ರಯ ಕೊಟ್ಟಿದೆ.

‘ಪಾಕಿಸ್ತಾನ, ಅಪಘಾನಿಸ್ತಾನದ ರೀತಿ ಭಾರತ ನಾಶವಾಗಲು ಮತೀಯ ನೆಲೆಯಲ್ಲಿ ಕಟ್ಟಿದ ದೇಶ ಭಾರತವಲ್ಲ. ಮತೀಯ ಆಧಾರದ ಮೇಲೆ ಉದಯವಾದ ರಾಷ್ಟ್ರಗಳು ನಾಶವಾಗಿವೆಯೇ ಹೊರತು ಧರ್ಮದ ಆಧಾರದ ಮೇಲೆ ನೆಲೆ ನಿಂತಿರುವ ರಾಷ್ಟ್ರಗಳು ನಾಶವಾಗಲಾರವು ಎಂದು ಹೇಳಿದರು.

ಹುಬ್ಬಳ್ಳಿಯ ಶ್ರೀಕಾಂತ ಪೂಜಾರಿ ತಪ್ಪಿತಸ್ಥನಾಗಿದ್ದರೆ ಶಿಕ್ಷಿಸುವುದು ತಪ್ಪಲ್ಲ. ಆದರೆ ರಾಮಮಂದಿರ ಉದ್ಘಾಟನೆ ವೇಳೆ ಬಂಧಿಸಿರುವುದು ತಪ್ಪು ಸಂದೇಶ ಕೊಡುತ್ತದೆ. ಈ ಬಗ್ಗೆ ಸರ್ಕಾರ ಜಾಗ್ರತೆ ವಹಿಸಬೇಕಿತ್ತು

-ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪೇಜಾವರಮಠ ಉಡುಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.