ಶಹಾಪುರ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಗುಣಮಟ್ಟದ ಹತ್ತಿ ಉತ್ಪನ್ನ ಖರೀದಿಸಲು ತಾಲ್ಲೂಕಿನಲ್ಲಿ 14 ಕೇಂದ್ರಗಳ ಸ್ಥಾಪನೆಗೆ ಅನುಮತಿ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

ತಾಲ್ಲೂಕಿನ ಹುಲಕಲ್ ಗ್ರಾಮ ಬಳಿ ಮಣಿಕಂಠ ಹತ್ತಿ ಮಿಲ್ನಲ್ಲಿ ಹತ್ತಿ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಹತ್ತಿ ಖರೀದಿ ಕೇಂದ್ರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು. ಅಧಿಕೃತ ಹತ್ತಿ ಕೇಂದ್ರಗಳಲ್ಲಿ ಮಾತ್ರ ರೈತರು ಹತ್ತಿ ಮಾರಾಟ ಮಾಡಬೇಕು. ಅಕ್ರಮ ಖರೀದಿದಾರರಿಗೆ ಹತ್ತಿ ಮಾರಾಟ ಮಾಡಿ ವಂಚನೆಗೆ ಒಳಗಾಗಬೇಡಿ. ರೈತರು ಎಚ್ಚರಿಕೆಯಿಂದ ಹತ್ತಿ ಮಾರಾಟ ಮಾಡಬೇಕು, ಸರ್ಕಾರದಿಂದ ತೆರೆದ ಇಂತಹ ಕೇಂದ್ರಗಳಲ್ಲಿ ಹತ್ತಿ ಮಾರಾಟ ಮಾಡಬಹುದು. ಆದರೆ, ನಿಯಮ ಅನ್ವಯವಿದೆ. ಕ್ವಿಂಟಲ್ಗೆ ₹7,521 ಬೆಲೆ ನಿಗದಿಪಡಿಸಲಾಗಿದೆ. ಒಂದು ಎಕರೆಗೆ 12 ಕ್ವಿಂಟಲ್ ಹತ್ತಿ ಮಾರಾಟ ಮಾಡಬಹುದಾಗಿದೆ ಎಂದರು.

ಹತ್ತಿ ಮಿಲ್ ಮಾಲೀಕ ಗುರು ಮಣಿಕಂಠ ಮಾತನಾಡಿ, ದೇಶದಲ್ಲಿಯೇ ಸಗರನಾಡು ಭಾಗದ ಹತ್ತಿ ಬೆಳೆ ಉತ್ಕೃಷ್ಟವಾಗಿದೆ. ಇಲ್ಲಿನ ಭಾಗದ ಹತ್ತಿಗೆ ಹೆಚ್ಚಿನ ಬೆಲೆ ಇದ್ದು, ರೈತರು ಹತ್ತಿ ಹೆಚ್ಚೆಚ್ಚು ಬೆಳೆಯುವಲ್ಲಿ ಮುತುವರ್ಜಿವಹಿಸಬೇಕಿದೆ ಎಂದರು.

ನಿಗಮದ ತಾಲ್ಲೂಕು ಅಧಿಕಾರಿ ಕಿರಣ ಪುರೋಹಿತ, ರೈತ ಮುಖಂಡ ಕಾಂತು ಪಾಟೀಲ, ಶರಣಬಸಪ್ಪ ಮಂದ್ರವಾಡ, ಎಪಿಎಂಸಿ ಅಧ್ಯಕ್ಷೆ ಬಸಮ್ಮ ಊರಕೋಲ ಸಗರ, ಶರಣು ಬಿ.ಗದ್ದುಗೆ, ಎಪಿಎಂಸಿ ಉಪಾಧ್ಯಕ್ಷ ಬಸವರಾಜ ಹಯ್ಯಾಳ, ಮುಖಂಡರಾದ ಸಿದ್ಲಿಂಗಣ್ಣ ಆನೇಗುಂದಿ, ಶಿವಮಹಾಂತ ಚಂದಾಪುರ, ಜಿಲ್ಲಾ ಕಾಂಗ್ರೆಸ್ ವಕ್ತಾರ ಮಲ್ಲಪ್ಪ ಗೋಗಿ,ಶರಣು ಮಂದರವಾಡ, ಚಂದಪ್ಪ ಸೇರಿ, ಭೀಮಾಶಂಕರ ಹುಲಕಲ್ ಉಪಸ್ಥಿತರಿದ್ದರು.

ದೇವರ ಕೃಪೆಯಿಂದ ಆಣೆಕಟ್ಟುಗಳಲ್ಲಿ ನೀರಿನ ಲಭ್ಯತೆ ಇದೆ. ರೈತರು ಗೊಂದಲ ಮಾಡಿಕೊಳ್ಳದೇ ನಿಗಮದ ಮಾನದಂಡ ಅನುಸರಿಸಿಕೊಂಡು ವಾರಬಂದಿ ಮೂಲಕ ಸರಿಯಾಗಿ ನೀರು ನಿರ್ವಹಣೆ ಮಾಡಿಕೊಂಡರೆ ಮುಂದಿನ ಬೆಳೆಗೆ ನೀರಿನ ಅನುಕೂಲವಾಗಲಿದೆ
-ಸಚಿವ ಶರಣಬಸ್ಸಪ್ಪ ದರ್ಶನಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.