ಯಾದಗಿರಿ: ಮೂರು ತಿಂಗಳ ಹಿಂದೆಯೇ ರಾಜೀನಾಮೆ ನೀಡಿರುವವರನ್ನು ಈಗ ಉಚ್ಚಾಟಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಬುದ್ಧಿಯಿರುವವರು ಯಾರೂ ಹೀಗೆ ಹೇಳಲು ಸಾಧ್ಯವಿಲ್ಲ. ಅವರೆಲ್ಲರೂ ತುರ್ತಾಗಿ ಒಳ್ಳೆಯ ಮನೋವೈದ್ಯರನ್ನು ಕಾಣುವ ಅಗತ್ಯವಿದೆ’ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಉಪಾಧ್ಯಕ್ಷ ಹಾಗೂ ಉತ್ತರ ಕರ್ನಾಟಕದ ಉಸ್ತುವಾರಿ ಕೆ.ಬಿ.ವಾಸು ಹೇಳಿದರು.

ಆಗಸ್ಟ್ 1ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಎಲ್ಲ ರಾಜಕೀಯ ಪಕ್ಷಗಳು ಮತ್ತು ಜನಪರ ಸಂಘಟನೆಗಳು ಸ್ವಾಗತಿಸಿವೆ. ಆದರೆ, ಬಹುಜನ ಸಮಾಜ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರು, ಈ ತೀರ್ಪುನ್ನು ತೀವ್ರವಾಗಿ ವಿರೋಧಿಸಿ, ಈ ತೀರ್ಪನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಮೊರೆಹೋದರು. ಸಾಲದ್ದಕ್ಕೆ, ಈ ತೀರ್ಪಿನ ವಿರುದ್ಧ ನಡೆದ ಅಖಿಲ ಭಾರತ ಬಂದ್ ಅನ್ನು ಬೆಂಬಲಿಸಿದರು’ ಎಂದು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಕಳೆದ 30 ವರ್ಷಗಳಿಂದ ಒಳ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟ ಬೆಂಬಲಿಸುತ್ತ ಬಂದಿರುವ ಬಹುಜನ ಸಮಾಜ ಪಾರ್ಟಿಯ ಕಾರ್ಯಕರ್ತರಾದ ನಮಗೆ, ಮಾಯಾವತಿಯವರ ವರ್ತನೆಯು ಆಘಾತ ಉಂಟು ಮಾಡಿತು. ಅವರ ಈ ಒಳಮಿಸಲಾತಿ ನಿಲುವು ವಿರೋಧಿಸಿ, ಬಹುಜನ ಸಮಾಜ ಪಾರ್ಟಿಯ ರಾಜ್ಯ ಅಧ್ಯಕ್ಷರಾಗಿದ್ದ ಮಾರಸಂದ್ರ ಮುನಿಯಪ್ಪ, ರಾಜ್ಯ ಸಂಯೋಜಕರಾಗಿದ್ದ ಎಂ.ಗೋಪಿನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್. ಮುನಿಯಪ್ಪ ಮುಂತಾದ ಹಿರಿಯ ರಾಜ್ಯ ಮುಖಂಡರು ಮತ್ತು ರಾಜ್ಯಪ್ರಧಾನ ಕಾರ್ಯದರ್ಶಿಯಾಗಿ ಕೆ.ಬಿ.ವಾಸು ಸೇರಿದಂತೆ ಸುಮಾರು 25 ಜಿಲ್ಲೆಗಳ ಜಿಲ್ಲಾ ಘಟಕದ ಅಧ್ಯಕ್ಷರು ಬಹುಜನ ಸಮಾಜ ಪಾರ್ಟಿಗೆ ಆಗಸ್ಟ್ 31ರಂದು ಸಾಮೂಹಿಕ ರಾಜೀನಾಮೆ ನೀಡಿ ಮಾಯಾವತಿ ಅವರಿಗೆ ಪತ್ರ ರವಾನಿಸಿದ್ದೆವು’ ಎಂದರು.

‘ಸಾಮಾಜಿಕ ನ್ಯಾಯದ ಪರವಿರುವ ನಾವು ಹೊಸದಾಗಿ ‘ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ’ಯನ್ನು ಸೆಪ್ಟೆಂಬರ್ 9, 2024ರಂದು ಸ್ಥಾಪಿಸಿದೆವು. ಬಹುಜನ ಸಮಾಜ ಪಾರ್ಟಿಯ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಿಸಲ್ಪಟ್ಟಿರುವ ಎಂ.ಕೃಷ್ಣಮೂರ್ತಿಯವರು ಯಾದಗಿರಿಗೆ ಬಂದು ಕೆ.ಬಿ.ವಾಸು ಮತ್ತು ದಾದು ಅವರನ್ನು ಬಹುಜನ ಸಮಾಜ ಪಾರ್ಟಿಯಿಂದ ಉಚ್ಚಾಟಿಸಲಾಗಿದೆ ಎಂಬ ಹೇಳಿಕೆ ನೀಡಿರುವುದು ಹಾಸ್ಯಾಸ್ಪದವಾಗಿದೆ’ ಎಂದು ಹೇಳಿದರು.

ನೂತನ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಕರೀಂ(ದಾದು) ಹಾಗೂ ಪ್ರಕಾಶ ಮೌರ್ಯ, ಭೀಮರಾಯ ಗಿರಿ, ಮಹಾದೇವಪ್ಪ, ಮಲ್ಲಿಕಾರ್ಜುನ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.