ವಡಗೇರಾ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಹತ್ತಿ ಬಿಡಿಸಲು ಕೂಲಿ ಕಾರ್ಮಿಕರು ಸಿಗದೆ ಇರುವುದರಿಂದ ರೈತರು ಕಂಗಾಲಾಗಿದ್ದಾರೆ.

ತಾಲ್ಲೂಕು ವ್ಯಾಪ್ತಿಯಲ್ಲಿ ಮುಂಗಾರು ವೇಳೆ ನಾಟಿ ಮಾಡಿದ ಹತ್ತಿ ಈಗ ಬಿಡಿಸಲು ಬಂದಿದೆ. ಕೂಲಿ ಕಾರ್ಮಿಕರ ಕೊರತೆಯಿಂದಾಗಿ ದೂರದ ಕೊಸರ್ಗಿ, ಯಾದಗಿರಿ, ಮಹಲರೋಜಾ, ಹತ್ತಿಕುಣಿ, ಕಾಡಂಗೇರಾ ಹಾಗೂ ಇನ್ನಿತರ ಪ್ರದೇಶಗಳಿಂದ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಬಂದು ಹತ್ತಿ ಬಿಡಿಸುವ ಅನಿವಾರ್ಯ ಎದುರಾಗಿದೆ.

ಕೂಲಿ ಕಾರ್ಮಿಕರಿಗೆ ಭಾರಿ ಬೇಡಿಕೆ: ದೂರದ ಪ್ರದೇಶಗಳಿಂದ ಕೂಲಿ ಕಾರ್ಮಿಕರನ್ನು ಖಾಸಗಿ ವಾಹನಗಳಾದ ಟಂಟಂ, ಆಟೊ, ಟ್ರ್ಯಾಕ್ಟರ್ಗಳಲ್ಲಿ ಅವರ ಮನೆಗಳಿಗೆ ತೆರಳಿ ಕರೆದುಕೊಂಡು ಬರುತಿದ್ದಾರೆ. ಹತ್ತಿ ಬಿಡಿಸಿದ ನಂತರ ಸಂಜೆ ಅದೇ ವಾಹನದಲ್ಲಿ ಕೂಲಿ ಕಾರ್ಮಿಕರನ್ನು ಅವರ ಮನೆಗಳಿಗೆ ಬಿಟ್ಟು ಬರಬೇಕು.

ಕೆಜಿಗೆ ₹10–₹12: ಕೂಲಿ ಕಾರ್ಮಿಕರ ಕೊರತೆಯಿಂದ ಕಾರ್ಮಿಕರು ಒಂದು ಕೆಜಿ ಹತ್ತಿ ಬಿಡಿಸಿದರೆ ಅವರಿಗೆ ₹10ರಿಂದ ₹12 ಕೊಡಬೇಕು. ಪ್ರತಿ ಕೂಲಿ ಕಾರ್ಮಿಕರು ಒಂದು ದಿನಕ್ಕೆ ಸರಾಸರಿ ಸುಮಾರು 70ರಿಂದ 80 ಕೆಜಿ ಹತ್ತಿ ಬಿಡಿಸುವ ಮೂಲಕ ₹700ರಿಂದ ₹800 ಸಂಪಾದನೆ ಮಾಡುತ್ತಾರೆ. ಇದರಲ್ಲಿ ಮಹಿಳಾ ಹಾಗೂ ಪುರುಷ ಕಾರ್ಮಿಕರು ಕೆಲಸ ಮಾಡುತ್ತಾರೆ.

ರೈತರು ಜಮೀನುಗಳಲ್ಲಿ ಬೆಳೆದ ಹತ್ತಿಯನ್ನು ಬಿಡಿಸಲು ಕೂಲಿ ಕಾರ್ಮಿಕರನ್ನು ಕರೆದುಕೊಂಡು ಬರಲು ರೈತರು ಹರಸಾಹಸ ಪಡುತಿದ್ದಾರೆ. ಕೂಲಿ ಕಾರ್ಮಿಕರು ಎಷ್ಟು ಕೂಲಿಯನ್ನು ಕೇಳುತ್ತಾರೆ, ಅಷ್ಟು ಕೂಲಿಯನ್ನು ಕೊಡಲು ರೈತರು ಸಿದ್ಧರಿದ್ದರೂ ಸಹ ಸಮಯಕ್ಕೆ ಸರಿಯಾಗಿ ಕಾರ್ಮಿಕರು ಸಿಗುತ್ತಿಲ್ಲ.

ಅಕಾಲಿಕ ಮಳೆ ಬಂದರೆ ಜಮೀನುಗಳಲ್ಲಿ ಒಣಗಿ ನಿಂತ ಹತ್ತಿ ಬೆಳೆ ಸಂಪೂರ್ಣವಾಗಿ ಹಾಳಾಗುತ್ತದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ ಎಂಬ ಆತಂಕದಿಂದ ಕೂಲಿ ಕಾರ್ಮಿಕರನ್ನು ಬೇರೆಡೆಯಿಂದ ಕರೆದುಕೊಂಡು ಬಂದು ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಹತ್ತಿಯನ್ನು ಬಿಡಿಸಿಕೊಳ್ಳುತಿದ್ದಾರೆ.

8 ಎಕರೆ ಜಮೀನಿನಲ್ಲಿ ಹತ್ತಿ ಬೆಳೆದಿದ್ದು ಹತ್ತಿ ಬಿಡಿಸಲು ಕಾರ್ಮಿಕರು ಸಿಗುತ್ತಿಲ್ಲ. ದೂರದ ಕೋಸರ್ಗಿಯಿಂದ ಕಾರ್ಮಿಕರನ್ನು ಕರೆದುಕೊಂಡು ಬಂದಿದ್ದೇನೆ
ದೇವಪ್ಪ ಕೊದ್ದಡ್ಡಿ ಪ್ರಗತಿಪರ ರೈತ ವಡಗೇರಾ

ತಾಲ್ಲೂಕಿನ ವ್ಯಾಪ್ತಿಯಲ್ಲಿ ಬೆಳೆದ ಹತ್ತಿ ಇಳುವರಿ ಚೆನ್ನಾಗಿ ಬಂದಿದೆ. ಹತ್ತಿ ಬಿಡಿಸಲು ಕಾರ್ಮಿಕರ ಕೊರತೆ ಇರುವುದರಿಂದ ಹತ್ತಿ ಬಿಡಿಸುವದು ಹೇಗೆ ಎಂಬ ಚಿಂತೆ ಕಾಡುತ್ತಿದೆ
ಅಬ್ದುಲ್ ಖತಾಲಿ ಗ್ರಾಮ ಪಂಚಾಯಿತಿ ಸದಸ್ಯ

ಪಾಲಕರು ತಮ್ಮ ಮಕ್ಕಳನ್ನು ಹತ್ತಿ ಬಿಡಿಸಲು ಕರೆದುಕೊಂಡು ಹೋಗುತ್ತಿರುವುದರಿಂದ ಶಾಲೆಗಳಲ್ಲಿ ಮಕ್ಕಳ ಹಾಜರಾತಿಯೂ ಕಡಿಮೆಯಾಗಿದೆ
ಹೆಸರು ಹೇಳಲು ಇಚ್ಚಿಸದ ಮುಖ್ಶಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.