ಹುಣಸಗಿ: ತಾಲ್ಲೂಕಿನ ಗ್ರಾಮವೊಂದರಲ್ಲಿ ದಲಿತ ಬಾಲಕಿ ಅತ್ಯಾಚಾರ ಹಾಗೂ ದಿನಸಿ ನೀಡದ ಪ್ರಕರಣವನ್ನು ಖಂಡಿಸಿ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ನರಸಪ್ಪ ದಂಡೋರ ಅವರ ನೇತೃತ್ವದಲ್ಲಿ ನೂರಾರು ಸಮುದಾಯದ ಮುಖಂಡರು ಪಾದಯಾತ್ರೆ ನಡೆಸಿದರು.

ಮಧ್ಯಾಹ್ನ ಪಾದಯಾತ್ರೆಯ ಮೂಲಕ ಸಂತ್ರಸ್ಥರ ಮನೆಗೆ ಭೇಟಿ ನೀಡಿ ಸಮಸ್ಯೆ ಕುರಿತು ಮಾಹಿತಿ ಪಡೆದುಕೊಂಡು ಸಾಂತ್ವನ ಹೇಳಿದರು.

ಬಳಿಕ ರಾಜ್ಯಾಧ್ಯಕ್ಷ ನರಸಪ್ಪ ದಂಡೋರ ಮಾತನಾಡಿ, ಸಂತ್ರಸ್ತರ ಜತೆ ಯಾರು ಇಲ್ಲವೆಂದು ತಿಳಿದರೆ ಒಳ್ಳೆಯದಲ್ಲ. ರಾಜ್ಯದಲ್ಲಿ ಲಕ್ಷಾಂತರ ದಲಿತರು ಜೊತೆಗಿದ್ದಾರೆ. ಸುರಪುರ ಮತಕ್ಷೇತ್ರದಲ್ಲಿ 40 ಸಾವಿರಕ್ಕೂ ಅಧಿಕ ಸಮುದಾಯದವರಿದ್ದಾರೆ ಎಂದರು.

ಎರಡು ದಿನದಲ್ಲಿ ಆರೋಪಿಗಳನ್ನು ಬಂಧಿಸದಿದ್ದರೆ ಯಾದಗಿರಿ ಜಿಲ್ಲೆ ಬಂದ್ ಗೆ ಕರೆ ನೀಡುವುದಾಗಿ ಎಚ್ಚರಿಸಿದರು. ಅವಶ್ಯಬಿದ್ದರೆ ರಾಜ್ಯದಾದ್ಯಂತ ಹೋರಾಟ ಮಾಡುವುದಾಗಿ ಹೇಳಿದರು.

ರಾಜ್ಯ ಉಪಾಧ್ಯಕ್ಷ ಗಣೇಶ ದುಪ್ಪಲ್ಲಿ ಮಾತನಾಡಿ, ಪೊಲೀಸರು ಆರೋಪಿಗಳಿಗೆ ಬಂಧಿಸಿ ಕಾನೂನಿನ ಶಿಕ್ಷೆ ನೀಡಿದಾಗ ಮಾತ್ರ ಇಂತಹ ಪ್ರಕರಣಗಳು ಕಡಿಮೆಯಾಗುತ್ತವೆ ಎಂದರು.

ಕುಮ್ಮಕ್ಕು ನೀಡಿರುವವರನ್ನು ಬಂಧಿಸುವರೆಗೂ ನಾವು ಗ್ರಾಮ ಬಿಟ್ಟು ಹೋಗುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ಡಿವೈಎಸ್ಪಿ ದೂರವಾಣಿಯಲ್ಲಿ ಮಾತನಾಡಿ ಆರೋಪಗಳನ್ನು ಶೀಘ್ರವೇ ಬಂಧಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು.

ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಕಾಶಪ್ಪ ಹೆಗ್ಗಣಗೇರಾ,ಮಾನಪ್ಪ ಕಟ್ಟಿಮನಿ,ಅಮಲಪ್ಪ ಹಳ್ಳಿ,ಪವಾಡಪ್ಪ ಮ್ಯಾಗೇರಿ,ಶಿವಪ್ಪ ಸದಬ,ದೇವರಾಜ ಹೊರಟ್ಟಿ,ಮಾನಪ್ಪ ಮೇಸ್ತ್ರು, ಸಿದ್ದು ಮೇಲಿನಮನಿ, ಬಸವರಾಜ ದೊಡ್ಡಮನಿ, ನಂದಪ್ಪ ಪೀರಾಪೂರ, ಬಸವರಾಜ ಕಾಮನಟಗಿ, ಕಾಶಿನಾಥ ಹಾದಿಮನಿ,ಭೀಮು, ಸಂಗಮೇಶ ಮಾಸ್ತರ,ಚೆನ್ನಪ್ಪ ತೀರ್ಥ, ಮಹಾಂತೇಶ ದೊಡ್ಡಮನಿ, ಸೋಮಶೇಖರ ಆನೇಕಿ, ಸೋಮಶೇಖರ ಕಕ್ಕೇರಾ,ಮಲ್ಲಿಕಾರ್ಜುನ ವಜ್ಜಲ್, ಮಲ್ಲು ದೇವಾಪೂರ, ಹುಸನಪ್ಪ ಮತ್ತಿತರರು ಹಾಜರಿದ್ದರು.

ಸಿಪಿಐ ಸಚಿನ್ ಚಲವಾದಿ, ನಾರಾಯಣಪುರ ಪಿಎಸ್ಐ ರಾಜಶೇಖರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.