ಶಾಲೆಯ ಗೇಟ್ ಹತ್ತಿರದ ಹಳೇ ಶೌಚಾಲಯ ಕಟ್ಟಡಗಳ ಬಾಗಿಲುಗಳು ಮುರಿದಿವೆ
ಶಾಲೆಯಲ್ಲಿನ ನೂತನ ಶೌಚಾಲಯ ಸಂಕೀರ್ಣದ ಒಳಗಿನ ಪ್ರತ್ಯೇಕ ಶೌಚಕೋಣೆಗಳಿಗಿಲ್ಲ ಬಾಗಿಲು
ಶಾಲೆಯ ಶೌಚಾಲಯಗಳು ಬಳಕೆಗೆ ಯೋಗ್ಯವಿಲ್ಲ. ಶೌಚಕ್ಕೆ ತೆರಳಬೇಕಾದರೆ ಹಿಂದಿನ ಗುಡ್ಡಕ್ಕೆ ಹೋಗುತ್ತೇವೆ. ಅಲ್ಲಿ ಚೇಳು ಹುಳ ಹಾವುಗಳೂ ಕಾಣುತ್ತವೆ. ಅದಕ್ಕಾಗಿ ಶಾಲೆಯಲ್ಲಿದ್ದಾಗ ನೀರು ಕುಡಿಯಲೂ ಹಿಂಜರಿಕೆಯಾಗುತ್ತದೆ
ಸ್ಮಿತಾ (ಹೆಸರು ಬದಲಿಸಿದೆ) ವಿದ್ಯಾರ್ಥಿನಿ
ಶಾಲೆಯಲ್ಲಿ ನೀರಿನ ಸಮಸ್ಯೆ ತುಂಬಾಯಿದೆ. ಮಧ್ಯಾಹ್ನ ಊಟದ ನಂತರ ತಟ್ಟೆ ತೊಳೆಯಲು ಶಾಲೆಯ ಹೊರಗೆ ಹೋಗಿ ಬೇರೆಡೆ ನೀರು ಪಡೆದು ತಟ್ಟೆ ತೊಳೆದುಕೊಂಡು ಬರುತ್ತೇವೆ
ವಿಶ್ವಾಸ (ಹೆಸರು ಬದಲಿಸಿದೆ) ವಿದ್ಯಾರ್ಥಿ
ಒಂದೇ ರೂಮ್‌ನಲ್ಲಿ ನೂರು ಜನ ಕೂತು ಪಾಠ ಕೇಳುತ್ತೇವೆ. ಅಲ್ಲಿ ಅಷ್ಟುಜನ ಕೂಡಲೂ ಜಾಗವಿರಲ್ಲ. ಆದರೂ ಹಾಗೇ ಕೂಡುತ್ತೇವೆ ಮತ್ತು ಪಾಠ ಕೇಳುತ್ತೇವು
ವಿನೋದ್ (ಹೆಸರು ಬದಲಿಸಿದೆ) ವಿದ್ಯಾರ್ಥಿ
ನಮ್ಮ ಶಾಲೆಯ ಶೌಚಾಲಯ ಸಮಸ್ಯೆಯನ್ನು ಬಗೆಹರಿಸಲು ಮತ್ತು ತಡೆಗೋಡೆ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ ನೀಡಿದ್ದಾರೆ. ಟೆಂಡರ್ ಕರೆಯಲಾಗಿದ್ದು ಶೀಘ್ರದಲ್ಲೇ ಕೆಲಸ ಪ್ರಾರಂಭಿಸುವುದಾಗಿ ಎಸ್‌ಡಿಎಂಸಿ ಅಧ್ಯಕ್ಷರು ತಿಳಿಸಿದ್ದಾರೆ