ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ | ಸ್ಥಳೀಯ ಸಂಸ್ಥೆಗಳಲ್ಲಿ ಮಾರ್ಗಸೂಚಿ ನಾಮಫಲಕಗಳ ಕೊರತೆ

Published : 18 ನವೆಂಬರ್ 2024, 4:18 IST
Last Updated : 18 ನವೆಂಬರ್ 2024, 4:18 IST
ಫಾಲೋ ಮಾಡಿ
Comments
ಯಾದಗಿರಿಯ ಎಸ್‌ಡಿಎನ್ ಹೋಟೆಲ್‌ನ ಮುಂಭಾಗದಲ್ಲಿರುವ ರಸ್ತೆಯಲ್ಲಿ ಬಡಾವಣೆಯ ಕುರಿತ ನಾಮಫಲಕ ಅಳವಡಿಸಿಲ್ಲ
ಯಾದಗಿರಿಯ ಎಸ್‌ಡಿಎನ್ ಹೋಟೆಲ್‌ನ ಮುಂಭಾಗದಲ್ಲಿರುವ ರಸ್ತೆಯಲ್ಲಿ ಬಡಾವಣೆಯ ಕುರಿತ ನಾಮಫಲಕ ಅಳವಡಿಸಿಲ್ಲ
ಶಹಾಪುರ ನಗರದ ಜೀಹ್ವೇಶ್ವರ ಬಡಾವಣೆಯ ಪ್ರದೇಶದಲ್ಲಿ ನಗರಸಭೆಯು ನಾಮಫಲಕ ಅಳವಡಿಸಿರುವುದು
ಶಹಾಪುರ ನಗರದ ಜೀಹ್ವೇಶ್ವರ ಬಡಾವಣೆಯ ಪ್ರದೇಶದಲ್ಲಿ ನಗರಸಭೆಯು ನಾಮಫಲಕ ಅಳವಡಿಸಿರುವುದು
ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿ ಆಯಾ ವಾರ್ಡ್‌ಗಳ ಸೂಚಿಸುವ ನಾಮಫಲಕ ಅಳವಡಿಕೆಗೆ ಚಿಂತನೆ ಇದ್ದು ಮುಂದಿನ ದಿನಗಳಲ್ಲಿ ಕಾರ್ಯಗತಗೊಳಿಸಲಾಗುವುದು
ಲಲಿತಾ ಅನಪುರ ನಗರಸಭೆ ಅಧ್ಯಕ್ಷೆ ಯಾದಗಿರಿ
ಕಕ್ಕೇರಾ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿದ್ದು ನಾಮಫಲಕಗಳ ಅವಶ್ಯವಿದೆ. ನಾಮಫಲಕ ಅಳವಡಿಸುವುದರಿಂದ ಪ್ರಯಾಣಿಕರಿಗೆ ಸೇರಿದಂತೆ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗುತ್ತದೆ
ರಾಜೂ ಹವಾಲ್ದಾರ್ ಪುರಸಭೆ ಸದಸ್ಯ ಕಕ್ಕೇರಾ
ನಾಮಫಲಕ ಅಳವಡಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದೆ. ಕೆಲ ಬಡಾವಣೆಗೆ ಫಲಕ ಅಳವಡಿಸಿದೆ. ಉಳಿದ ಬಡಾವಣೆಗಳಿಗೆ ಫಲಕ ಹಾಕಲಾಗುವುದು
ರಮೇಶ ಬಡಿಗೇರ ಪೌರಾಯುಕ್ತ ಶಹಾಪುರ
ನಮ್ಮ ಭಾಗದಲ್ಲಿ ವಾರ್ಡ್‌ಗಳಿಗೆ ಹಿಂದಿನಿಂದಲೂ ನಾಮಫಲಕ ಹಾಕುತ್ತಿಲ್ಲ. ನಾಮಫಲಕ ಅಳವಡಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು
ಜೀವನಕುಮಾರ ಕಟ್ಟಿಮನಿ ಪೌರಾಯುಕ್ತ ಸುರಪುರ
‘ನಾಮಫಲಕ ಅಳವಡಿಸುವ ಭಾಗ್ಯವಿಲ್ಲ’ ‌
ಶಹಾಪುರ: ನಗರದ ಬೀದರ್‌-ಶ್ರೀರಂಗಪಟ್ಟಣ ಹೆದ್ದಾರಿಗೆ ಹೊಂದಿಕೊಂಡ ಹಾಗೂ ಬಸವೇಶ್ವರ ನಗರ ಹೀಗೆ ಬೆರಳೆಣಿಕೆ ಬಡಾವಣೆಗಳಿಗೆ ನಗರಸಭೆಯು ನಾಮಫಲಕ ಅಳವಡಿಸಿದೆ. ಆದರೆ ಇನ್ನುಳಿದ ಬಡಾವಣೆಗಳಿಗೆ ಫಲಕ ಅಳವಡಿಸುವ ಭಾಗ್ಯ ಕೂಡಿ ಬಂದಿಲ್ಲ ಎನ್ನುತ್ತಾರೆ ನಗರದ ಜನತೆ. ಆಯಾ ಬಡಾವಣೆಯ ಪ್ರಮುಖ ದಾರಿಯಲ್ಲಿ ನಾಮಫಲಕ ಅಳವಡಿಸಿ ವಾರ್ಡ್ ನಂಬರ್‌ ವ್ಯಾಪ್ತಿಯಲ್ಲಿ ಬರುವ ಬಡಾವಣೆಯ ಹೆಸರು ಎಷ್ಟು ಮನೆಗಳು ಇವೆ. ಮತದಾರರ ಸಂಖ್ಯೆ ಹೀಗೆ ಸಮಗ್ರವಾದ ಮಾಹಿತಿಯನ್ನು ಒಳಗೊಂಡ ಮಾದರಿ ಬಗೆಯ ನಾಮಫಲಕವನ್ನು ಅಳವಡಿಸಿದರೆ ಜನತೆಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂಬ ಸಲಹೆಯನ್ನು ನಗರದ ನಿವಾಸಿ ರವಿ ಹಿರೇಮಠ ನೀಡಿದರು.
ಸುರಪುರ: ವಾರ್ಡ್‌ಗಳಿಗೆ ನಾಮಫಲಕ ಇಲ್ಲ
ಸುರಪುರ: ಸುರಪುರ ನಗರ ದಿನೇ ದಿನೇ ಬೆಳೆಯುತ್ತಿದ್ದು ಸದ್ಯ 31 ವಾರ್ಡ್‌ಗಳಿವೆ. ಯಾವುದೇ ವಾರ್ಡ್‌ಗೆ ನಾಮಫಲಕ ಹಾಕಿಲ್ಲ. ವಾರ್ಡ್‌ಗಳ ವಿಂಗಡಣೆ ಬೇಕಾಬಿಟ್ಟಿಯಾಗಿ ಮಾಡಿದ್ದು ಯಾವ ಬಡಾವಣೆ ಯಾವ ವಾರ್ಡ್‌ನಲ್ಲಿ ಇದೆ ಎಂಬುದೇ ತಿಳಿಯುತ್ತಿಲ್ಲ. ನಾಮಫಲಕ ಅಳವಡಿಸುವ ಬಗ್ಗೆ ಇದುವರೆಗೂ ಯಾರೂ ಚಕಾರ ಎತ್ತಿಲ್ಲ. ನಗರಸಭೆ ಸಾಮಾನ್ಯ ಸಭೆಯಲ್ಲೂ ಈ ಬಗ್ಗೆ ಚರ್ಚೆ ಆಗಿಲ್ಲ. ಹೀಗಾಗಿ ನಾಮಫಲಕ ಅಳವಡಿಸುವ ಬಗ್ಗೆ ಯಾರಿಗೂ ಇಚ್ಛಾಶಕ್ತಿ ಇಲ್ಲ. ಯಾವ ವ್ಯಕ್ತಿಯೂ ತಮ್ಮ ವಿಳಾಸದಲ್ಲಿ ವಾರ್ಡ್ ಸಂಖ್ಯೆ ನಮೂದಿಸುವುದಿಲ್ಲ. ದೇವಸ್ಥಾನದ ಹತ್ತಿರ ವೃತ್ತದ ಹತ್ತಿರ ಎಂದೇ ವಿಳಾಸ ನೀಡುತ್ತಾರೆ. ವಾರ್ಡ್ ವಿವರ ಆ ವಾರ್ಡ್‌ನಲ್ಲಿ ಬರುವ ಮನೆಗಳ ಸಂಖ್ಯೆ ರಸ್ತೆ ಬಗ್ಗೆ ನಗರಸಭೆಯಲ್ಲಿ ಮಾಹಿತಿ ಫಲಕ ಹಾಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT