ಈಗಾಗಲೇ ಜಿಲ್ಲಾ ವಕ್ಫ್ ಅಧಿಕಾರಿಯ ನಿರ್ದೇಶದಂತೆ ತಾಲ್ಲೂಕಿನಲ್ಲಿ ಒಟ್ಟು 169 ವಕ್ಫ್ ಆಸ್ತಿಗಳಿದ್ದು ಅವುಗಳಲ್ಲಿ 119 ವಕ್ಫ್ ಆಸ್ತಿಯ ಸರ್ವೇ ನಂಬರ್‌ಗಳನ್ನು ಈಗಾಗಲೇ ಫ್ಲಾಗ್ ಆಫ್ ಮಾಡಲಾಗಿದೆ. ಪಹಣಿ ಕಾಲಂ 11ರಲ್ಲಿ ವಕ್ಫ್ ಆಸ್ತಿ ಪರಭಾರೆ ನಿಷೇಧಿಸಿದೆ ಎಂದು ಷರಾ ಕೂಡ ಸೇರಿಸಲಾಗಿದೆ. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಜಮೀನುದಾರರು ರಿಟ್ ಅರ್ಜಿ ಸಲ್ಲಿಸಿದ್ದು ಹೈಕೋರ್ಟ್ ನಿರ್ದೇಶನದಂತೆ ತೆಗೆದು ಹಾಕಲಾಗುತ್ತಿದೆ.
ಉಮಾಕಾಂತ ಹಳ್ಳೆ ತಹಶೀಲ್ದಾರ ಶಹಾಪುರ.
ವಕ್ಫ್ ಆಸ್ತಿ ಸೇರ್ಪಡೆಯು 2027-18ರ ಸಾಲಿನಿಂದ ಪ್ರಕ್ರಿಯೆ ಆರಂಭಗೊಂಡಿದೆ. ಈಗ ಅನವಶ್ಯಕವಾಗಿ ಗೊಂದಲ ಉಂಟಾಗಿದೆ. ತಾಲ್ಲೂಕಿನಲ್ಲಿ ಸುಮಾರು 3000 ಎಕರೆ ವಕ್ಫ್ ಆಸ್ತಿ ಇದೆ. ಇದರ ಬಗ್ಗೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಕಾನೂನು ಪ್ರಕಾರ ಹಿಂಪಡೆಯುವ ಪ್ರಕ್ರಿಯೆ ನಡೆದಿದೆ.