ಸುರಪುರ: ‘ನನ್ನ ಹೆಸರನ್ನು ದುರ್ಬಳಿಕೆ ಮಾಡಿಕೊಂಡು ರಾಯಚೂರಿನ ರೇಖಾ ಎಂ.ಎನ್.ಎಂಬ ಮಹಿಳೆ ನೌಕರಿ ಕೊಡಿಸುವುದಾಗಿ ಹೇಳಿ ಜನರನ್ನು ವಂಚಿಸಿದ್ದಾರೆ’ ಎಂದು ಶಾಸಕ ರಾಜೂಗೌಡ ಮಂಗಳವಾರ ಸುರಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

‘ಹಲವು ಜನರ ಬಳಿ ಹಣ ಪಡೆದಿರುವ ಸಾಧ್ಯತೆಯಿದ್ದು, ನನ್ನ ಹೆಸರಿಗೆ ಮಸಿ ಬಳಿಯುವ ಹುನ್ನಾರ ನಡೆದಿದೆ. ನನಗೆ ರೇಖಾ ಎಂಬ ಮಹಿಳೆಯ ಪರಿಚಯವಿಲ್ಲ .ವಂಚನೆ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು’ ಎಂದು ಅವರು ತಿಳಿಸಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಸುನೀಲಕುಮಾರ ಮೂಲಿಮನಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ನನ್ನ ಪರಿಚಯವಿದೆ ಎಂದು ಹೇಳುವವರ ಬಗ್ಗೆ ಜನರು ಜಾಗ್ರತೆ ವಹಿಸಬೇಕು. ಯಾರೂ ವಂಚನೆಗೆ ಒಳಗಾಗಬೇಡಿ. ಮಾಧ್ಯಮಗಳು ಕೂಡಾ ನನ್ನ ಬಗ್ಗೆ ವರದಿ ಮಾಡುವ ಮುನ್ನ ನನ್ನನ್ನು ಸಂಪರ್ಕಿಸಿ ಸತ್ಯಾಸತ್ಯತೆ ಪರಿಶೀಲಿಸಬೇಕು’ ಎಂದು ರಾಜೂಗೌಡ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.