ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುರುಮಠಕಲ್: ಬೀದಿ ನಾಯಿಗಳ ಉಪಟಳಕ್ಕೆ ಜನ ಹೈರಾಣ

ಆತಂಕದಲ್ಲೇ ಓಡಾಡುವ ಪರಿಸ್ಥಿತಿ–ನಿಯಂತ್ರಣಕ್ಕೆ ಸಾರ್ವಜನಿಕರ ಒತ್ತಾಯ
Published : 1 ಸೆಪ್ಟೆಂಬರ್ 2024, 5:06 IST
Last Updated : 1 ಸೆಪ್ಟೆಂಬರ್ 2024, 5:06 IST
ಫಾಲೋ ಮಾಡಿ
Comments
ಗುರುಮಠಕಲ್ ಪಟ್ಟಣದ ಬಸವೇಶ್ವರ ವೃತ್ತ (ಗಂಜ್ ವೃತ್ತ) ರಸ್ತೆಯಲ್ಲಿ ಶನಿವಾರ ಅಡ್ಡಾಡುತ್ತಿದ್ದ ಬೀದಿ ನಾಯಿಗಳ ಹಿಂಡು ವಾಹನ ಸವಾರರಿಗೆ ಅಡ್ಡಿಯಾಗುತ್ತಿರುವುದು.
ಗುರುಮಠಕಲ್ ಪಟ್ಟಣದ ಬಸವೇಶ್ವರ ವೃತ್ತ (ಗಂಜ್ ವೃತ್ತ) ರಸ್ತೆಯಲ್ಲಿ ಶನಿವಾರ ಅಡ್ಡಾಡುತ್ತಿದ್ದ ಬೀದಿ ನಾಯಿಗಳ ಹಿಂಡು ವಾಹನ ಸವಾರರಿಗೆ ಅಡ್ಡಿಯಾಗುತ್ತಿರುವುದು.
ರಸ್ತೆಯಲ್ಲಿ ಎಕಾಎಕಿ ಅಡ್ಡಬರುವ ನಾಯಿಗಳಿಂದಾಗಿ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಮಳೆ ಸುರಿಯುತ್ತಿರುವುದರಿಂದ ನಾಯಿಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಅಪಘಾತಗಳು ಸಂಭವಿಸುತ್ತಿವೆ
ವೆಂಕಟಪ್ಪ ವಾಹನ ಸವಾರ
ರಾತ್ರಿ ವೇಳೆ ಬೇರೆಡೆಯಿಂದ ಬಸ್‌ನಲ್ಲಿ ಬಂದು ಮನೆಗೆ ತೆರಳುವಾಗ ನಾಯಿಗಳ ಉಪಟಳ ಹೆಚ್ಚಿದೆ. ನಾಯಿಗಳ ಹಿಂಡು ರಸ್ತೆಯಲ್ಲಿ ಎದುರುಗೆ ಬಂದು ಗಟುರು ಹಾಕಿದರೆ ಜೀವ ಹೋದಂತಾಗುತ್ತದೆ
ನಾರಾಯಣ ಹಿರಿಯ ನಾಗರಿಕರು
ನಾಯಿಗಳ ಉಪಟಳ ಮತ್ತೆ ಹೆಚ್ಚಾಗಿದೆ. ಆದರೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸುತ್ತಿಲ್ಲ? ಸಮಸ್ಯೆ ಉಲ್ಬಣಗೊಳ್ಳುವ ಮುನ್ನವೇ ಸಂಬಂಧಿಸಿದವರು ಕ್ರಮಕೈಗೊಳ್ಳಬೇಕು
ಲಾಲಪ್ಪ ತಲಾರಿ ಡಿಎಸ್ಎಸ್ ಸಂಚಾಲಕ
ವರ್ಷದ ಹಿಂದೆ ಕೇರಳದ ತಜ್ಞರ ನೆರವಿನಿಂದ ನಾಯಿಗಳನ್ನು ಸ್ಥಳಾಂತರಿಸಲಾಗಿತ್ತು. ಮೇಲಧಿಕಾರಿಗಳ ಗಮನಕ್ಕೆ ತಂದು ನಿರ್ದೇಶನದಂತೆ ಕ್ರಮವಹಿಸಲಾಗುವುದು
ಭಾರತಿ ಸಿ. ದಂಡೋತಿ ಪುರಸಭೆ ಮುಖ್ಯಾಧಿಕಾರಿ
ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಸಿದ್ಧ..
ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ತಜ್ಞರಿದ್ದಾರೆ. ಆದರೆ ಬೀದಿ ನಾಯಿಗಳನ್ನು ಹಿಡಿದು ತರಲು ಪುರಸಭೆ ಅಥವಾ ಸಂಬಂಧಿಸಿದ ಸ್ಥಳೀಯ ಆಡಳಿತಗಳ ಸಹಕಾರ ಅಗತ್ಯ. ಚಿಕಿತ್ಸೆಯ ನಂತರ ಮೂರು ದಿನಗಳವರೆಗೆ ಅವುಗಳಿಗೆ ವೈದ್ಯಕೀಯ ಆರೈಕೆಯೂ ನೀಡಬೇಕಿದೆ. ಅದೆಲ್ಲಕ್ಕೂ ಸೂಕ್ತ ಸ್ಥಳಾವಕಾಶ ಬೇಕು. ಅಗತ್ಯ ಸೌಲಭ್ಯ ಒದಗಿಸಿದರೆ ನಮ್ಮ ಇಲಾಖೆ ಶಸ್ತ್ರಚಿಕಿತ್ಸೆ ಮಾಡಲು ಸಿದ್ಧವಿದೆ ಎಂದು ಪಶುಪಾಲನಾ ಮತ್ತು ವೈದ್ಯಕೀಯ ಇಲಾಖೆ ಎಡಿ ಡಾ.ಶಶಿಕಿರಣ ಹಜಾರೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT