ಸುರಪುರ: ಕತ್ತಲು ಕವಿದ ವಾತಾವರಣ, ಇಕ್ಕಟ್ಟಾದ ಜಾಗ, ಎಲ್ಲೆಂದರಲ್ಲಿ ಗಲೀಜು, ಕೆಸರುಮಯವಾಗಿ ಗಬ್ಬು ವಾಸನೆ, ತೆಗ್ಗು ಗುಂಡಿಗಳು ಇರುವ ರಸ್ತೆ...ಇದು ನಿತ್ಯ ತರಕಾರಿ ಹರಾಜು ನಡೆಯುವ ನಗರದ ಸಗಟು ಮಾರುಕಟ್ಟೆಯ ದುಸ್ಥಿತಿಯಿದು.

ಕೋವಿಡ್ಗಿಂತ ಮುಂಚೆ ಈಗಿನ ತರಕಾರಿ ಮಾರುಕಟ್ಟೆಯಲ್ಲಿಯೇ ಹರಾಜು ಪ್ರಕ್ರಿಯೆ ನಡೆಯುತ್ತಿತ್ತು. ಕೊರೊನಾ ಪ್ರಕರಣ ಹೆಚ್ಚಾದ ಕಾರಣ ತಾಲ್ಲೂಕು ಆಡಳಿತ ಈ ಸ್ಥಳದಲ್ಲಿ ಹರಾಜಿಗೆ ಅವಕಾಶ ನೀಡಲಿಲ್ಲ.

ದಲ್ಲಾಳಿಗಳು ಮತ್ತು ಸಗಟು ವರ್ತಕರು ತಹಶೀಲ್ದಾರ್ ರಸ್ತೆಯ ಹತ್ತಿರ ಇರುವ ಲಕ್ಷ್ಮಿ ದೇಗುಲದ ಹತ್ತಿರ ಹರಾಜು ಮತ್ತು ಮಾರಾಟ ನಡೆಸತೊಡಗಿದರು. ಕೋವಿಡ್ ಮುಗಿಯುತ್ತಿದ್ದಂತೆ ಮಾರುಕಟ್ಟೆಯಲ್ಲಿ ಮಳಿಗೆಗಳು ನಿರ್ಮಾಣಗೊಂಡವು. ಮಾರುಕಟ್ಟೆಯಲ್ಲಿ ಸ್ಥಳವಿಲ್ಲದ ಕಾರಣ ಹರಾಜು ಪ್ರಕ್ರಿಯೆ ಲಕ್ಷ್ಮಿ ದೇಗುಲದ ಪಕ್ಕದಲ್ಲಿಯೇ ಮುಂದುವರೆದಿದೆ.

ಬೆಳಿಗ್ಗೆ 4-30 ಗಂಟೆಗೆ ರೈತರು ತಾವು ಬೆಳೆದ ತರಕಾರಿಯನ್ನು ಹರಾಜಿಗೆ ತರಲು ಆರಂಭಿಸುತ್ತಾರೆ. ಹರಾಜು ಬೆಳಿಗ್ಗೆ 8 ಗಂಟೆವರೆಗೆ ನಡೆಯುತ್ತದೆ. ಚಿಲ್ಲರೆ ವರ್ತಕರು ಬೆಳಿಗ್ಗೆ ಸ್ಥಳಕ್ಕೆ ಬಂದು ಹರಾಜಿನಲ್ಲಿ ಭಾಗವಹಿಸಿ ತರಕಾರಿ ಖರೀದಿಸುತ್ತಾರೆ. ದಲ್ಲಾಳಿಗಳು ಕಮಿಷನ್ ಮುರಿದುಕೊಂಡು ರೈತರಿಗೆ ಸ್ಥಳದಲ್ಲಿಯೇ ಹಣ ಪಾವತಿಸುತ್ತಾರೆ.

ಸುತ್ತಮುತ್ತಲಿನ ಗ್ರಾಮಗಳಾದ ದೇವಿಕೇರಿ, ರತ್ತಾಳ, ಸಿದ್ದಾಪುರ, ದೇವರಗೋನಾಲ, ವೆಂಕಟಾಪುರ, ಸತ್ಯಂಪೇಟ, ಚಾಮನಾಳ, ದೇವತಕಲ್, ದೇವಪುರ, ಮಾಚಗುಂಡಾಳ ಇತರ ಗ್ರಾಮಗಳಿಂದ ರೈತರು ತರಕಾರಿ ತರುತ್ತಾರೆ.

ಬೆಂಡೆ, ಬದನೆ, ಚವಳೆ, ಹಾಗಲ, ಸೌತೆಕಾಯಿ, ಹಿರೇಕಾಯಿ, ಟೊಮೆಟೊ, ಬದನೆಕಾಯಿ, ತಪ್ಪಲು ಪಲ್ಲೆಗಳನ್ನು ಸ್ಥಳೀಯವಾಗಿ ಬೆಳೆಯಲಾಗುತ್ತದೆ. ಆಲೂಗಡ್ಡಿ, ಈರುಳ್ಳಿ, ಬೀನ್ಸ್, ತೊಂಡೆಕಾಯಿ, ಬೀಟ್ರೂಟ್ ಇತರ ತರಕಾರಿಗಳನ್ನು ಬೆಳಗಾವಿ, ಕಲಬುರಗಿಗಳಿಂದ ತರಿಸಿಕೊಳ್ಳಲಾಗುತ್ತದೆ.

ದಿನಾಲೂ ಹತ್ತಾರು ಆಟೊಗಳು, ಟಂಟಂಗಳು ತರಕಾರಿ ಹೊತ್ತು ತರುತ್ತವೆ. ನೂರಾರು ಮೋಟಾರ್ ಬೈಕ್ಗಳು ನಿಲ್ಲುತ್ತವೆ. ಸ್ಥಳಾವಕಾಶ ಇಲ್ಲದ್ದರಿಂದ ಆಟೊ ನಿಲ್ಲಿಸಲು ಪರದಾಡುತ್ತಾರೆ. ಈ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದರಿಂದ ವಾಹನ ಓಡಿಸಲು ತೊಂದರೆ ಪಡುತ್ತಾರೆ.

ಹರಾಜು ನಡೆಯುವ ಸ್ಥಳದಲ್ಲಿ ವಿದ್ಯುತ್ ದೀಪದ ವ್ಯವಸ್ಥೆ ಇಲ್ಲ. ದಲ್ಲಾಳಿಗಳೇ ಗಿಡಗಳಿಗೆ ಚಿಕ್ಕ ಚಿಕ್ಕ ಬಲ್ಬ್ ಹಾಕಿದ್ದಾರೆ. ವಾಹನಗಳ ಲೈಟಿನ ಬೆಳಕಿನಲ್ಲಿ ಹರಾಜು ನಡೆಯುತ್ತದೆ. ಕತ್ತಲೆಯಲ್ಲಿ ಮೋಸ ನಡೆಯುವ ಸಾಧ್ಯತೆಯೂ ಇರುತ್ತದೆ. ಸುತ್ತಲಿನ ಸ್ಥಳದಲ್ಲಿ ಮಳೆ, ಚರಂಡಿ ನೀರು ನಿಂತು ದುರ್ವಾಸನೆ ಬೀರುತ್ತಿದೆ.

ನಗರಸಭೆ ತರಕಾರಿ ಹರಾಜು ಮತ್ತು ಸಗಟು ಮಾರಾಟಕ್ಕೆ ಸೂಕ್ತ ಸೌಕರ್ಯ ಹೊಂದಿದ ಸ್ಥಳ ಒದಗಿಸಬೇಕು. ಅಲ್ಲಿಯವರೆಗೆ ಈಗ ಹರಾಜು ನಡೆಯುವ ಸ್ಥಳಕ್ಕೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ರೈತರು, ದಲ್ಲಾಳಿಗಳು, ವರ್ತಕರು ಮನವಿ ಮಾಡಿದ್ದಾರೆ.

ದುರ್ಗಂಧ ಕತ್ತಲಿನ ಮಧ್ಯದಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತದೆ. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ
ಸಂತೋಷ ಮಾರಲಬಾವಿ ದಲ್ಲಾಳಿ

ತರಕಾರಿ ಹರಾಜು ಮತ್ತು ಸಗಟು ಮಾರಾಟಕ್ಕೆ ನಗರಸಭೆ ಸಕಲ ಸೌಕರ್ಯ ಹೊಂದಿದ ಸೂಕ್ತ ಸ್ಥಳ ಒದಗಿಸಬೇಕು. ಇದರಿಂದ ರೈತರಿಗೆ ವರ್ತಕರಿಗೆ ಅನುಕೂಲವಾಗುತ್ತದೆ
ಸುರೇಶ ಚಾಮನಾಳ ತರಕಾರಿ ವರ್ತಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.