‘ಭಾರತ ಬಯಲು ಶೌಚಮುಕ್ತ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಆದರೆ, ರಾಜ್ಯದಲ್ಲಿ ಈಗಲೂ ನಸುಕಿನಲ್ಲೇ ಕೈಯಲ್ಲಿ ತಂಬಿಗೆ ಹಿಡಿದು ಮಹಿಳೆಯುರು, ಪುರುಷರು, ಮಕ್ಕಳು ಬಯಲ ಕಡೆಗೆ ಹೋಗುವುದು ಮಾಮೂಲಿ ದೃಶ್ಯ. ಸರ್ಕಾರದ ದಾಖಲೆಗಳಲ್ಲಿ ಮಾತ್ರ ಬಯಲು ಶೌಚಮುಕ್ತವಾಗಿದೆ. ಈ ಕುರಿತು ‘ಪ್ರಜಾವಾಣಿ’ ಇಲ್ಲಿ ಬೆಳಕು ಚೆಲ್ಲಿದೆ.

ಯಾದಗಿರಿ: ಸರ್ಕಾರಿ ದಾಖಲೆಗಳ ಪ್ರಕಾರ, ಜಿಲ್ಲೆಯು 2018ರ ಅಕ್ಟೋಬರ್‌ನಲ್ಲಿ ‘ಬಯಲು’ ಶೌಚಾಲಯ ಮುಕ್ತವಾಗಿದೆ. ಆದರೆ, ಗ್ರಾಮಗಳಲ್ಲಿ ಇಂದಿಗೂ ಜನರು ಶೌಚಕ್ಕೆ ಬಯಲನ್ನೇ ಆಶ್ರಯಿಸಿದ್ದಾರೆ. ನಿರ್ವಹಣೆ ಕೊರತೆಯಿಂದ ಶೌಚಾಲಯಗಳು ಬಾಗಿಲು ಮುಚ್ಚಿವೆ. ಹಲವು ಬಳಕೆಗೆ ಯೋಗ್ಯವಿಲ್ಲದ ಸ್ಥಿತಿಯಲ್ಲಿವೆ.

* ಇದನ್ನೂ ಓದಿ:ರಾಜ್ಯ ಸರ್ಕಾರದ ದಾಖಲೆಗಳ ಪ್ರಕಾರ ಎಲ್ಲರಿಗೂ ಶೌಚಾಲಯ ಇದೆ!

ಜಾಗದ ಕೊರತೆಯಿಂದ ನಗರ ಪ್ರದೇಶದಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಹಿನ್ನಡೆ ಉಂಟಾಗಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ತಿಳಿವಳಿಕೆಯದ್ದೇ ಕೊರತೆಯಿದೆ. ಯಾದಗಿರಿ ಮತ್ತು ಸುರಪುರ ತಾಲ್ಲೂಕುಗಳ ಗುಡ್ಡಗಾಡು ಪ್ರದೇಶದಲ್ಲಿ ನಿವಾಸಿಗಳಿಗಂತೂ ಶೌಚಾಲಯ ನಿರ್ಮಿಸಿಕೊಳ್ಳಲು ಸಾಧ್ಯವಾಗಲ್ಲ. ರಾಶಿ ಬಂಡೆಗಲ್ಲುಗಳ ನಡುವೆ ಏನೇನೋ ಪ್ರಯತ್ನ ನಡೆಸಿ ಶೌಚಾಲಯ ನಿರ್ಮಿಸಿದರೂ ಯಾವುದೇ ಪ್ರಯೋಜನವಾಗಲ್ಲ ಎಂದು ಅಲ್ಲಿ ನಿವಾಸಿಗಳು ಹೇಳುತ್ತಾರೆ. ಇನ್ನೂ ಕೆಲವರಂತೂ ಮೂಢನಂಬಿಕೆಯಿಂದ ಶೌಚಾಲಯ ಬಳಕೆಗೆ ಮುಂದಾಗುತ್ತಿಲ್ಲ.

ಜಿಲ್ಲೆಯಲ್ಲಿ 123 ಗ್ರಾಮ ಪಂಚಾಯಿತಿಗಳಿವೆ. ಶೌಚಾಲಯ ನಿರ್ಮಾಣದಲ್ಲಿ ಜಿಲ್ಲೆಯ ಸಾಧನೆ ಶೇ 33 ಇದ್ದು, ಇಡೀ ರಾಜ್ಯದಲ್ಲಿ ಜಿಲ್ಲೆ 30ನೇ ಸ್ಥಾನದಲ್ಲಿದೆ.ಯಾದಗಿರಿ ನಗರಸಭೆಯಲ್ಲಿಶೌಚಾಲಯ ನಿರ್ಮಾಣಕ್ಕೆ ಸಲ್ಲಿಕೆಯಾದ 4,776 ಪೈಕಿ 2,527 ಅರ್ಜಿಗಳು ಪರಿಶೀಲನಾ ಹಂತದಲ್ಲಿವೆ. 1,858 ಅರ್ಜಿಗಳು ಅನುಮೋದನೆ ಪಡೆದಿದ್ದು, 175 ಅರ್ಜಿಗಳಿಗೆ ದಾಖಲೆಗಳೇ ಇಲ್ಲ. 380 ಅರ್ಜಿಗಳನ್ನು ತಿರಸ್ಕರಿಸಲಾಗಿದೆ.

* ಇದನ್ನೂ ಓದಿ:ಹಳೆಯ ಮೈಸೂರು ಪ್ರಾಂತ್ಯ | ಕಡತದಲ್ಲಷ್ಟೇ ಬಯಲು ಬಹಿರ್ದೆಸೆ ಮುಕ್ತ!

ಸುರಪುರ ಪಟ್ಟಣದಲ್ಲಿ ಶೇ 20 ಮತ್ತು ಗ್ರಾಮೀಣ ಪ್ರದೇಶದಲ್ಲಿ ಶೇ 80ರಷ್ಟು ಮಂದಿ ಬಯಲನ್ನೆ ಆಶ್ರಯಿಸಿದ್ದಾರೆ. ಇಲ್ಲಿ ಗುಡ್ಡಗಾಡು ಪ್ರದೇಶವಿದ್ದು, ಇಲ್ಲಿನ ಹೆಚ್ಚಿನ ಜನ ಬಯಲನ್ನೇ ಆಶ್ರಯಿಸಿದ್ದಾರೆ. ಶಹಾಪುರ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಶೇ 60 ಮತ್ತು ನಗರ ಪ್ರದೇಶದಲ್ಲಿ ಶೇ 50ರಷ್ಟು ಜನ ಬಯಲನ್ನೇ ಅವಲಂಬಿಸಿದ್ದಾರೆ.

* ಇದನ್ನೂ ಓದಿ:ದಕ್ಷಿಣ ಕನ್ನಡ ಜಿಲ್ಲೆ | ವಲಸೆ ಕಾರ್ಮಿಕರಿಗಿಲ್ಲ ಶೌಚಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.