ಯಾದಗಿರಿ: ನಗರ ಠಾಣೆ ಪಿಎಸ್ಐ ಪರಶುರಾಮ್ ಸಾವು ಘಟನೆ ಖಂಡಿಸಿ ಶನಿವಾರ ಬೆಳಿಗ್ಗೆ ಚಿತ್ತಾಪುರ ರಸ್ತೆಯ ಜಿಲ್ಲಾಸ್ಪತ್ರೆ ಮುಖ್ಯದ್ವಾರದ ಮುಂದೆ ದಲಿತ ಸಂಘಟನೆ ಮುಖಂಡರು ರಸ್ತೆ ನಡೆಸಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನೆ ಮಲ್ಲಿಕಾರ್ಜುನ ಕ್ರಾಂತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಪಿಎಸ್ಐ ಸಾವಿಗೆ ಕಾರಣವದರನ್ನು ಬಂಧಿಸುವಂತೆ ಪ್ರತಿಭಟನಾಕಾರರು ಘೋಷಣೆ ಕೂಗಿದರು. ರಸ್ತೆ ತಡೆಯಿಂದ ನೂರಾರು ವಾಹನಗಳು ರಸ್ತೆ ಮೇಲೆ ನಿಂತಿದ್ದು, ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಸ್ಥಳಕ್ಕೆ ಬಂದ ಎಸ್ಪಿ:

ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಆಗಮಿಸಿದರು.

ಸಚಿವ ಪ್ರಿಯಾಂಕ್ ಖರ್ಗೆ ಅವರು ದೂರವಾಣಿ ಮೂಲಕ ಪ್ರತಿಭನಾಕಾರರೊಂದಿಗೆ ಮಾತನಾಡಿದರು.

ಆದರೂ ಜಗ್ಗದ ಪ್ರತಿಭಟನಾಕಾರರು ಸಚಿವರೊಂದಿಗೆ ಮಾತನಾಡುವಾಗ ದಲಿತ ನಾಯಕ ಪರಶುರಾಮ್ ಕುರಕುಂದಿ ಕಣ್ಣೀರಿಟ್ಟರು.

ದಲಿತರ ಮೇಲೆ ಯಾದಗಿರಿ ಶಾಸಕ ಮತ್ತು ಅವರ ಮಕ್ಕಳಿಂದ ನಿರಂತರ ದಬ್ಬಾಳಿಕೆ ನಡೆಯುತ್ತಿದೆ. ಶಾಸಕರ ವಿರುದ್ಧ ದೂರು ದಾಖಲಿಸಲು ಯಾಕಿಷ್ಟು ಹಿಂದೇಟು ಎಂದು ಪ್ರಶ್ನಿಸಿದರು. ಜಿಲ್ಲಾ ಪೊಲೀಸ್ ವೈಫಲ್ಯ ಸರಿಯಲ್ಲ. ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಹೃದಯಾಘಾತದಿಂದ ಶುಕ್ರವಾರ ನಗರ ಠಾಣೆಯ ಪಿಎಸ್ಐ ನಿಧನರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.