ಕೇಂದ್ರದ ಸಿಬ್ಬಂದಿ ನೇಮಕಾತಿ ಅಯೋಗದ (SSC– Staff Selection Commission) ವತಿಯಿಂದ ಸಚಿವಾಲಯಗಳಲ್ಲಿ ಖಾಲಿ ಇರುವ ‘ನಾನ್ ಟೆಕ್ನಿಕಲ್ ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ’ (MTS) ಮತ್ತು ‘ಸಿಬಿಐಸಿ–ಸಿಬಿಎನ್’ನಲ್ಲಿ ಖಾಲಿಯಿರುವ ಹವಾಲ್ದಾರ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಸಚಿವಾಲಯಗಳಲ್ಲಿ ಒಟ್ಟು 1,198 ನಾನ್ ಟೆಕ್ನಿಕಲ್ ಮಲ್ಟಿ ಟಾಸ್ಕಿಂಗ್ ಹುದ್ದೆಗಳಿವೆ. ಈ ಹುದ್ದೆಗಳು ಕೇಂದ್ರ ಸರ್ಕಾರದ ಸಚಿವಾಲಯದಲ್ಲಿನ ನಾನ್ ಟೆಕ್ನಿಕಲ್ ಗ್ರೂಪ್- ಸಿ ಹುದ್ದೆಗಳಾಗಿವೆ. ಇದರಲ್ಲಿ ಕರ್ನಾಟಕ–ಕೇರಳ ಸರ್ಕಲ್‌ನ 68 ಹುದ್ದೆಗಳೂ ಕೂಡ ಸೇರಿವೆ.

ಕೇಂದ್ರದ ಹಣಕಾಸು ಸಚಿವಾಲಯದಡಿ ಕಾರ್ಯನಿರ್ವಹಿಸುವ ಕಂದಾಯ ಇಲಾಖೆಯ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (CBIC) ಹಾಗೂ ಸೆಂಟ್ರಲ್ ಬ್ಯೂರೋ ಆಫ್ ನಾರ್ಕೋಟಿಕ್ಸ್ (CBN) ನಲ್ಲಿ 360 ಹವಾಲ್ದಾರ್ ಖಾಲಿ ಹುದ್ದೆಗಳಿವೆ. ಇದರಲ್ಲಿ ಕರ್ನಾಟಕ–ಕೇರಳ ಸರ್ಕಲ್‌ನ 5 ಹುದ್ದೆಗಳೂ ಸೇರಿವೆ.

ಅರ್ಜಿ ಸಲ್ಲಿಕೆ ?

ಅರ್ಜಿ ಸಲ್ಲಿಸಲು ಜುಲೈ 21 ಕಡೆಯ ದಿನ. ಅರ್ಜಿ ಶುಲ್ಕ ₹100 ಇರಲಿದೆ. (ಎಸ್.ಎಸಿ, ಎಸ್.ಟಿ, ಮಾಜಿ ಸೈನಿಕರಿಗೆ ಶುಲ್ಕ ವಿನಾಯಿತಿ). ಶುಲ್ಕ ಕಟ್ಟಿದ ನಂತರ ಇತರೆ ಮಾಹಿತಿ ಅಪ್ಡೇಟ್ ಮಾಡಲು ಜುಲೈ 27ರವರೆಗೆ ಸಮಯವಿದೆ.

ವಯೋಮಿತಿ, ಶೈಕ್ಷಣಿಕ ಅರ್ಹತೆ

* ಎಂಟಿಎಸ್ ಹುದ್ದೆಗಳಿಗೆ ವಯೋಮಿತಿ ಕನಿಷ್ಠ 18 ರಿಂದ ಗರಿಷ್ಠ 25 ಇದ್ದು, ಹವಾಲ್ದಾರ್ ಹುದ್ದೆಗಳಿಗೆ ಕನಿಷ್ಠ 18 ರಿಂದ ಗರಿಷ್ಠ 27 ಇದೆ.

* ಎರಡೂ ಹುದ್ದೆಗಳಿಗೂ ಕನಿಷ್ಠ ಶೈಕ್ಷಣಿಕ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ.

* ವಯೋಮಿತಿಯಲ್ಲಿ ಮೀಸಲು ವರ್ಗಗಳವರಿಗೆ ಸಡಿಲಿಕೆ ಇದೆ.

* ಆರಂಭಿಕ ವೇತನ ₹ 32,877 ಇದ್ದು ಇತರೆ ಭತ್ಯೆಗಳು ಸೇರುತ್ತವೆ.

ಪರೀಕ್ಷೆ ಹೇಗಿರುತ್ತದೆ?

ಈ ಹುದ್ದೆಗಳಿಗೆ ಸೆಪ್ಟೆಂಬರ್‌ನಲ್ಲಿ ಕಂಪ್ಯೂಟರ್ ಆಧರಿತ ಪರೀಕ್ಷೆ(ಸಿಬಿಟಿ)ನಡೆಯಲಿವೆ. ಎಂಟಿಎಸ್ ಹುದ್ದೆಗಳಿಗೆ ಮಾತ್ರ ಸಿಬಿಟಿ (ಕಂಪ್ಯೂರ್ ಆಧಾರಿತ ಪರೀಕ್ಷೆ) ಪರೀಕ್ಷೆ ಇರುತ್ತದೆ. ಹವಾಲ್ದಾರ್ ಹುದ್ದೆಗಳಿಗೆ ಸಿಬಿಟಿ ಹೊತೆಗೆ ದೈಹಿಕ ಸಹಿಷ್ಣುತೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಯಲಿದೆ.

ಮೊದಲು ನಡೆಯುವ ಸಿಬಿಟಿಯಲ್ಲಿ ಎರಡು ಪಶ್ನೆಪತ್ರಿಕೆಗಳಿರುತ್ತವೆ. ಮೊದಲ ಪತ್ರಿಕೆಗೆ (2 ಭಾಗ- ನ್ಯೂಮೆರಿಕಲ್ ಆ್ಯಂಡ್ ಮ್ಯಾಥಮೆಟಿಕ್ ಎಬಿಲಿಟಿ, ರಿಸನಿಂಗ್ ಎಬಿಲಿಟಿ ಆ್ಯಂಡ್ ಪ್ರಾಬ್ಲಮ್ ಸಾಲ್ವಿಂಗ್) 120 ಅಂಕಗಳಿರುತ್ತವೆ. 45 ನಿಮಿಷ ಅವಧಿಯ ಪರೀಕ್ಷೆ ಇದು. ಎರಡು ಭಾಗಗಳಲ್ಲಿ ತಲಾ 20 ಪ್ರಶ್ನೆಗಳಿರುತ್ತವೆ.

ಎರಡನೇ ಪತ್ರಿಕೆ (ಸಾಮಾನ್ಯ ಜ್ಞಾನ, ಇಂಗ್ಲಿಷ್ ಭಾಷಾ ಸಾಮರ್ಥ್ಯ) 150 ಅಂಕಗಳಿಗೆ ಇರಲಿದ್ದು ಎರಡು ಭಾಗಗಳಿರುತ್ತವೆ. ಇದರಲ್ಲಿ ತಲಾ 20 ಪ್ರಶ್ನೆಗಳಿರುತ್ತವೆ.

ಮುಂದಿನ ಹಂತಕ್ಕೆ ಪ್ರವೇಶಿಸಬೇಕಾದರೆ ಎರಡರಲ್ಲೂ ಕನಿಷ್ಠ ಶೇ 30 ರಷ್ಟು ಅಂಕಗಳನ್ನು ಗಳಿಸಲೇಬೇಕು. ಯಾವುದೇ ನಕಾರಾತ್ಮಕ ಅಂಕಗಳು ಇರುವುದಿಲ್ಲ.

ಇಂಗ್ಲಿಷ್, ಹಿಂದಿ ಹಾಗೂ ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಯಲಿದೆ. ಇದರಿಂದ ಈ ಹುದ್ದೆಗಳಿಗೆ ಹೋಗಲು ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ.

ವಿವಿಧ ಸರ್ಕಲ್ ಗಳ ಹುದ್ದೆ ವಿಂಗಡಣೆ, ಹವಾಲ್ದಾರ್ ಹುದ್ದೆಗಳ ದೈಹಿಕ ಸಹಿಷ್ಣುತೆ, ಸಾಮರ್ಥ್ಯ ಪರೀಕ್ಷೆ ಯ ಮಾನದಂಡಗಳು ಹಾಗೂ ಇತರೆ ಹೆಚ್ಚಿನ ಮಾಹಿತಿಗೆ ಆಸಕ್ತರು SSC ಅಧಿಕೃತ ವೆಬ್‌ಸೈಟ್ https://ssc.nic.in/ ವೀಕ್ಷಿಸಬೇಕು.

ಎಂಟಿಎಸ್ ಎಂದರೇನು?

ಕೇಂದ್ರ ಸರ್ಕಾರದ ಸಚಿವಾಲಯಗಳಲ್ಲಿ ಗ್ರೂಪ್ ಸಿ ಅಡಿಯಿರುವ ನಾನ್ ಟೆಕ್ನಿಕಲ್ ಮಲ್ಟಿ ಟಾಸ್ಕಿಂಗ್ ಹುದ್ದೆಗಳಿಗೆ ಎಂಟಿಎಸ್ ಹುದ್ದೆಗಳು ಎನ್ನುತ್ತಾರೆ. ಪಿಓನ್, ಡ್ರಾಫ್ಟಿ, ಚೌಕಿದಾರ್, ಸಫಾಯಿವಾಲಾ ಇತರೆ ಹುದ್ದೆಗಳು ಇದರ ಅಡಿ ಬರುತ್ತವೆ.

ಹವಾಲ್ದಾರ್ ಹುದ್ದೆಗಳು ಯಾವುವು?

ಸಿಬಿಐಸಿ ಹಾಗೂ ಸಿಬಿಎನ್ ಕೇಂದ್ರ ಹಣಕಾಸು ಸಚಿವಾಲಯದ ರೆವಿನ್ಯೂ ಡಿಪಾರ್ಟ್‌ಮೆಂಟ್ ಅಡಿ ಬರುವ ಸಂಸ್ಥೆಗಳಾಗಿವೆ. ಇದರಲ್ಲಿ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ರೀತಿ ಕೆಲಸ ಮಾಡುವ ಹುದ್ದೆಗಳಿಗೆ ಹವಾಲ್ದಾರ್ ಹುದ್ದೆಗಳು ಎನ್ನುತ್ತಾರೆ.

ಸಿಬ್ಬಂದಿ ನೇಮಕಾತಿ ಆಯೋಗ

ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ (SSC) ಕೇಂದ್ರ ಸರ್ಕಾರದ ವಿವಿಧ ಸಚಿವಾಲಯ, ಇಲಾಖೆಗಳಿಗೆ ಬೇಕಿರುವ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆ ನೋಡಿಕೊಳ್ಳುತ್ತದೆ. ಇದು 1975ರಲ್ಲಿ ಸ್ಥಾಪನೆಯಾಗಿದ್ದು, ಇದರ ಕೇಂದ್ರ ಕಚೇರಿ ನವದೆಹಲಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.