ದಾವಣಗೆರೆ: ತೋಟಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಹಣಕಾಸು ಇಲಾಖೆಗೆ ಪತ್ರ ಬರೆಯಲಾಗಿದೆ. ಅವರು ಅನುಮತಿ ನೀಡಿದ ಕೂಡಲೇ ಮೀಸಲಾತಿ ನಿಗದಿಪಡಿಸಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗುವುದು ಎಂದು ತೋಟಗಾರಿಕಾ ಸಚಿವ ಎಂ.ಸಿ. ಮನಗೂಳಿ ತಿಳಿಸಿದರು.

ದಾವಣಗೆರೆಗೆ ಶನಿವಾರ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಸುದ್ದಿಗಾರರ ಜತೆಗೆ ಮಾತನಾಡಿದರು.

ಸರ್ಕಾರ ಅಲ್ಲಾಡಲ್ಲ

‘ಸರ್ಕಾರವನ್ನು ಅಲುಗಾಡಿಸಲು ಬಿಜೆಪಿ ನೋಡುತ್ತಿದೆ. ಆದರೆ ಸರ್ಕಾರ ಗಟ್ಟಿಯಾಗಿದೆ. ಹಾಗಾಗಿ ಅಲುಗಾಡುವುದಿಲ್ಲ. ನಾನು ದೇವೇಗೌಡರ ಪರಮ ಶಿಷ್ಯ. ಜೆಡಿಎಸ್ ಬಿಡುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಕರೆದಿರುವ ಸಭೆಯಲ್ಲಿ ಭಾಗವಹಿಸುವೆ’ ಎಂದು ಮನಗೂಳಿ ಸ್ಪಷ್ಟಪಡಿಸಿದರು.

‘ದಂಗೆ’ ಸಮರ್ಥನೆ

ದಂಗೆ ಎಂದರೆ ಗಲಭೆಯಲ್ಲ. ಅದಕ್ಕೆ ವಿಶಾಲ ಮತ್ತು ಬೇರೆ ಬೇರೆ ಅರ್ಥವಿದೆ. ಬಿಜಾಪುರ ಕಡೆಗೆ ದಂಗೆ ಅಂದರೆ ಬಾಯಿ ಬಡಿದುಕೊಳ್ಳುವುದು. ಕೊಡಗು, ಹಳೇ ಮೈಸೂರು ಭಾಗದಲ್ಲಿ ಬೇರೆ ಅರ್ಥವಿದೆ. ಗಂಭೀರ ಚರ್ಚೆ ಎಂಬರ್ಥದಲ್ಲಿ ಮುಖ್ಯಮಂತ್ರಿ ಈ ಪದವನ್ನು ಬಳಸಿದ್ದಾರೆ ಎಂದು ಸಚಿವರು ಸಮರ್ಥಿಸಿಕೊಂಡರು.

ಬಿ.ಎಸ್. ಯಡಿಯೂರಪ್ಪ ಅವರಿಗೆ ಬೇರೆ ಕೆಲಸ ಇಲ್ಲ. ಅದಕ್ಕಾಗಿ ಟೀಕೆ, ವಿರೋಧ, ಭಾಷಣ, ಹತ್ತು–ಹನ್ನೆರಡು ಮಂದಿಯನ್ನು ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಇದರಿಂದ ತಾನು ಮುಖ್ಯಮಂತ್ರಿಯಾಗಬಹುದು ಎಂದು ಅವರು ತಿಳಿದುಕೊಂಡಿದ್ದಾರೆ. ಅವರ ಪಕ್ಷದಲ್ಲಿಯೇ ಗುಂಪುಗಾರಿಕೆ ಇದೆ. ಅವರನ್ನು ಮುಖ್ಯಮಂತ್ರಿಯಾಗಲು ಆ ಪಕ್ಷದವರೇ ಬಿಡುವುದಿಲ್ಲ. ಅಲ್ಲದೇ ಯಡಿಯೂರಪ್ಪ ಅವರಿಗೂ ಹಿಂದಿನ ಶಕ್ತಿ ಈಗ ಇಲ್ಲ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.