ಪದವೀಧರ ಪ್ರಾಥಮಿಕ ಶಿಕ್ಷಕ (ಭಾಷೆ-ಆಂಗ್ಲ) ಹುದ್ದೆಯ ಆಕಾಂಕ್ಷಿಗಳು ‘ಇಂಗ್ಲಿಷ್ ಭಾಷೆ ಐಚ್ಛಿಕ ಪತ್ರಿಕೆ - 2’ ರಲ್ಲಿನ ಇಂಗ್ಲಿಷ್ ಭಾಷೆ ಮತ್ತು ಬೋಧನಾ ವಿಷಯದ ಜ್ಞಾನಕ್ಕೆ ಸಂಬಂಧಿಸಿದ ಒಟ್ಟು 150 ಅಂಕಗಳ ಪ್ರಶ್ನೆಗಳಿಗೆ ಉತ್ತರಿಸಬೇಕಿರುತ್ತದೆ. ಮುದ್ರಿತ ಪುಸ್ತಕಗಳ ಪರಾಮರ್ಶನದ ಜೊತೆಗೆ ಡಿಜಿಟಲ್ ಪುಸ್ತಕಗಳು ಮತ್ತು ವೆಬ್‌ಸೈಟ್ ಇಲ್ಲವೇ ಆ್ಯಪ್‌ಗಳ ಸಹಾಯ ಪಡೆಯುವುದು ಯಶಸ್ಸಿಗೆ ಸಹಕಾರಿ. ಅಂತಹ ಡಿಜಿಟಲ್ ಪರಿಕರಗಳ ಕುರಿತ ಮಾಹಿತಿಯನ್ನು ಇಲ್ಲಿ ಕೊಡಲಾಗಿದೆ.

1. ಆನ್‌ಲೈನ್ / ಆಫ್‌ಲೈನ್ ಪಠ್ಯಪುಸ್ತಕಗಳು

ನಿಗದಿತ ಇಂಗ್ಲಿಷ್ ಪತ್ರಿಕೆಗೆ ಉತ್ತರಿಸಲು ಪ್ರಾಥಮಿಕ ಹಂತದ 1 ರಿಂದ 10ನೇ ತರಗತಿಯವರೆಗಿನ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (NCERT) ಮತ್ತು ಕರ್ನಾಟಕ ಸರ್ಕಾರ ನಿಗದಿಪಡಿಸಿರುವ ಇಂಗ್ಲಿಷ್ ಪಠ್ಯಪುಸ್ತಕಗಳನ್ನು ಅಭ್ಯಾಸ ಮಾಡಬೇಕು.

ಪ್ರಸ್ತುತ ಪಠ್ಯಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯವಾಗದೇ ಇರುವುದರಿಂದ ಮೊಬೈಲ್, ಟ್ಯಾಬ್, ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳಲ್ಲಿ ಓದಲು ಸುಲಭವಾಗುವಂತೆ ಇ-ಬುಕ್ ಇಲ್ಲವೇ ಪಿ.ಡಿ.ಎಫ್. ರೂಪದಲ್ಲಿ ಆನ್‌ಲೈನ್‌ನಲ್ಲಿ ಲಭ್ಯವಿರುವ ಪುಸ್ತಕಗಳನ್ನು ಈ ಕೆಳಗೆ ನೀಡಿರುವಂತಹ ಕೆಲವು ವೆಬ್‌ಸೈಟ್‌ಗಳಿಂದ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

https://ncert.nic.in

https://ktbs.kar.nic.in

2. ಇಂಗ್ಲಿಷ್ ಪದಸಂಪತ್ತು, ಭಾಷೆ ಮತ್ತು ವ್ಯಾಕರಣದ ಕೃತಿಗಳು

ಇಂಗ್ಲಿಷ್ ಪದಸಂಪತ್ತು, ಭಾಷೆ ಮತ್ತು ವ್ಯಾಕರಣಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ನೀಡಲು ಹಾಗೂ ಸುಲಭವಾಗಿ ಅರ್ಥಮಾಡಿಕೊಳ್ಳಲು ನೆರವಾಗುವ ಪುಸ್ತಕಗಳನ್ನು ಈ ಜಾಲತಾಣಗಳಿಂದ ಪಡೆಯಬಹುದು. ಇದರಲ್ಲಿ ಪದಸಂಪತ್ತು, ಗಾದೆ, ನುಡಿಗಟ್ಟು ಮತ್ತು ವ್ಯಾಕರಣದ ಮಾಹಿತಿ ಲಭ್ಯವಿದೆ.

https://ebooksz.net/?s=English+grammar

www.grammarly.com

3. ಮೊಬೈಲ್ ಡಿಕ್ಷನರಿ ಆ್ಯಪ್

ಇಂಗ್ಲಿಷ್ ಪದರಚನೆ, ಅರ್ಥ, ಉಚ್ಚಾರಕ್ಕೆ ಸಂಬಂಧಿಸಿದಂತೆ ಎಷ್ಟೆಲ್ಲಾ ವಿವರಣೆ ಡಿಕ್ಷನರಿಗಳಲ್ಲಿ ಲಭ್ಯವಿದೆ. ಅವೆಲ್ಲವೂ ಕೈಯಲ್ಲಿರುವ ಮೊಬೈಲ್ ಅಥವಾ ಟ್ಯಾಬ್‌ನಲ್ಲಿಯೂ ಡೌನ್‌ಲೋಡ್ ಮಾಡಿಕೊಂಡು ಬೇಕೆಂದಾಗ ಆಫ್‌ಲೈನ್‌ನಲ್ಲಿಯೂ ಬಳಸಲು ಅನುವಾಗುವ ಹತ್ತು ಹಲವು ಆ್ಯಪ್‌ಗಳಿದ್ದು ಗೂಗಲ್ ಪ್ಲೇ-ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

https://wordweb.info

www.dictionary.com

4. ಮಾದರಿ ಪ್ರಶ್ನೆಪತ್ರಿಕೆ ಮತ್ತು ಆನ್‌ಲೈನ್ ಟೆಸ್ಟ್

ಶಿಕ್ಷಕರ ನೇಮಕಾತಿ ಪರೀಕ್ಷೆಗೆಂದೇ ಸಿ–ಟಿಇಟಿ ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವ ವಿಧಾನ ಹೇಳಿಕೊಡುವ ಮತ್ತು ಆನ್‌ಲೈನ್ ಟೆಸ್ಟ್‌ಗಳನ್ನು ನಡೆಸುವ ಹಲವು ವೆಬ್‌ಸೈಟ್‌ಗಳಿವೆ. ಅವುಗಳಲ್ಲಿ ಉಚಿತವಾಗಿ ಕೆಲವು ಮಾಡ್ಯೂಲ್‌ಗಳನ್ನು ನೀಡಲಾಗಿರುತ್ತದೆ. ಅಭ್ಯಾಸಕ್ಕಾಗಿ ಅಂತಹ ಟೆಸ್ಟ್‌ಗಳನ್ನು ತೆಗೆದುಕೊಳ್ಳಬಹುದು.

www.shiksha.com/exams/ctet-exam-mocktest

https://testbook.com/ctet/test-series

5. ಸತತ ಅಭ್ಯಾಸಕ್ಕಾಗಿ ಡಿಜಿಟಲ್ ಮೋಡ್

ಪಠ್ಯಪುಸ್ತಕಗಳು, ಭಾಷೆ ಮತ್ತು ವ್ಯಾಕರಣದ ಪುಸ್ತಕಗಳ ಜೊತೆ ಹಲವು ವೆಬ್‌ಸೈಟ್‌ಗಳಲ್ಲಿ ಕಾಂಪ್ರಹೆನ್ಷನ್, ಪ್ಯಾರಾಗ್ರಾಫ್ ರೈಟಿಂಗ್, ಪ್ರೆಸ್ಸೀ, ಟ್ರಾನ್‌ಫರ್‌ಮೇಷನ್ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಅಭ್ಯಾಸ ಪತ್ರಿಕೆಗಳನ್ನು ನೀಡಲಾಗಿರುತ್ತದೆ. ನಿಮಗೆ ಅಗತ್ಯವಿರುವ ವಿಷಯವನ್ನು ಗೂಗಲ್‌ನಲ್ಲಿ ಹುಡುಕಿ ಪ್ರಯೋಜನ ಪಡೆದುಕೊಳ್ಳುವ ಹವ್ಯಾಸ ಬೆಳೆಸಿಕೊಳ್ಳುವುದು, ಆನ್‌ಲೈನ್ ಮೋಡ್‌ನಲ್ಲಿ ವಿಷಯ ಸಂಗ್ರಹಣೆ ಮಾಡುವುದು ಯಶಸ್ಸಿಗೆ ರಹದಾರಿ.

ಈ ಡಿಜಿಟಲ್ ಅಧ್ಯಯನ ಸಾಮಗ್ರಿಗಳ ಬಳಕೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಿದ್ಧಸೂತ್ರ. ಆನ್‌ಲೈನ್ ಮತ್ತು ಆಫ್‌ಲೈನ್ ಮೋಡ್‌ನಲ್ಲಿ ಲಭ್ಯವಿರುವ ಮಾಹಿತಿ ಬಳಸಿಕೊಳ್ಳಿ, ಯಶಸ್ಸು ಗಳಿಸಿ. ಗೋ ಆನ್‌ಲೈನ್ ಅಂಡ್ ಎಂಜಾಯ್!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.