ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ), ದೆಹಲಿ ಪೊಲೀಸ್ (ಎಸ್‌ಐ) ಮತ್ತು ಕೇಂದ್ರ ಸರ್ಕಾರದ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) 1876 (ಪುರುಷ – 1710 ಮತ್ತು ಮಹಿಳೆ–166) ಸಬ್ ಇನ್‌ಸ್ಪೆಕ್ಟರ್ (ಎಸ್.ಐ) ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ.

ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಇದು ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿರುತ್ತದೆ. ಇದೇ ವರ್ಷದ (2023) ಅಕ್ಟೋಬರ್ ತಿಂಗಳಲ್ಲಿ ಪರೀಕ್ಷೆ ನಡೆಯುವ ಸಾಧ್ಯತೆ ಇದೆ ಎಂದು ಸಿಬ್ಬಂದಿ ನೇಮಕಾತಿ ಆಯೋಗ ಜುಲೈ 22ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ

ಎಸ್‌ಎಸ್‌ಸಿ ಪ್ರಧಾನ ಕಚೇರಿಯ ಅಧಿಕೃತ ವೆಬ್‌ಸೈಟ್ https://ssc.nic.in ಮೂಲಕ ಆನ್‌ಲೈನಲ್ಲಿ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ವಿವರವಾದ ಸೂಚನೆಗಳಿಗಾಗಿ, ಅಧಿಸೂಚನೆಯ ಅನುಬಂಧ-i ಮತ್ತು ಅನುಬಂಧ-ii ಅನ್ನು ನೋಡಿ.

ಅರ್ಜಿ ಸಲ್ಲಿಕೆಗೆ ಕೊನೆ ದಿನ. ಆಗಸ್ಟ್ 15, 2023. ಅರ್ಜಿ ಶುಲ್ಕ: ₹100. ಮಹಿಳೆ/SC/ST/EXS ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ. ವೇತನ ಶ್ರೇಣಿ: ₹ 35,400 ರಿಂದ ₹1,12,400

ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷಗಳು, ಗರಿಷ್ಠ 25 ವರ್ಷಗಳು. ಎಸ್.ಸಿ/ಎಸ್.ಟಿ/ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ. ವಿವರಗಳಿಗಾಗಿ ಅಧಿಸೂಚನೆಯ ಪ್ಯಾರಾ 5.2 ಅನ್ನು ನೋಡಬಹುದು.

ಎರಡು ಪತ್ರಿಕೆಗಳಲ್ಲಿನ ಪ್ರಶ್ನೆಗಳು ವಸ್ತುನಿಷ್ಠ ಮಾದರಿಯಲ್ಲಿರುತ್ತವೆ. ತಪ್ಪು ಉತ್ತರಕ್ಕೆ ಅಂಕ ಕಳೆಯಲಾಗುತ್ತದೆ. (ಪರೀಕ್ಷೆ ಕುರಿತ ಇನ್ನಷ್ಟು ವಿವರಗಳಿಗೆ ಅಧಿಸೂಚನಯೆ ಪ್ಯಾರಾ-12 &16 ನೋಡಿ).

ಗಮನಿಸಿ: ಎನ್‌ಸಿಸಿ ಪ್ರಮಾಣಪತ್ರ ಹೊಂದಿರುವವರಿಗೆ ಹೆಚ್ಚುವರಿ ಅಂಕಗಳನ್ನು ನೀಡಲಾಗುವುದು. ಎನ್‌ಸಿಸಿ ‘ಎ’ ಸರ್ಟಿಫಿಕೆಟ್‌ಗೆ ಹೊಂದಿರುವರಿಗೆ 4 ಅಂಕಗಳು(ಗರಿಷ್ಠ ಅಂಕದಲ್ಲಿ ಶೇ 2), ‘ಬಿ’ ಸರ್ಟಿಫಿಕೆಟ್‌ಗೆ 6 ಅಂಕಗಳು (ಗರಿಷ್ಠ ಅಂಕದಲ್ಲಿ ಶೇ 3) ಮತ್ತು ‘ಸಿ’ ಸರ್ಟಿಫಿಕೆಟ್‌ಗೆ 10 ಅಂಕಗಳನ್ನು(ಗರಿಷ್ಠ ಅಂಕದಲ್ಲಿ ಶೇ 5)ನೀಡಲಾಗುತ್ತದೆ.

ಪರೀಕ್ಷಾ ಕೇಂದ್ರಗಳು: ಕರ್ನಾಟಕದಲ್ಲಿ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಕಲಬುರ್ಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ ಮತ್ತು ಕೇರಳದಲ್ಲಿ ತಿರುವನಂತಪುರಂ, ಕೊಲ್ಲಂ, ಕೋಟ್ಟಾಯಂ, ಕೊಯಿಕ್ಕೋಡ್, ತ್ರಿಶೂರ್, ಕವರಟ್ಟಿ.

ಪರೀಕ್ಷೆಯ ನಿಖರ ದಿನಾಂಕ ಮತ್ತಿತರ ವಿವರಗಳಿಗಾಗಿ

www.ssckkr.kar.nic.in ಮತ್ತು https://ssc.nic.in ಜಾಲತಾಣಗಳನ್ನು ನೋಡಬಹುದು.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ನಿಯಮಿತವಾಗಿ ಈ ವೆಬ್‌ಸೈಟ್‌ಗಳಿಗೆ ಭೇಟಿ ನೀಡಲು ಸೂಚಿಸಲಾಗಿದೆ: ssc ಮುಖ್ಯ ಕಚೇರಿ ನವದೆಹಲಿಯ ವೆಬ್‌ಸೈಟ್ https://ssc.nic.in ಮತ್ತು ಎಸ್‌ಎಸ್‌ಸಿ ಕರ್ನಾಟಕ-ಕೇರಳ ಪ್ರದೇಶದ ವೆಬ್‌ಸೈಟ್ www.ssckkr.kar.nic.in

ಅಧಿಸೂಚನೆ ಲಿಂಕ್: (https://ssc.nic.in/SSCFileServer/PortalManagement/UploadedFiles/notice_CPO-SI-2023_22072023.pdf).

(ಪೂರಕ ಮಾಹಿತಿ: ಸಿಬ್ಬಂದಿ ನೇಮಕಾತಿ ಆಯೋಗ (ಕರ್ನಾಟಕ ಕೇರಳ ಪ್ರದೇಶ, ಭಾರತ ಸರ್ಕಾರ), ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.