ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಮಯವನ್ನೂ ಸಂವಹನವೆಂದು ಗಂಭೀರವಾಗಿ ಗಣಿಸುವವರು ಗೆಲ್ಲುತ್ತಾರೆ. ಸಮಯಕ್ಕೆ ಎಷ್ಟರಮಟ್ಟಿನ ಪ್ರಾಧಾನ್ಯ ಕೊಡುತ್ತಾರೋ ಅದಕ್ಕೆ ಪೂರಕವಾಗಿ ಪ್ರತಿಫಲ ಪಡೆಯುತ್ತಾರೆ!

ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅನೇಕ ರೀತಿಯಲ್ಲಿ ಅಭ್ಯರ್ಥಿಗಳ ಪರೀಕ್ಷೆ ನಡೆಯುತ್ತದೆ. ಅದರಲ್ಲಿ ಒಂದು- ಅವರ ಸಮಯ ನಿರ್ವಹಣೆಯ ಚಾಕಚಕ್ಯತೆ, ಅಭ್ಯರ್ಥಿಗೆ ಗೊತ್ತಿಲ್ಲದೇ ನಡೆಯುವ ಪರೀಕ್ಷೆ. ಉದಾಹರಣೆಗೆ 20 ಪ್ರಶ್ನೆಗಳನ್ನು ನೀಡಿ ಮೂರು ಗಂಟೆಯಲ್ಲಿ ಎಲ್ಲಾ 20 ಪ್ರಶ್ನೆಗಳನ್ನು ಉತ್ತರಿಸಲು ಹೇಳಲಾಗುತ್ತದೆ. ಅಂದರೆ ಒಂದು ಪ್ರಶ್ನೆಗೆ ಉತ್ತರಿಸಲು ಅಭ್ಯರ್ಥಿಗೆ ಸಿಗುವ ವಾಸ್ತವ ಸಮಯ ಒಂಬತ್ತು ನಿಮಿಷಕ್ಕೂ ಕಡಿಮೆ. ಹೀಗಿರುವಾಗ ಈ ಒಂಬತ್ತು ನಿಮಿಷದಲ್ಲಿ ಪ್ರತಿ ಪ್ರಶ್ನೆಗೂ ಉತ್ತರವನ್ನು ಹೇಗೆ ಹೊಂದಿಸುತ್ತೀರಿ ಹಾಗೂ ಒಟ್ಟೂ 180 ನಿಮಿಷಗಳಲ್ಲಿ 20 ಪ್ರಶ್ನೆಗಳಿಗೆ ಉತ್ತರ ಬರೆಯಲು ಹೇಗೆ ಸಮಯ ಹೊಂದಿಸಿ ಕೊಳ್ಳುತ್ತೀರಿ ಎಂಬುದು ಇಲ್ಲಿ ನಡೆಯುವ ಪರೀಕ್ಷೆ.

ನೂರಕ್ಕೆ 90 ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲೇ ನಪಾಸಾಗುವುದು ಎಂದರೆ ಅಚ್ಚರಿಯಾದೀತು! ಅಂದರೆ ಹೆಚ್ಚಿನವರು ಮೊದಲ ಹತ್ತು ಪ್ರಶ್ನೆಗಳಿಗೆ ಉತ್ತರಿಸುವುದರಲ್ಲೇ ಎರಡೂವರೆ ಗಂಟೆಗಳನ್ನು ಕಳೆದುಬಿಡುತ್ತಾರೆ. ಆಗ ಉಳಿದ ಹತ್ತು ಪ್ರಶ್ನೆಗಳಿಗೆ ಉತ್ತರಿಸಲು ಸಮಯವೇ ಇರುವುದಿಲ್ಲ. ಈ ಪ್ರಶ್ನೆಗಳನ್ನು ಬಿಡುತ್ತಾರೆ ಅಥವಾ ಅವಕ್ಕೆ ಬೇಕಾಬಿಟ್ಟಿ ಉತ್ತರ ಗೀಚಿರುತ್ತಾರೆ. ಇಂಥ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವವರಿಗೆ ‘ಈ ಅಭ್ಯರ್ಥಿಗೆ ಸಮಯ ಹೊಂದಿಸಿಕೊಳ್ಳುವ ಗುಣವಿಲ್ಲ’ ಎಂದು ಕೊಳ್ಳುತ್ತಾರೆ. ಆಗ ಆರಂಭದ ಉತ್ತರಗಳಿಗೆ ಒಳ್ಳೆಯ ಅಂಕಗಳು ಬಂದರೆ ಕೊನೆಯ ಉತ್ತರಗಳಿಗೆ ಸೊನ್ನೆ ಬರಬಹುದು. ಸಮಯದ ಸರಿಯಾದ ನಿರ್ವಹಣೆ ಮಾಡಲಾಗದ ಕಾರಣಕ್ಕೆ ಅಭ್ಯರ್ಥಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸೋಲುತ್ತಾನೆ.

ಸಂವಹನದ ವಿಧಗಳು

ಸಂವಹನವನ್ನು ಶಾಬ್ದಿಕ ಮತ್ತು ಅಶಾಬ್ದಿಕ ಸಂವಹನ ಎಂಬುದಾಗಿ ವಿಂಗಡಿಸುತ್ತಾರೆ. ನಿಜವೆಂದರೆ ಸಂವಹನದಲ್ಲಿ ಇವೆರಡೇ ವಿಧಗಳು. ಉಳಿದ ವುಗಳು ಸಂವಹನದ ಹಂತಗಳು. ಯಾವುದನ್ನು ಮಾತನಾಡುವ ಅಥವಾ ಬರೆಯುವ ಶಬ್ದಗಳನ್ನು ಬಳಸಿ ಮಾಡಲಾಗುತ್ತದೆಯೋ ಆ ಸಂವಹನ ಶಾಬ್ದಿಕ ಸಂವಹನವಾದರೆ ಶಬ್ದಗಳನ್ನು ಬಳಸದೇ ವಸ್ತುಗಳನ್ನು ಅಥವಾ ಸಂಜ್ಞೆಗಳನ್ನು, ಚಿತ್ರಗಳನ್ನು ಬಳಸಿ ಮಾಡುವ ಸಂವಹನ ಅಶಾಬ್ದಿಕ ಸಂವಹನ. ಅತ್ಯಂತ ಸರಳ ಉದಾಹರಣೆಯೆಂದರೆ ‘ಎಲೆ’ ಅಂತ ಬರೆಯುವುದು ಅಥವಾ ಹೇಳುವುದು ಶಾಬ್ದಿಕ ಸಂವಹನವಾದರೆ, ಎಲೆಯನ್ನು ತೋರಿಸು ವುದು ಅಥವಾ ಬಿಡಿಸಿ ತೋರಿಸುವುದು ಅಶಾಬ್ದಿಕ ಸಂವಹನವಾಗುತ್ತದೆ. ಅವು ಸಂಜ್ಞೆಯ ರೂಪದಲ್ಲಿ ರುವುದರಿಂದ ಅದನ್ನು ಸಂಜ್ಞಾರೂಪಿ ಸಂವಹನ ಎಂತಲೂ ಕರೆಯಲಾ ಗುತ್ತದೆ.

ವಾಸ್ತವವಾಗಿ, ನಾವು ಮಾಡುವ ಬಹುತೇಕ ಸಂವಹನ ಸಂಜ್ಞಾರೂಪಿ ಸಂವಹನವೇ. ಜೀವನದಲ್ಲಿ ಮಾಡುವ ಎಲ್ಲ ಕೆಲಸವೂ ಇತರರಿಗೆ ಸಂಜ್ಞಾರೂಪಿ ಸಂವಹನವಾಗಬಹುದು. ನೀವು ಪತ್ರಕ್ಕೆ ಕೂಡಲೇ ಉತ್ತರ ಬರೆದರೆ ಒಂದು ಸಂವಹನ. ಉತ್ತರ ಬರೆಯದಿದ್ದರೂ ಅದು ಸಂವಹನವೇ. ಆದರೆ ಜೀವನದಲ್ಲಿ ಅಶಾಬ್ದಿಕ ಸಂವಹನದ ಮಹತ್ವವನ್ನು ನಾವು ನಿರಂತರವಾಗಿ ಕಡೆಗಣಿಸಿ ಗೊತ್ತಿಲ್ಲದೇ ಬಹಳ ಬೆಲೆ ತೆರುತ್ತೇವೆ.

ಸಮಯ ನಿರ್ವಹಣೆ

ಸಂಜ್ಞಾರೂಪಿ ಸಂವಹನದ ವಿಧಗಳಲ್ಲಿ ಸಮಯವೂ ಕೂಡಾ ಒಂದು. ಸಂವಹನವಾಗಿ ಸಮಯ ನಮ್ಮ ಜೀವನದಲ್ಲಿ ಬಹಳವಾಗಿ ಅಲಕ್ಷ್ಯಕ್ಕೆ ಒಳಗಾದ ಅಂಶ. ಸಮಾಜವು ನಿಮ್ಮ ವ್ಯಕ್ತಿತ್ವವನ್ನು ಅಳೆಯುವ ಮಾನದಂಡ ಗಳಲ್ಲಿ ಸಮಯವೂ ಒಂದು ಎಂಬುದನ್ನು ಬಹಳಷ್ಟು ಜನ ಅರ್ಥಮಾಡಿಕೊಳ್ಳುವುದಿಲ್ಲ. ನೀವು 10 ಗಂಟೆಗೆ ಬರಲು ಹೇಳಿ 12 ಗಂಟೆಗೆ ಹೋದರೆ ಮುಂದಿನ ಸಾರಿ ನಿಮ್ಮ ಕರೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ.

ಸುಲಭವಾಗಿ ನಮಗೆ ಸಮಯವಿರಲಿಲ್ಲ ಎನ್ನುತ್ತೇವೆ. ಸಮಯ ಯಾರಿಗೂ ಇರುವುದಿಲ್ಲ ಅಥವಾ ಎಲ್ಲರಿಗೂ ಇರುವುದು ದಿನಕ್ಕೆ 24 ಗಂಟೆ ಮಾತ್ರ. ಆದರೆ ಅದನ್ನು ನಾವು ನಮ್ಮ ಕೆಲಸಗಳಿಗೆ ಹೇಗೆ ಹೊಂದಿಸಿಕೊಳ್ಳುತ್ತೇವೆ ಎಂಬುದು ಮುಖ್ಯ. ಕೊಟ್ಟ ಮಾತು ನಡೆಸಿಕೊಡುವುದರ ಮೇಲೆ ಜನ ವ್ಯಕ್ತಿತ್ವವನ್ನು ಅಳೆಯುತ್ತಾರೆ. ಸಮಯಕ್ಕೆ ಕೊಡುವ ಬೆಲೆ ನಿಮ್ಮ ವ್ಯಕ್ತಿತ್ವದ ಬಗ್ಗೆ ಗೌರವ ಹೆಚ್ಚಿಸುತ್ತದೆ. ಎಲ್ಲರಿಗಿಂತ ನೀವು ಹೇಗೆ ಭಿನ್ನರು ಎಂಬುದನ್ನು ಸ್ಥಾಪಿಸುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಮಯವೂ ಒಂದು ಸಂವಹನ ಮಾದರಿ. ನೀವು 180 ನಿಮಿಷಗಳ ಸಮಯವನ್ನು ಹೇಗೆ ಹೊಂದಿಸಿಕೊಂಡು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತೀರೋ, ಹಾಗೆ ನಿಮ್ಮ ಬಗ್ಗೆ ಮೌಲ್ಯಮಾಪಕರಿಗೆ ಒಂದು ಅಭಿಪ್ರಾಯ ಮೂಡಲು ಕಾರಣವಾಗುತ್ತದೆ.

ನಿಮ್ಮ ಬರಹದ ಶಿಸ್ತು, ಸಮಯ ನಿರ್ವಹಣೆಯ ಕೌಶಲ, ವ್ಯಕ್ತಿನಿಷ್ಠ ಮಾದರಿಯ ಉತ್ತರಗಳನ್ನು ಮೌಲ್ಯಮಾಪನ ಮಾಡುವಾಗ ಖಂಡಿತವಾಗಿ ಪ್ರಭಾವ ಬೀರುತ್ತದೆ. ಸಮಯವನ್ನೂ ಸಂವಹನವೆಂದು ಗಂಭೀರವಾಗಿ ಪರಿಗಣಿಸುವವರು ಗೆಲ್ಲುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಾರ್ಯಾರು ಸಮಯಕ್ಕೆ ಎಷ್ಟರಮಟ್ಟಿನ ಪ್ರಾಧಾನ್ಯ ಕೊಡುತ್ತಾರೋ ಅದಕ್ಕೆ ಪೂರಕವಾಗಿ ಪ್ರತಿಫಲ ಪಡೆಯುತ್ತಾರೆ!

(ಲೇಖಕರು: ಸಂವಹನ ಪ್ರಾಧ್ಯಾಪಕರು ಮತ್ತು ಕುಲಪತಿ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕೋಲಾರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.