1. ನನ್ನ ಮಗ ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್) ನಂತರ ಎಂಬಿಎ ಮಾಡಬೇಕೆಂದುಕೊಂಡಿದ್ದಾನೆ. ಆದರೆ, ಎಂಬಿಎ ಆಯ್ಕೆಯಲ್ಲಿ ಗೊಂದಲವಿದೆ. ದಯವಿಟ್ಟು ನಿಮ್ಮ ಸಲಹೆ ನೀಡಿ.

-ವನಜಾಕ್ಷಿ, ಊರು ತಿಳಿಸಿಲ್ಲ.

2. ನಾನು ಬಿ.ಇ (ಪಾಲಿಮರ್ ಸೈನ್ಸ್ ಅಂಡ್ ಟೆಕ್ನಾಲಜಿ) ಮುಗಿಸಿ ಎಂಬಿಎ ಮಾಡಬಯಸಿದ್ದೇನೆ. ಬದುಕಿನಲ್ಲಿ ಉತ್ತಮ ಸ್ಥಾನವನ್ನು ಗಳಿಸಲು ಯಾವ ಕೋರ್ಸ್ ಮಾಡಬಹುದೆಂದು ತಿಳಿಸಿ.

-ಹೆಸರು, ಊರು ತಿಳಿಸಿಲ್ಲ.

ವೈವಿಧ್ಯಮಯ ಮತ್ತು ಬಹುಪಯೋಗಿ ಗುಣಲಕ್ಷಣಗಳಿಂದ ಅಸಂಖ್ಯಾತ ಉದ್ಯಮಗಳಲ್ಲಿ ಪಾಲಿಮರ್‌ಗಳ ಬಳಕೆಯಾಗುತ್ತಿದೆ. ಎಂಬಿಎ ಕೋರ್ಸ್‌ನಲ್ಲಿ ವೃತ್ತಿಗೂ, ಜೀವನಕ್ಕೂ ಅಗತ್ಯವಾದ ಅನೇಕ ಮೂಲಭೂತ ತತ್ವಗಳ, ಮೌಲ್ಯಗಳ ಮನದಟ್ಟಾಗುತ್ತದೆ. ಈ ತತ್ವಗಳ ಆಧಾರದ ಮೇಲೆ, ನೀವು ವೃತ್ತಿ ಮತ್ತು ಖಾಸಗಿ ಜೀವನಗಳೆರಡರಲ್ಲೂ ಯಶಸ್ಸು ಸಾಧಿಸಬಹುದು. ಹಾಗಾಗಿ ನಮ್ಮ ಅಭಿಪ್ರಾಯದಂತೆ, ಬಿ.ಇ ನಂತರ ವೃತ್ತಿಪರ ಜೀವನವನ್ನು ರೂಪಿಸಿಕೊಳ್ಳಲು, ಎಂಬಿಎ ಉತ್ತಮ ಆಯ್ಕೆ.

ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯನ್ನು ಪರಿಗಣಿಸಿ, ಯಾವ ವಿಭಾಗದ ವೃತ್ತಿಯಲ್ಲಿ ಹೆಚ್ಚಿನ ತೃಪ್ತಿ ಮತ್ತು ಯಶಸ್ಸು ನಿಮ್ಮದಾಗಬಹುದೆಂದು ಪರಿಶೀಲಿಸಿ, ಅದರಂತೆ ವೃತ್ತಿಯೋಜನೆಯನ್ನು ತಯಾರಿಸಿ. ಉದಾಹರಣೆಗೆ, ಉತ್ಪಾದನಾ ಕ್ಷೇತ್ರ, ಮಾರುಕಟ್ಟೆಯ ನಿರ್ವಹಣೆ, ಮಾನವ ಸಂಪನ್ಮೂಲದ ನಿರ್ವಹಣೆ, ಲಾಜಿಸ್ಟಿಕ್ಸ್, ಹಣಕಾಸು ಮುಂತಾದ ಸ್ಪೆಷಲೈಸೇಷನ್‌ಗಳಲ್ಲಿ ಎಂಬಿಎ ಮಾಡಬಹುದು. ಹಾಗೂ, ಅನೇಕ ವಿಶ್ವವಿದ್ಯಾಲಯಗಳಲ್ಲಿ ಎಂಬಿಎ (ವೇಸ್ಟ್ ಮ್ಯಾನೇಜ್‌ಮೆಂಟ್ ಅಂಡ್ ಸೋಷಿಯಲ್ ಎಂಟರ್‌ಪ್ರೆನರ್‌ಷಿಪ್) ಕೋರ್ಸ್ ಲಭ್ಯವಿದೆ ಎನ್ನುವುದು ನಿಮ್ಮ ಗಮನದಲ್ಲಿರಲಿ. ವೃತ್ತಿಯೋಜನೆಯನ್ನು ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/@ExpertCareerConsultantAuthor

3. ನಾನು ಬಿ.ಎ (ಅರ್ಥಶಾಸ್ತ್ರ, ರಾಜ್ಯಶಾಸ್ತ್ರ) ಓದುತ್ತಿದ್ದೇನೆ. ಆದರೆ, ನನಗೆ ಎಂಎ (ಪತ್ರಿಕೋದ್ಯಮ) ಓದುವ ಆಸಕ್ತಿಯಿದೆ. ಅದನ್ನು ತೆಗೆದುಕೊಳ್ಳುವ ಆವಕಾಶವಿದೆಯೇ?

-ಗಣೇಶ್, ಹೆಸರಘಟ್ಟ, ಬೆಂಗಳೂರು.

ಅನೇಕ ವಿಶ್ವವಿದ್ಯಾಲಯಗಳಲ್ಲಿ ಎಂಎ (ಪತ್ರಿಕೋದ್ಯಮ) ಕೋರ್ಸ್ ಅನ್ನು ಯಾವುದೇ ಪದವಿಯ ನಂತರ ಮಾಡುವ ಅವಕಾಶವಿದೆ. ಹಾಗಾಗಿ, ನಿಮಗೆ ಯಾವ ವಿಶ್ವವಿದ್ಯಾಲಯ ಸೂಕ್ತ ಎಂದು ನಿರ್ಧರಿಸಬಹುದು. ಹಾಗೂ, ಕ್ಯಾಂಪಸ್ ನೇರ ನೇಮಕಾತಿಯಿರುವ ಅನೇಕ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ (ಪತ್ರಿಕೋದ್ಯಮ), ಕೂಡ ಮಾಡಬಹುದು.

ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು shikshana@prajavani.co.in ಗೆ ಕಳಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.