1. ನಾನು ದ್ವಿತೀಯ ಪಿಯುಸಿ (ಪಿಸಿಎಂಬಿ) ಓದುತ್ತಿದ್ದೇನೆ. ಮುಂದೆ ಬಿಎಸ್ಸಿ (ಮನಃಶಾಸ್ತ್ರ) ಮಾಡಬೇಕು ಎಂದುಕೊಂಡಿದ್ದೇನೆ. ಈ ವಿಷಯವನ್ನು ಬೋಧಿಸುವ ಬೆಂಗಳೂರಿನ ಉತ್ತಮ ಕಾಲೇಜಿನ ಬಗ್ಗೆ ಮಾಹಿತಿ ನೀಡಿ. ಇದೇ ವಿಷಯದಲ್ಲಿ ಎಂ.ಎಸ್ಸಿ ಮಾಡಿದರೆ ಉದ್ಯೋಗಾವಕಾಶಗಳು ಹೇಗಿವೆ ತಿಳಿಸಿ. ಬಿಎಸ್ಸಿ (ಮನಃಶಾಸ್ತ್ರ) ನಾಲ್ಕು ವರ್ಷದ ಕೋರ್ಸ್ ಇದೆ ಎಂದು ಕೇಳಿದ್ದೇನೆ. ಅದಕ್ಕೆ ಸಿಇಟಿ ಬರೆಯಬೇಕೆ? ಎಂಬ ಗೊಂದಲವಿದೆ. ಆ ಬಗ್ಗೆಯೂ ಮಾಹಿತಿ ನೀಡಿ.
–ರಶ್ಮಿ, ಬೆಂಗಳೂರು
ಸಾಮಾನ್ಯವಾಗಿ ಬಿ.ಎಸ್ಸಿ (ಮನಃಶಾಸ್ತ್ರ) ಮೂರು ವರ್ಷದ ಕೋರ್ಸ್ ಆಗಿರುತ್ತದೆ. ಪಿಇಎಸ್ ಸೇರಿದಂತೆ ವಿವಿಧ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ನಾಲ್ಕು ವರ್ಷದ ಬಿಎಸ್ಸಿ (ಮನಃಶಾಸ್ತ್ರ-ಆನರ್ಸ್) ಕೋರ್ಸ್ ಮಾಡಬಹುದು. ಕೆಲವು ಕಾಲೇಜುಗಳಲ್ಲಿ ಪಿಯುಸಿ ಫಲಿತಾಂಶದ ಆಧಾರದ ಮೇಲೆ ನೇರವಾಗಿ ಪ್ರವೇಶ ಪಡೆಯಬಹುದು ಮತ್ತು ಕೆಲವು ಪ್ರತಿಷ್ಟಿತ ವಿಶ್ವ ವಿದ್ಯಾಲಯಗಳಲ್ಲಿ ಪ್ರವೇಶ ಪರೀಕ್ಷೆಯಿರುತ್ತದೆ. ಉತ್ತಮ ಕಾಲೇಜುಗಳ ಆಯ್ಕೆ ಪ್ರಕ್ರಿಯೆ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=DmaXk-MuoOI

2. ನಾನು ಬಿಬಿಎ ಮುಗಿಸಿ, ಕೆಎಎಸ್ ಪರೀಕ್ಷೆಗೆ ತಯಾರಿ ನಡೆಸಿದ್ದೇನೆ. ಮುಂದೆ ಸ್ನಾತಕೋತ್ತರ ಪದವಿ ಮಾಡಬೇಕು ಎಂದುಕೊಂಡಿದ್ದೇನೆ. ದೂರಶಿಕ್ಷಣದ ಮೂಲಕ ಎಂಬಿಎ, ಎಂ.ಎ. ಎಂ.ಕಾಂ ಬಿಟ್ಟರೆ ಬೇರೆ ಯಾವ ಕೋರ್ಸ್ ಮಾಡಬಹುದು ತಿಳಿಸಿ.
–ಕುಸುಮಾ, ಹಾಸನ
ಈಗ 40ಕ್ಕೂ ಹೆಚ್ಚಿನ ವಿಶ್ವವಿದ್ಯಾಲಯಗಳಲ್ಲಿ ಸುಮಾರು 375 ಪದವಿ ಕೋರ್ಸ್‌ಗಳನ್ನು ದೂರಶಿಕ್ಷಣದ ಮುಖಾಂತರ ಮಾಡಬಹುದು. ಎಂ.ಎ, ಎಂ.ಕಾಂ, ಎಂ.ಬಿ.ಎ, ಎಂ.ಎಸ್ಸಿ, ಎಂ.ಸಿ.ಎ ಮತ್ತಿತರ ಸ್ನಾತಕೋತ್ತರ ಕೋರ್ಸ್‌ಗಳನ್ನು ಈಗ ದೂರಶಿಕ್ಷಣದ ಮುಖಾಂತರ ಮಾಡಲು ಅವಕಾಶವಿದೆ. ಕೋರ್ಸ್ ಆಯ್ಕೆಯ ಮುನ್ನ, ದೂರ ಶಿಕ್ಷಣ ಬ್ಯೂರೊ, ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ), ಮಾನ್ಯತೆ ಇದೆಯೇ ಎಂದು ಪರಿಶೀಲಿಸಿ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.classcentral.com/report/india-online-degrees/

3. ಬಿ.ಟೆಕ್ ದಾಖಲಾದ ಆರಂಭದ ದಿನಗಳನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕು? ಕಾಲೇಜಿನ ತರಗತಿ ಹೊರತಾಗಿ, ನಮ್ಮ ಪ್ರಯತ್ನ ಹೇಗಿರಬೇಕು ಎಂದು ತಿಳಿಸಿ ಸರ್.
–ಅಭಿಷೇಕ್, ಕಲಬುರ್ಗಿ
ಸಕಾರಾತ್ಮಕವಾದ ಆಲೋಚನೆಯಿಂದ ಈ ಪ್ರಶ್ನೆಯನ್ನು ಕೇಳಿರುವ ನಿಮಗೆ ಅಭಿನಂದನೆಗಳು. ಕಾಲೇಜುಗಳಲ್ಲಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂವಹನದ ಕೊರತೆಯಿಂದ ಪ್ರಸ್ತುತ ಕಲಿಕೆಯ ವಿಧಾನಗಳು ಮೇಲ್ನೋಟಕ್ಕೆ ನಿಷ್ಪರಿಣಾಮಕಾರಿ ಎನಿಸುವುದು ಸಹಜ. ವೃತ್ತಿ ಜೀವನದ ನಿಮ್ಮ ಕನಸುಗಳು ನನಸಾಗಬೇಕಾದರೆ, ನಿಮ್ಮ ಕಲಿಕೆ ಪರಿಣಾಮಕಾರಿಯಾಗಬೇಕು. ಹಾಗಾಗಿ, ಈ ಸಲಹೆಗಳನ್ನು ಗಮನಿಸಿ:

• ಪ್ರಶ್ನೆಗಳನ್ನು ಕೇಳುವ ಸಾಮರ್ಥ್ಯ ಪರಿಣಾಮಕಾರಿ ಕಲಿಕೆಯಲ್ಲಿ ನಿರ್ಣಾಯಕವಾಗುತ್ತದೆ. ಏಕೆಂದರೆ, ಪ್ರಶ್ನೆಗಳು ತರಗತಿಗಳಲ್ಲಿ ಚರ್ಚೆಯನ್ನು ಹುಟ್ಟುಹಾಕುತ್ತದೆ ಮತ್ತು ಸ್ವಗತದ ಆಯಾಸವನ್ನು ನಿವಾರಿಸುತ್ತದೆ. ಏಕತಾನತೆ ಮತ್ತು ಮಂದವಾದ ತರಗತಿಯ ಪರಿಸರ ಇದ್ದಕ್ಕಿದ್ದಂತೆ ಜ್ಞಾನೋದಯವನ್ನು ಬೆಳಗಿಸುವ ಉತ್ತೇಜಕ ಪ್ರಯತ್ನವಾಗುತ್ತದೆ. ಅದ್ದರಿಂದ, ಪ್ರಶ್ನೆಗಾರಿಕೆ ನಿಮ್ಮ ಕಲಿಕೆಯ ಪ್ರಮುಖ ತಂತ್ರವಾಗಿರಲಿ.

• ಸಕ್ರಿಯವಾದ ಪ್ರಶ್ನೆಗಾರಿಕೆಯಿಂದ ನಿಮ್ಮ ವಿಮರ್ಶಾತ್ಮಕ ಚಿಂತನಾ ಕೌಶಲ ವೃದ್ಧಿಯಾಗಿ, ಯಾವುದೇ ವಿಷಯದ ಬಗ್ಗೆ ಸ್ಪಷ್ಟವಾದ ಒಳನೋಟ ದೊರಕುತ್ತದೆ.

• ತಂತ್ರಜ್ಞಾನದ ಕೋರ್ಸ್‌ಗಳಲ್ಲಿ ತರಗತಿಯ ಹೊರಗಿನ ಅಧ್ಯಯನ ಮುಖ್ಯವಾಗುತ್ತದೆ. ಹಾಗಾಗಿ, ಕಾಲೇಜಿನ ಗ್ರಂಥಾಲಯದಲ್ಲಿ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ನಿಯತಕಾಲಿಕೆಗಳು, ಜರ್ನಲ್ಸ್, ಕೇಸ್ ಸ್ಟಡೀಸ್, ಪ್ರಾಜೆಕ್ಟ್ ರಿಪೋರ್ಟ್ಸ್, ಪ್ರಬಂಧಗಳು ಮತ್ತು ಸಂಶೋಧನಾತ್ಮಕ ಗ್ರಂಥಗಳನ್ನು ಅಧ್ಯಯನ ಮಾಡಬೇಕು.

• ಜ್ಞಾನಾರ್ಜನೆಯ ಜೊತೆಗೆ ಕೌಶಲಾಭಿವೃದ್ಧಿಯ ಬಗ್ಗೆಯೂ ಗಮನವಿರಲಿ. ವೃತ್ತಿ ಸಂಬಂಧಿತ ಕೌಶಲಗಳ ಜೊತೆಗೆ ಪ್ರಾಥಮಿಕ ಕೌಶಲಗಳನ್ನು (ಯೋಜನೆ, ಸಮಯದ ನಿರ್ವಹಣೆ, ಸಂವಹನ, ಅಂತರ್-ವೈಯಕ್ತಿಕ ನೈಪುಣ್ಯ, ನಾಯಕತ್ವದ ಕೌಶಲಗಳು ಇತ್ಯಾದಿ) ಬೆಳೆಸಿಕೊಳ್ಳಿ. ಇದರಿಂದ ಕ್ಯಾಂಪಸ್ ನೇಮಕಾತಿ ಸುಲಭವಾಗಿ, ನಿಮ್ಮ ವೃತ್ತಿ ಜೀವನವನ್ನು ಉಜ್ವಲವಾಗಿ ರೂಪಿಸಿಕೊಳ್ಳಬಹುದು.

4. ನಾನು ಪದವಿ ಬಿ.ವೊಕ್ (ಬ್ಯಾಚುಲರ್ ಇನ್ ವೊಕೇಷನಲ್ ಸ್ಟಡೀಸ್) ಮುಗಿಸಿದ್ದು, ಈಗ ನಾನು ಎಂಎಸ್ಸಿ (ಡಯಟಿಕ್ಸ್ ಮತ್ತು ಫುಡ್ ಸರ್ವೀಸ್ ಮ್ಯಾನೇಜ್‌ಮೆಂಟ್)) ಕೋರ್ಸ ಅನ್ನು ಇಗ್ನೊದಿಂದ ಪಡೆಯುತ್ತಿದ್ದೇನೆ. ಮುಂದೆ ಇರುವ ಅವಕಾಶಗಳ ಬಗ್ಗೆ ತಿಳಿಸಿ.
–ಹೆಸರು, ಊರು ತಿಳಿಸಿಲ್ಲ
ಜೀವನ ಶೈಲಿ ಮತ್ತು ಅಗತ್ಯಗಳು ಬದಲಾಗಿರುವ ಈ ಕಾಲಘಟ್ಟದಲ್ಲಿ ಸಿದ್ದಪಡಿಸಿದ ಆಹಾರ ಪದಾರ್ಥಗಳಿಗೆ ಹೆಚ್ಚಿನ ಬೇಡಿಕೆಯಿದ್ದು ಆಹಾರ ವಿಜ್ಞಾನ, ಆರೋಗ್ಯ ಮತ್ತು ಪೌಷ್ಟಿಕಾಂಶ ವಿಜ್ಞಾನ (ನ್ಯೂಟ್ರಿಷನ್) ಮುಂಚೂಣಿಯಲ್ಲಿದೆ. ಎಂ.ಎಸ್ಸಿ ಕೋರ್ಸ್ ನಂತರ, ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಆಹಾರ ಪದಾರ್ಥ ಮತ್ತು ಪಾನೀಯ ತಯಾರಿಕಾ ಉದ್ದಿಮೆಗಳು, ಹೋಟೆಲ್‌ಗಳು ಮತ್ತು ರೆಸ್ಟೊರೆಂಟ್‌ಗಳು, ಆಸ್ಪತ್ರೆಗಳು, ಫಿಟ್ನೆಸ್ ಸೆಂಟರ್ಸ್, ಶಿಕ್ಷಣ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಆಹಾರ ಪರೀಕ್ಷಾ ಪ್ರಯೋಗಾಲಯಗಳು, ಸಾವಯವ ಉದ್ದಿಮೆಗಳು, ಆಹಾರ ಸಂಬಂಧಿತ ( ಸಂರಕ್ಷಕಗಳು, ಬಣ್ಣಗಳು ಮತ್ತು ಸ್ವಾದಗಳು ಇತ್ಯಾದಿ) ಉದ್ದಿಮೆಗಳು ಸೇರಿದಂತೆ ಹಲವು ಕಡೆ ವಿಪುಲ ಉದ್ಯೋಗಾವಕಾಶಗಳಿವೆ.

5. ನಾನು ಬಿಎ (ಪತ್ರಿಕೋದ್ಯಮ) ಓದುತ್ತಿದ್ದೇನೆ ಮುಂದೆ ಎಲ್‌ಎಲ್‌ಬಿ ಮಾಡುವ ಆಸಕ್ತಿ ಇದೆ. ಇದಕ್ಕೆ ನಿಮ್ಮ ಸಲಹೆ ತಿಳಿಸಿ.
–ಹೆಸರು, ಊರು ತಿಳಿಸಿಲ್ಲ.
ಬಿಎ ನಂತರ ಎಲ್‌ಎಲ್‌ಬಿ ಕೋರ್ಸ್ ಮಾಡಬಹುದು. ಮುಖ್ಯವಾಗಿ, ನಿಮ್ಮ ಆಸಕ್ತಿ, ಅಭಿರುಚಿಯಂತೆ ಪತ್ರಕರ್ತ ರಾಗಬೇಕೇ ಅಥವಾ ವಕೀಲರಾಗಬೇಕೇ ಎಂದು ನಿರ್ಧರಿಸಿ, ಅದರಂತೆ ಮುಂದಿನ ಕೋರ್ಸ್ ಆಯ್ಕೆ ಮಾಡುವುದು ಸೂಕ್ತ.

6. ನಾನು 2007–08 ರಲ್ಲಿ ಎಂಎ (ಇಂಗ್ಲಿಷ್) ಕೋರ್ಸ್‌ಗೆ ಪ್ರವೇಶ ಪಡೆದುಕೊಂಡಿದ್ದೆ. ಆದರೆ ವೈಯಕ್ತಿಕ ಕಾರಣಗಳಿಂದ ಮುಂದುವರಿಯಲು ಆಗಲಿಲ್ಲ. ಈಗ ಕೋರ್ಸ್ ಮುಂದುವರಿಸಲು ಮನಸ್ಸು ಮಾಡಿದ್ದೇನೆ. ಅಡ್ಮಿಷನ್ ವೇಳೆ ಕೊಟ್ಟ ದಾಖಲಾತಿ ಸಂಖ್ಯೆಯನ್ನು ಇಟ್ಟುಕೊಂಡಿದ್ದೇನೆ. ಅದರ ಆಧಾರದ ಮೇಲೆ ಮುಂದುವರಿಯಬಹುದೇ?
–ಹೆಸರು, ಊರು ತಿಳಿಸಿಲ್ಲ.

ನಮಗಿರುವ ಮಾಹಿತಿಯಂತೆ 2007–08 ರಲ್ಲಿ ಪ್ರವೇಶವನ್ನು ಪಡೆದ ಕೋರ್ಸ್ ಅನ್ನು ಈಗ ಮುಂದುವರಿಸಲು ಸಾಧ್ಯವಾಗಲಾರದು. ಹಾಗಾಗಿ, ಕೋರ್ಸ್ ಮುಂದುವರಿಸುವ ಸಾಧ್ಯತೆಯನ್ನು ವಿಶ್ವವಿದ್ಯಾಲಯದ ಅಧಿಕಾರಿಗಳೊಡನೆ ಚರ್ಚಿಸಿ ಹಾಗೂ ಎಂಎ (ಇಂಗ್ಲಿಷ್) ಕೋರ್ಸ್ ಅನ್ನು ಆನ್‌ಲೈನ್/ದೂರಶಿಕ್ಷಣದ ಮುಖಾಂತರ ಮಾಡಿದರೆ ನಿಮ್ಮ ಅಗತ್ಯಗಳು ಪೂರೈಸುತ್ತದೆಯೇ ಎಂದು ಪರಿಶೀಲಿಸಿ.

7. ನನ್ನ ಗೆಳತಿ ಪಿಎಸ್‌ಐ ಆಗಬೇಕೆಂಬ ಗುರಿ ಹೊಂದಿದ್ದಾಳೆ. ಒಂದು ಕಡೆ ಪಿಎಸ್‌ಐ ಹಗರಣ; ಮತ್ತೊಂದೆಡೆ, ಅವಳಿಗೆ ಮದುವೆ ಮಾಡಲು ಮನೆಯವರು ಒತ್ತಡ ಹೇರುತ್ತಿದ್ದಾರೆ. ಇದರಿಂದ ಗೊಂದಲಕ್ಕೆ ಒಳಗಾಗಿದ್ದಾಳೆ. ಇಂಥ ಸಂದರ್ಭದಲ್ಲಿ ಅವಳು ಪರಿಸ್ಥಿತಿಯನ್ನು ನಿಭಾಯಿಸಿ, ಓದಿನತ್ತ ಗಮನ ಹರಿಸುವುದು ಹೇಗೆ ಸರ್?
–ಸತೀಶ್, ಕೋಲಾರ.

ಸಾಧನೆಯ ಹಾದಿಯಲ್ಲಿ, ಆಂತರಿಕ ಮತ್ತು ಬಾಹ್ಯ ಪರಿಸರದ ಅಡಚಣೆಗಳು, ತೊಂದರೆಗಳು ಸರ್ವೇಸಾಮಾನ್ಯ. ನಿಮ್ಮ ಗೆಳತಿಯ ಕನಸುಗಳು ಸಾಕಾರವಾಗಬೇಕಾದರೆ, ಸ್ವಯಂಪ್ರೇರಣೆಯೇ ಅವರ ಸಾಧನೆಗೆ ಸಂಜೀವಿನಿಯಾಗಬೇಕು. ಇಂತಹ ಸವಾಲುಗಳನ್ನು ನಿರೀಕ್ಷಿಸಿ, ಮನಸ್ಸು ಸ್ಥಿತಪ್ರಜ್ಞೆಯಿಂದಿದ್ದರೆ ಸೃಜನಶೀಲ ಚಿಂತನೆ ಸಾಧ್ಯವಾಗಿ, ಸಾಧನೆಯ ಹಾದಿ ಸುಗಮವಾಗುತ್ತದೆ. ಹಾಗಾಗಿ, ಇನ್ನೂ ಹೆಚ್ಚಿನ ಏಕಾಗ್ರತೆ, ದೃಢತೆ ಮತ್ತು ಸಮಯದ ನಿರ್ವಹಣೆಯಿಂದ ತಯಾರಾಗಿ, ಪಿಎಸ್‌ಐ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಗಳಿಸಲು ಪ್ರಯತ್ನಿಸಬೇಕು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಗಮನಿಸಿ: http://www.vpradeepkumar.com/self-motivation/

8. ನನಗೆ ಪಿಯುಸಿ (ವಿಜ್ಞಾನ) ಕೋರ್ಸ್‌ನಲ್ಲಿ ಶೇ 80 ರಷ್ಟು ಫಲಿತಾಂಶವಾಗಿದೆ. ಆದರೆ, ನನಗೆ ಈಗ ಕಲಾ ವಿಭಾಗದಲ್ಲಿ ಅಭ್ಯಾಸ ಮಾಡಬೇಕೆಂದು ಇದೆ, ಏಕೆಂದರೆ, ಮುಂದಿನ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗುತ್ತದೆ ಎಂದು. ಆದರೆ ಮನೆಯಲ್ಲಿ ನಿರಾಕರಿಸುತ್ತಿದ್ದಾರೆ. ನಿಮ್ಮ ಸಲಹೆ ನೀಡಿ.
–ಮಂಜುನಾಥ ನಾಯ್ಕ್ ಎಂ, ನಾಗಲಪುರ ತಾಂಡ, ಹೊಸಪೇಟೆ.

ಮೊದಲು ವೃತ್ತಿ ಯೋಜನೆಯನ್ನು ಮಾಡಿ ಅದರಂತೆ ಕೋರ್ಸ್ ಆಯ್ಕೆ ಮಾಡಬೇಕು. ವೃತ್ತಿ ಯೋಜನೆಯನ್ನು ಮಾಡಲು ಈ ಸೂಚನೆಗಳನ್ನು ಅನುಸರಿಸಿ.

*ನಿಮ್ಮ ಆಸಕ್ತಿ, ಒಲವು, ಪ್ರತಿಭೆ, ಕೌಶಲಗಳನ್ನು ಗುರುತಿಸಿ, ಸ್ವಯಂ-ಮೌಲ್ಯಮಾಪನ ಮಾಡಬೇಕು.
*ವೈಯಕ್ತಿಕ/ಕುಟುಂಬದ ಮೌಲ್ಯಗಳು, ಸವಾಲುಗಳು, ಅಗತ್ಯಗಳನ್ನು ಗುರುತಿಸಿ.
*ಯಾವ ವೃತ್ತಿ ಸರಿಹೊಂದಬಹುದು ಎಂದು ಅಂದಾಜು ಮಾಡಿ, ದೀರ್ಘಾವಧಿಯಲ್ಲೂ ಆ ವೃತ್ತಿಗೆ ಬೇಡಿಕೆ ಇರುತ್ತದೆಯೇ ಎಂದು ಖಚಿತ ಪಡಿಸಿಕೊಳ್ಳಿ.
*ವೃತ್ತಿಯ ಮತ್ತು ವೈಯಕ್ತಿಕ ಬದುಕಿನ ಧ್ಯೇಯಗಳನ್ನು ನಿಶ್ಚಯಿಸಿ, ಶಿಕ್ಷಣದ ವಿವಿಧ ಹಂತಗಳ ಅವಶ್ಯಕತೆಗಳನ್ನು ತೀರ್ಮಾನಿಸಿ.
ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=MHnPg_sp6E0

9. ನನ್ನ ಮಗಳು ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದಾಳೆ. ಬಿಎಂಎಸ್ ಕೋರ್ಸ್ ಬಗ್ಗೆ ತಿಳಿಸಿ. ಬಿಎಂಎಸ್ ಕೋರ್ಸ್ ಮುಗಿದ ಮೇಲೆ ಉತ್ತಮವಾದ ಕ್ಯಾಂಪಸ್ ನೇಮಕಾತಿ ಸಿಗಬಹುದೇ?
–ಊರು, ಹೆಸರು ತಿಳಿಸಿಲ್ಲ.
ಬ್ಯಾಚುಲರ್ ಅಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (ಬಿಎಂಎಸ್) ಸಾಮಾನ್ಯವಾಗಿ ಮೂರು ವರ್ಷದ ಪದವಿ ಕೋರ್ಸ್. ಕೆಲವು ಪ್ರತಿಷ್ಟಿತ ಕಾಲೇಜುಗಳಲ್ಲಿ ಮಾತ್ರ ಕ್ಯಾಂಪಸ್ ನೇಮಕಾತಿ ಇರುತ್ತದೆ. ಬಿಎಂಎಸ್ ನಂತರ ಎರಡು ವರ್ಷದ ಎಂಬಿಎ ಕೋರ್ಸ್ ಮಾಡುವುದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು. ಉತ್ತಮ ಕಾಲೇಜುಗಳ ಆಯ್ಕೆ ಪ್ರಕ್ರಿಯೆ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=DmaXk-MuoOI

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.