ಐಲ್ಟ್ಸ್‌ನ ಅಂತರರಾಷ್ಟ್ರೀಯ ಪಾಲುದಾರಿಕೆ
ಬ್ರಿಟಿಷ್ ಕೌನ್ಸಿಲ್, ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕೇಂಬ್ರಿಡ್ಜ್ ಇಂಗ್ಲಿಷ್ ಮತ್ತು ಐಡಿಪಿ (ಇಂಟರ್‌ನ್ಯಾಷನಲ್ ಡೆವಲಪ್‌ಮೆಂಟ್ ಪ್ರೊಗ್ರಾಂ), ಐಲ್ಟ್ಸ್-ಆಸ್ಟ್ರೇಲಿಯಾ – ಇವೆಲ್ಲ ಒಟ್ಟಿಗೆ ಸೇರಿ ಮಾನ್ಯತೆ ನೀಡುತ್ತಿರುವ ಐಲ್ಟ್ಸ್ ಪರೀಕ್ಷೆಗೆ ವಿಶ್ವದಾದ್ಯಂತ ಪರೀಕ್ಷಾ ಕೇಂದ್ರ ಗಳಿವೆ. ಅಮೆರಿಕದಲ್ಲೂ ಈ ಪರೀಕ್ಷೆಗೆ ಪ್ರಥಮ ಮಾನ್ಯತೆ ನೀಡುವ ಸಲುವಾಗಿ ಐಲ್ಟ್ಸ್– ಯುಎಸ್‌ಎ ಎಂಬ ಪ್ರತ್ಯೇಕ ಪಾಲುದಾರಿಕೆಯೇ ಇದೆ. ಪಾಲುದಾರಿಕೆ ಇರುವ ಎಲ್ಲ ಸಂಸ್ಥೆಗಳೂ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಪೂರ್ವತಯಾರಿಗಾಗಿ ಪುಸ್ತಕ, ಪ್ರಶ್ನೆ ಪತ್ರಿಕೆ ಮಾದರಿ, ಪಠ್ಯಕ್ರಮ, ಚಿತ್ರ–ವಿಡಿಯೊ ಮಾಹಿತಿ, ಅಗತ್ಯವಿದ್ದವರಿಗೆ ತರಬೇತಿಯನ್ನೂ ನೀಡುತ್ತವೆ.