ಭಾಗ 7

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವಿಶೇಷ ಮೀಸಲು ಸಬ್-ಇನ್‌ಸ್ಪೆಕ್ಟರ್ (ಕೆಎಸ್‌ಆರ್‌ಪಿ ಮತ್ತು ಐಆರ್‌ಬಿ) ಹುದ್ದೆಗಳು ಹಾಗೂ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳು ಶೀಘ್ರದಲ್ಲೇ ನಡೆಯಲಿವೆ. ಎರಡೂ ಪರೀಕ್ಷೆಗಳಲ್ಲಿರುವ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.

1) ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ 125ನೇ ಜನ್ಮ ದಿನದ ಹಿನ್ನೆಲೆಯಲ್ಲಿ ಕೆಳಗಿನ ಹೇಳಿಕೆಗಳನ್ನು ಗಮನಿಸಿ.

1. ಕೆಂಪುಕೋಟೆಯಲ್ಲಿ ನೇತಾಜಿ ವಸ್ತು ಸಂಗ್ರಹಾಲಯ ಆರಂಭಿಸಲು ನಿಶ್ಚಯಿಸಲಾಗಿದೆ
2. ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆಗೆ ನೇತಾಜಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ
3. ದೆಹಲಿಯ ಇಂಡಿಯಾ ಗೇಟ್‌ನಲ್ಲಿ ನೇತಾಜಿ ಬೋಸ್ ಪ್ರತಿಮೆ ಸ್ಥಾಪನೆ ಯೋಜನೆ
4. ನಮ್ಮ ರಾಜ್ಯದಲ್ಲಿ ‘ನೇತಾಜಿ ಅಮೃತ ಶಾಲೆಗಳಲ್ಲಿ 7500 ವಿದ್ಯಾರ್ಥಿಗಳಿಗೆ ಎನ್‌ಸಿಸಿ ತರಬೇತಿ ನೀಡಲು ನಿಶ್ಚಯಿಸಲಾಗಿದೆ

ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?
ಎ) ಹೇಳಿಕೆ 1, 2 ಮತ್ತು 4 ಮಾತ್ರ ಸರಿಯಾಗಿದೆ
ಬಿ) ಹೇಳಿಕೆ 1ರಿಂದ 4ರತನಕ ಎಲ್ಲವೂ ಸರಿಯಾಗಿದೆ
ಸಿ) ಹೇಳಿಕೆ 1, 2,3 ಮಾತ್ರ ಸರಿಯಾಗಿದೆ
ಡಿ) ಮೇಲಿನ ಯಾವುದೂ ಸರಿಯಾಗಿಲ್ಲ
ಉತ್ತರ:ಬಿ

2) ಇತಿಹಾಸದಲ್ಲಿ ಭಾರತ ಮತ್ತು ಚೀನಾ ನಡುವೆ ಅತಿ ಹೆಚ್ಚು ವ್ಯಾಪಾರ ನಡೆದು ದಾಖಲೆ ಸೃಷ್ಟಿಯಾಗಿರುವುದು 2021ರಲ್ಲಿ. ಹಾಗಾದರೆ ಉಭಯ ದೇಶಗಳ ನಡುವೆ ಎಷ್ಟು ಮೊತ್ತದ ದ್ವಿಪಕ್ಷೀಯ ವ್ಯವಹಾರ ನಡೆದಿದೆ?

ಎ) ₹ 9.25 ಲಕ್ಷ ಕೋಟಿ ಬಿ) ₹ 10 .25 ಲಕ್ಷ ಕೋಟಿ
ಎ) ₹11 ಲಕ್ಷ ಕೋಟಿ ಡಿ) ₹15 ಲಕ್ಷ ಕೋಟಿ

ಉತ್ತರ: ಎ

3) 128 ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲು ರಾಷ್ಟ್ರಪತಿಯವರು ಅನುಮೋದಿಸಿದ್ದಾರೆ. ಇದರಲ್ಲಿ 4 ಪದ್ಮವಿಭೂಷಣ, 17 ಪದ್ಮಭೂಷಣ ಮತ್ತು 107 ಪದ್ಮಶ್ರೀ ಪ್ರಶಸ್ತಿಗಳು ಇವೆ . ಪ್ರಶಸ್ತಿ ಪುರಸ್ಕೃತರಲ್ಲಿ ……………………….ಮಹಿಳೆಯರು ಮತ್ತು 10 ವಿದೇಶಿಯರು ಮತ್ತುಮರಣೋತ್ತರವಾಗಿ ಪ್ರಶಸ್ತಿಗೆ ಭಾಜನರಾದವರು 13 ಮಂದಿ.

ಎ) 34 ಬಿ) 39
ಸಿ) 47 ಡಿ) 22
ಉತ್ತರ: ಎ

4) ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧಚಿತ್ರದಲ್ಲಿ ಈ ಕೆಳಗಿನ ಯಾವುದೆಲ್ಲ ಕಲಾಕೃತಿಗಳಿದ್ದವು ?

1) ಮೈಸೂರಿನ ಬೀಟೆ ಮರ ಹಾಗೂ ದಂತದ ಕಸೂತಿ ಕೆತ್ತನೆಯ ಬೃಹದಾಕಾರದ ಆನೆಯ ಕಲಾಕೃತಿ

2) ಕಣ್ಮನ ಸೆಳೆಯುವ ಬಿದರಿ ಕಲೆಯಲ್ಲಿ ರೂಪಿಸಿರುವ ದೊಡ್ಡ ಪ್ರಮಾಣದ ಹೂಜಿ ಮಾದರಿ.
3) ಕಿನ್ನಾಳದ ವಿಶಿಷ್ಟ ಕಲಾಕೃತಿ ಬೃಹತ್ ಗಾತ್ರದ ಆಂಜನೇಯ ಸ್ವಾಮಿ ವಿಗ್ರಹ.
4) ಸ್ವಾತಂತ್ರ‍್ಯ ಹೋರಾಟಗಾರ್ತಿ ಹಾಗೂ ಕನ್ನಡತಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಪ್ರತಿಕೃತಿ.

ಎ) 1, 2 ಮತ್ತು 4 ಬಿ) 1, 2 ಮತ್ತು 3
ಸಿ) 1, 2, 3 ಮತ್ತು 4 ಡಿ) ಮೇಲಿನ ಯಾವುದೂ ಇರಲಿಲ್ಲ.

ಉತ್ತರ: ಸಿ

4) ’ಗ್ರಾಮ್ ಒನ್’ ಏನಿದು?

ಎ) ಕಂದಾಯ, ಆಹಾರ, ಕಾರ್ಮಿಕ ಹೀಗೆ ವಿವಿಧ ಇಲಾಖೆಗಳ ಹಲವು ಸೇವೆಗಳನ್ನು ಗ್ರಾಮೀಣ ಜನರ ಮನೆ ಬಾಗಿಲಿಗೆ ತಲುಪಿಸುವ ಯೋಜನೆ

ಬಿ) ಪ್ರತಿ ಗ್ರಾಮದಲ್ಲಿಯೂ ಸರ್ಕಾರದ ಎಲ್ಲಾ ಇಲಾಖೆಗಳನ್ನು ಒಂದೇ ಕಟ್ಟದಲ್ಲಿ ಇರುವಂತೆ ನೋಡಿಕೊಳ್ಳಲು ಒಂದು ಬೃಹತ್ ಕಟ್ಟಡ ನಿರ್ಮಿಸುವುದು

ಸಿ) ವಿದ್ಯುತ್ ಬಿಲ್ ಪಾವತಿ, ನೀರಿನ ಬಿಲ್ಲು ಪಾವತಿ, ಶಾಲಾ ಶುಲ್ಕ ಪಾವತಿ, ಹೀಗೆ ವಿವಿಧ ಸರ್ಕಾರಿ ಬಿಲ್‌ಗಳನ್ನು ಪಾವತಿಸಲು ಮುಖ್ಯ ಗ್ರಾಮದಲ್ಲಿರುವ ಒಂದು ಕೇಂದ್ರ. ಆ ಮುಖ್ಯ ಗ್ರಾಮದ ಸುತ್ತಮುತ್ತಲಿರುವ 5 ಗ್ರಾಮಗಳ ನಾಗರಿಕರು ಅಲ್ಲಿಗೆ ಬಂದು ಬಿಲ್ ಪಾವತಿಸಲು ಅವಕಾಶ ಸಿಗಲಿದೆ.

ಡಿ) ಮೇಲಿನ ಯಾವುದೂ ಅಲ್ಲ

ಉತ್ತರ: ಎ

4) ‘ನಮ್ಮ ರಾಜ್ಯ ಸರ್ಕಾರದಿಂದ ಯಾವ ದಿನವನ್ನು ದಾಸೋಹ ದಿನ ಎಂದು ಆಚರಿಸಲಾಗುತ್ತದೆ?

ಎ) ಫೆಬ್ರುವರಿ 21 ಬಿ) ಜನವರಿ 21
ಸಿ) ಮಾರ್ಚ್ 24 ಡಿ) ಮೇ 26

ಉತ್ತರ: ಬಿ

5) ದೇಶದ ಪ್ರಪ್ರಥಮ ಮತ್ತು ಏಷ್ಯಾದ ಅತಿದೊಡ್ಡ `ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ ಉತ್ಕೃಷ್ಟತಾ ಕೇಂದ್ರ’ಕ್ಕೆ (ಎವಿಜಿಸಿ ಸೆಂಟರ್ ಆಫ್ ಎಕ್ಸಲೆನ್ಸ್) ಚಾಲನೆ ನೀಡಲಾಗಿದೆ. ಹಾಗಾದರೆ ಅದು ಎಲ್ಲಿದೆ?

ಎ) ಕೋಲ್ಕತ್ತಾದ ಹಾಜಿಯಾ .ಬಿ) ಕರ್ನಾಟಕದ ಮಹದೇವಪುರ(ಬೆಂಗಳೂರು)
ಸಿ) ಮಹಾರಾಷ್ಟçದ ಕೊಲ್ಲಾಪುರ ಡಿ) ಗುಜರಾತಿನ ಗಾಂಧಿನಗರ

ಉತ್ತರ: ಬಿ

6) ಬುರ್ಕಿನಾಫಾಸೋ ದೇಶದ ಅಧ್ಯಕ್ಷ ರೋಚ್ ಮಾರ್ಕ್ ಕ್ರಿಶ್ಚನ್ ಕಬೋರೆ(Roch Marc Christian Kaboré) ಅವರನ್ನು ಪದಚ್ಯುತಗೊಳಿಸಿ ಸೇನೆ ಆಡಳಿತವನ್ನು ತನ್ನ ಕೈ ವಶ ಮಾಡಿಕೊಂಡಿದೆ. ಹಾಗಾದರೆ ಈ ದೇಶ ಎಲ್ಲಿದೆ?

ಎ) ಆಫ್ರಿಕಾ ಬಿ) ದಕ್ಷಿಣ ಅಮೆರಿಕ

ಸಿ) ಉತ್ತರ ಅಮೆರಿಕ ಡಿ) ಏಷ್ಯಾ

ಉತ್ತರ:ಎ

7) ಕೋವಿಡ್-19 ಕಾರಣಕ್ಕಾಗಿ ಈ ಕೆಳಗಿನ ಯಾವ ದೇಶದ ಪ್ರಧಾನಿ ತಮ್ಮ ಮದುವೆಯನ್ನೇ ಮುಂದೂಡಿದರು ?

ಎ) ಆಸ್ಟ್ರೇಲಿಯಾ ಬಿ) ನೇಪಾಳ
ಸಿ) ವೆನೆಜುವೆಲಾ .ಡಿ) ನ್ಯೂಜಿಲೆಂಡ್
ಉತ್ತರ: ಡಿ

8) ರಾಷ್ಟ್ರಪತಿಗಳ ಬೆಂಗಾವಲು ಪಡೆಯ ಕಮಾಂಡಂಟ್ ಸವಾರಿಗೆ ಬಳಸಲಾಗುತ್ತಿದ್ದ ಕುದುರೆ ನಿವೃತ್ತವಾಗಿದೆ. ಆ ಕುದುರೆಯ ಹೆಸರೇನು?

ಎ) ವಿಜಯ್ ಬಿ) ವಿಕಾಸ್
ಸಿ) ವಿರಾಟ್ ಡಿ) ವಿಭೂತಿ

ಉತ್ತರ: ಸಿ

9) ರಾಜ್ಯ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ನಿಧನರಾದರು. ಇವರು ಯಾವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು?

ಎ) ಗಡಿನಾಡು ಕನ್ನಡ ಶಾಲೆಗಳ ಅಭಿವೃದ್ದಿ ಆಯೋಗದ ಅಧ್ಯಕ್ಷರು
ಬಿ) ರಾಜ್ಯ ಕಾನೂನು ಆಯೋಗದ ಅಧ್ಯಕ್ಷರು
ಸಿ) ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರು
ಡಿ) ಕರ್ನಾಟಕ ಗಡಿ ಮತ್ತು ರಾಜ್ಯ ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷರು

ಉತ್ತರ: ಡಿ

10) ಗಣರಾಜ್ಯೊತ್ಸವ ಸಂದರ್ಭದಲ್ಲಿ ಎಷ್ಟು ವರ್ಷಗಳ ನಂತರ ಕಾಶ್ಮೀರದ ಲಾಲ್ ಚೌಕದಲ್ಲಿ ನಮ್ಮ ರಾಷ್ಟಧ್ವಜ ಹಾರಿತು?

ಎ) 40 ಬಿ) 20
ಸಿ) 30 ಡಿ) 10

ಉತ್ತರ: ಸಿ

30 ವರ್ಷಗಳ ನಂತರ ಶ್ರೀನಗರದ ಲಾಲ್ ಚೌಕಿನಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ

11) ಇತ್ತೀಚಿಗೆ 5ಜಿ ದೂರಸಂಪರ್ಕ ಸೇವೆಯು ದೇಶದ ರೆಡಿಯೋ ಆಲ್ಟಿ ಮೀಟರ್ ಮೇಲೆ ಹಾಗೂ ಜಿಪಿಎಸ್ ಸಿಗ್ನಲ್ ಮೇಲೆ ಪರಿಣಾಮ ಬೀರಿದ ಕಾರಣಕ್ಕಾಗಿ ವಿಮಾನದ ಸುರಕ್ಷತೆಗೆ ಅದೂ ಅಪಾಯಕಾರಿ ಎಂದು ವರದಿಯಾಯಿತು. ಈ ಘಟನೆ ನಡೆದಿದ್ದು ಯಾವ ದೇಶದಲ್ಲಿ ?

ಎ) ಬ್ರಿಟನ್ ಬಿ) ಸೌದಿ ಅರೇಬಿಯಾ
ಸಿ) ಚೀನಾ ಡಿ) ಅಮೆರಿಕ

ಉತ್ತರ: ಡಿ

ನಿಮಗಿದು ಗೊತ್ತೆ?

ಕಾಮಾಲೆ ರೋಗ

ಕಾಮಾಲೆ, ಪಿತ್ತಕೋಶಕ್ಕೆ ಸಂಬಂಧಿಸಿದ ಒಂದು ರೋಗ. ತ್ವಚೆ ಮತ್ತು ಕಣ್ಣು ಹಳದಿ ಬಣ್ಣಕ್ಕೆ ತಿರುಗುವುದು ರೋಗದ ಲಕ್ಷಣ. ರಕ್ತದೊಂದಿಗೆ ಪಿತ್ತರಸ (Bile) ಬೆರೆತಾಗ, ಅದರ ಸ್ವಲ್ಪ ಭಾಗ ತ್ವಚೆಯ ಒಳಪದರಗಳಲ್ಲಿ ಸಂಗ್ರಹವಾಗಿ ಹಳದಿ ಬಣ್ಣ ಕಾಣಿಸಿಕೊಳ್ಳುತ್ತದೆ.

ಕಾಮಾಲೆ ರೋಗದ ಲಕ್ಷಣ, ಕೃತಕ ಬೆಳಕಿಗಿಂತ ಸೂರ್ಯನ ಬೆಳಕಿನಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ರಕ್ತದಲ್ಲಿ ಸೇರಿಕೊಂಡ ಪಿತ್ತರಸದ ವರ್ಣದ್ರವ್ಯಗಳ ಶೇಖರಣೆ, ಕಣ ವಿಭಜನೆಯ ಗತಿ, ಈ ಕಣಗಳು ವರ್ಣದ್ರವ್ಯಗಳನ್ನು ಎಷ್ಟರ ಮಟ್ಟಿಗೆ ವಿಲೀನಗೊಳಿಸುತ್ತವೆ ಎಂಬುದನ್ನು ಅನುಸರಿಸಿ, ಈ ಹಳದಿ ಬಣ್ಣ ಗೋಚರಿಸುತ್ತದೆ.

ಯಕೃತ್ತಿನಲ್ಲಿ ಉತ್ಪತ್ತಿಯಾದ ಪಿತ್ತರಸ ಸಣ್ಣ ಕರುಳಿನಲ್ಲಿರುವ ಜಿಡ್ಡು ಅಥವಾ ಕೊಬ್ಬು ಪದಾರ್ಥಗಳ ಮೇಲೆ ದಾಳಿ ಮಾಡಿ, ಅವನ್ನು ಚೂರಾಗಿಸುತ್ತವೆ. ಇದರಿಂದ ಅವನ್ನು ಹೀರಿಕೊಳ್ಳಲು ಸುಲಭವಾಗುತ್ತದೆ. ಪಿತ್ತರಸದಲ್ಲಿನ ಹೆಚ್ಚು ಪಾಲು ಲವಣಗಳನ್ನು (Bile salts) ರಕ್ತವೇ ಹೀರಿಕೊಳ್ಳುತ್ತದೆ.

ಪಿತ್ತಕೋಶ ಅಥವಾ ಯಕೃತ್ತು ಅತಿ ಹೆಚ್ಚು ಪಿತ್ತರಸವನ್ನು ಸ್ರವಿಸುವುದೇ ಕಾಮಾಲೆ ರೋಗಕ್ಕೆ ಸಾಮಾನ್ಯ ಕಾರಣ. ಹುಟ್ಟಿನಿಂದಲೇ ಕೆಲವು ದೋಷಗಳು ಪಿತ್ತರಸದಲ್ಲಿನ ವರ್ಣದ್ರವ್ಯಗಳನ್ನು ಹೊರ ಹಾಕುವ ಕಾರ್ಯವನ್ನು ಕುಂಠಿತಗೊಳಿಸುತ್ತದೆ. ಇದರಿಂದ ಕಾಮಾಲೆ ರೋಗ ತಲೆದೋರ ಬಹುದು. ಕೆಲವೊಮ್ಮೆ ಯಕೃತ್ತಿನ ಕೆಲವು ರೋಗಗಳೂ ಯಕೃತ್ತಿನ ಕೋಶಗಳು ಸಮಪರ್ಕವಾಗಿ ಕಾರ್ಯನಿರ್ವಹಿಸುವುದಕ್ಕೆ ಅಡ್ಡಿ ಉಂಟು ಮಾಡುತ್ತದೆ. ಇದರಿಂದಾಗಿಯೂ ಕಾಮಾಲೆ ಬರುವ ಸಾಧ್ಯತೆ ಇರುತ್ತದೆ.

ಕಾಮಾಲೆ ರೋಗದಲ್ಲಿ ಎರಡು ಬಗೆ (1) ಸ್ರಾವ ಕಟ್ಟಿ ಹೋಗುವುದರಿಂದ (ರಿಟೆನ್ಷನ್ ಜಾಂಡೀಸ್– Retention Jaundice) ಬರುವ ಕಾಮಾಲೆ (2) ಉಕ್ಕಿ ಹರಿಯುವ ಕಾಮಾಲೆ(ರಿಗರ್ಜಿಟೇಷನ್ Regurgitation Jaundice).

ಪಿತ್ತರಸದ ವರ್ಣದ್ರವ್ಯಗಳು ರಕ್ತದಲ್ಲಿ ಉಳಿದು ಹೋಗುವುದರಿಂದ ಬರುವ ಕಾಮಾಲೆಗೆ ರಿಟೆನ್‌ಷಲ್ ಜಾಂಡೀಸ್ ಎಂದು ಹೆಸರು. ವರ್ಣದ್ರವ್ಯಗಳನ್ನು ಹೊರಹಾಕುವುದು ಕುಂಠಿತಗೊಳ್ಳುವುದರಿಂದ ಈ ರೋಗ ಬರುತ್ತದೆ.

ಪಿತ್ತರಸವನ್ನು ರಕ್ತ ಅಥವಾ ಪಿತ್ತರಸದ ನಾಳಗಳು ಹೊರ ಹಾಕಿದ ಬಳಿಕ ಅದು ಉಕ್ಕಿ ಮತ್ತೆ ರಕ್ತ ಪ್ರವಾಹಕ್ಕೆ ಸೇರಿಕೊಳ್ಳುತ್ತದೆ. ಇದಕ್ಕೆ ರಿಗರ್ಜೀಟೇಷನ್ ಜಾಂಡೀಸ್ ಎಂದು ಹೆಸರು.

ಮಾಹಿತಿ: Spardha Bharati UPSC ಯೂಟ್ಯೂಬ್ ಚಾನಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.