ನವದೆಹಲಿ: ಭಾರತೀಯ ತಂತ್ರಜ್ಞಾನ ಸಂಸ್ಥೆಗಳಿಗೆ (ಐಐಟಿ) ಪ್ರವೇಶಾತಿ ನಿರ್ಧರಿಸಲು ನಡೆದ ಜಂಟಿ ಉನ್ನತ ಪರೀಕ್ಷೆಯ (ಜೆಇಇ-ಅಡ್ವಾನ್ಸ್‌ಡ್) ಫಲಿತಾಂಶ ಭಾನುವಾರ ಪ್ರಕಟವಾಗಿದೆ.

ಹೈದರಾಬಾದ್ ವಲಯದ ವಾವಿಲಾಲ ಚಿದ್ವಿಲಾ ರೆಡ್ಡಿ ಮೊದಲ ರ್‍ಯಾಂಕ್ ಗಳಿಸಿದ್ದಾರೆ. ಚಿದ್ವಿಲಾ ಅವರು 360 ಅಂಕಗಳಲ್ಲಿ 341 ಅಂಕ ಪಡೆದಿದ್ದಾರೆ.

ವಿದ್ಯಾರ್ಥಿನಿಯರ ಪೈಕಿ ಐಐಟಿ ಹೈದರಾಬಾದ್ ವಲಯದ ನಯಕಾಂತಿ ನಾಗ ಭವ್ಯ ಶ್ರೀ 298 ಅಂಕಗಳೊಂದಿಗೆ ಟಾಪರ್ ಎನಿಸಿದ್ದಾರೆ.

ಐಐಟಿ ಗುವಾಹಟಿ, ಜೆಇಇ ಅಡ್ವಾನ್ಸ್‌ಡ್ ಪ್ರವೇಶ ಪರೀಕ್ಷೆಯನ್ನು ನಡೆಸಿತ್ತು.

ಒಟ್ಟು 1,80,372 ವಿದ್ಯಾರ್ಥಿಗಳು ಎರಡೂ ಪರೀಕ್ಷೆಯನ್ನು ಬರೆದಿದ್ದರು. ಈ ಪೈಕಿ 43,773 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ.

ಜೆಇಇ 2023 ಅಡ್ವಾನ್ಸ್‌ಡ್ ಪರೀಕ್ಷೆಯಲ್ಲಿ 36,204 ಗಂಡು ಮಕ್ಕಳು ಮತ್ತು 7,509 ಹೆಣ್ಣು ಮಕ್ಕಳು ತೇರ್ಗಡೆಯಾಗಿದ್ದಾರೆ.

ದೇಶದಾದ್ಯಂತ ಇರುವ ಐಐಟಿಗಳಿಗೆ ಪ್ರವೇಶಾರ್ಹತೆ ಪಡೆಯಲು ಜೆಇಇ-ಅಡ್ವಾನ್ಸ್‌ಡ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಜೂನ್ 4ರಂದು ಪರೀಕ್ಷೆ ಆಯೋಜಿಸಲಾಗಿತ್ತು.

ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.