ಇಂದಿನದು ಸ್ಪರ್ಧಾತ್ಮಕ ಪ್ರಪಂಚ. ಆದರೆ ಮನಸ್ಸು ಮಾಡಿದರೆ ನಮಗೆ ಹಲವಾರು ವಿಪುಲ ಅವಕಾಶಗಳು ದೊರೆಯುತ್ತವೆ. ಅದು ಹೇಗೆ ಮತ್ತು ಯಾವ ರೀತಿ ಎನ್ನುವುದನ್ನು ನಾವೇ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡುವ ಸಂದರ್ಭದಲ್ಲಿ ಮುಂದಿನ ಕಾಲಘಟ್ಟಕ್ಕೆ ಹೋಗುವಾಗ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಚಿಂತೆ ಕಾಡುವುದು ಸಹಜ.

ಆದರೆ ಕೆಲವರು ತಮಗಿಷ್ಟ ಬಂದ ವಿಭಾಗಗಳನ್ನು ಆಯ್ಕೆ ಮಾಡಿಕೊಂಡ ನಂತರ ತಾವು ಆಯ್ಕೆ ಮಾಡಿಕೊಂಡ ವಿಷಯದ ಬಗ್ಗೆ ಆಸಕ್ತಿಯನ್ನೇ ತೋರುವುದಿಲ್ಲ. ಬೇರೆ ಬೇರೆ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಒಂದಲ್ಲಾ ಒಂದು ರೀತಿಯಲ್ಲಿ ಅಧ್ಯಯನವನ್ನು ಮೊಟಕುಗೊಳಿಸುವುದು ಸಾಮಾನ್ಯವಾಗಿಬಿಟ್ಟಿದೆ.

ಆದರೆ ಕಲಾ ಕ್ಷೇತ್ರದಲ್ಲಿ ಅದರಲ್ಲೂ ದೃಶ್ಯಕಲೆಯಲ್ಲಿ ಬಹಳಷ್ಟು ಅವಕಾಶಗಳಿದ್ದು ನಮಗರಿವಿಲ್ಲದ ಹಲವು ವಿಷಯಗಳನ್ನು ತಿಳಿಯಬಹುದು. ಭಾರತದಲ್ಲಿ ಕಲಾ ಶಿಕ್ಷಣ 1852ರಲ್ಲಿ ಆರಂಭವಾಗಿ ಇಂದಿನ ತನಕವೂ ಹಲವಾರು ಮಜಲುಗಳನ್ನು ದಾಟಿದೆ.

ವಸಾಹತೋತ್ತರ ಕಾಲದಲ್ಲಿ ಸಾಮಾಜಿಕ ರಾಜಕೀಯ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಬದಲಾವಣೆಯಾಗಿದೆ. ಇದು ಕೂಡ ಬದಲಾವಣೆ ಹೊಂದಿದ ಕಲೆ.

ಇಂತಹ ಅದ್ಭುತ ಕಲಾ ಸಾಧಕರು ಚಿತ್ರಕಲೆಯಲ್ಲಿ ಅಧ್ಯಯನ ಮಾಡುವುದರಿಂದ ವಿದ್ಯಾರ್ಥಿಗಳ ಸರ್ವೋತೋಮುಖ ಅಭಿವೃದ್ಧಿಗೆ, ಜ್ಞಾನಾಭಿವೃದ್ಧಿಗೆ ಹಾಗೂ ಸಮಕಾಲೀನ ತಾಂತ್ರಿಕ ಯಾಂತ್ರಿಕ ತತ್ವಜ್ಞಾನದ ಭರಾಟೆಯನ್ನು ಕೂಡ ಅರ್ಥೈಸಿ ಅದರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕೃತಿರಚನೆಯಲ್ಲಿ ಉನ್ನತೀಕರಣ ಸಾಧಿಸಲು ಬೇಕಾಗುವ ಪಠ್ಯಕ್ರಮವಿದೆ. ಸಮಕಾಲೀನ ಮತ್ತು ಪಾರಂಪರಿಕ ಮೇಳಕ್ಕೆ ವಿದ್ಯಾರ್ಥಿಗೆ ಇಂದಿನ ಮತ್ತು ಮುಂದಿನ ಕಲಾ ಇತಿಹಾಸದ, ಕಲೆಯ ಬೆಳವಣಿಗೆಯ ಜ್ಞಾನವನ್ನು ನೀಡುತ್ತದೆ. ಅಂತಹ ವಿಚಾರಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಿ ಭೋದಿಸಲಾಗುತ್ತದೆ.

ಚಿತ್ರಕಲೆ

ದೃಶ್ಯಕಲೆಯ ಮೂಲಭೂತ ಅಂಗಗಳಲ್ಲಿ ಇಂದು ಪ್ರಚಲಿತದಲ್ಲಿರುವುದು ಚಿತ್ರಕಲೆ, ಕಲಾ ಇತಿಹಾಸ. ಮೂಲ ಕಲೆಯನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಕಡೆಗೆ ವಿಪುಲ ಅವಕಾಶಗಳಿದ್ದು, ಅಂತಹವರನ್ನು ಹಲವಾರು ಕಂಪನಿಗಳು ಕೈಬೀಸಿ ಕರೆಯುತ್ತಿವೆ. ಅದರ ಬಗ್ಗೆ ಬಹಳಷ್ಟು ಜನರಿಗೆ ತಿಳಿವಳಿಕೆ ಇಲ್ಲ. ಚಿತ್ರಕಲೆಯಲ್ಲಿ ಅಧ್ಯಯನ ಮಾಡಬೇಕೆಂದರೆ ಕನಿಷ್ಠ ವಿದ್ಯಾರ್ಹತೆ ಪಿ.ಯು.ಸಿ.ಆಗಿರಬೇಕು. ಮೊದಲಿಗೆ ಬಿ.ವಿ.ಎ. (ದೃಶ್ಯಕಲೆಯಲ್ಲಿ ಪದವಿ) ಯು ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಹಂಪಿ ವಿಶ್ವ ವಿದ್ಯಾಲಯ ಹೀಗೆ ಇನ್ನಿತರ ವಿಶ್ವ ವಿದ್ಯಾಲಯಗಳ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿದ್ಯಾಸಂಸ್ಥೆಗಳು ಮತ್ತು ಸ್ವಾಯತ್ತ ಕಲಾ ಸಂಸ್ಥೆಗಳಲ್ಲಿ ಅವಕಾಶವಿದೆ. ಬಿ.ವಿ.ಎ.3 ವರ್ಷಗಳ ಅವಧಿ. ಇದರಲ್ಲಿ ಬೇರೆ ಬೇರೆ ವಿಭಾಗಗಳಿವೆ. ನಂತರ ಎಂ.ವಿ.ಎ ಎರಡು ವರ್ಷಗಳ ಅವಧಿ. ಇದರಲ್ಲಿ ತಮಗೆ ಬೇಕಾದ ವಿಷಯಗಳನ್ನು ಆಯ್ಕೆ ಮಾಡಿಕೊಡು ಕಲಿಯಬಹುದು. ಬೆಂಗಳೂರಿನಲ್ಲಿ ದೃಶ್ಯಕಲೆಯನ್ನು ಕಲಿಯಲು ಹಲವು ಕಾಲೇಜುಗಳಿವೆ. ಈ ಬಗ್ಗೆ ವೆಬ್‌ಸೈಟಿನಲ್ಲಿ ವಿವರಗಳು ಲಭ್ಯ.

ಶಿಲ್ಪಕಲೆ, ಅನ್ವಯಿಕಕಲೆ, ಗ್ರಾಫಿಕ್, ಚಿತ್ರಕಲೆ, ಚಿತ್ರಕಲೆಯಲ್ಲಿ ಅನಿಮೇಷನ್ ಮತ್ತು ಸೆರಾಮಿಕ್ ಆರ್ಟ್ ಇವುಗಳು ಒಂದೇ ಮರದ ಐದು ಟೊಂಗೆಗಳು. ಐದು ವಿಷಯಗಳ ಮೂಲಭೂತ ಆಶಯವೂ ಒಂದೇ. ಕಲಾ ಇತಿಹಾಸ, ದೃಶ್ಯಕಲೆಯ ಮಹತ್ವವನ್ನೂ ಕಾಲಾನುಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಭೋಧಿಸಿದರೆ ಇನ್ನುಳಿದವು ಆಯಾ ಕ್ಷೇತ್ರಗಳ ಪ್ರಾಯೋಗಿಕ ಜ್ಞಾನವನ್ನು ನೀಡುತ್ತವೆ.. ಚಿತ್ರಕಲೆ ವಿದ್ಯಾರ್ಥಿಗಳಲ್ಲಿನ ಚಿತ್ರ ಬಿಡಿಸುವ ಸೃಜನಶೀಲತೆಯನ್ನು ಬೆಳೆಸುತ್ತದೆ. ಸ್ವತಂತ್ರ ಕಲಾವಿದನಾಗಿ ರೂಪುಗೊಳ್ಳುವಷ್ಟು ಉತ್ತೇಜನ ನೀಡುತ್ತದೆ. ಅನ್ವಯ ಕಲೆ ಸಮಕಾಲೀನ ಮಾರುಕಟ್ಟೆಯಲ್ಲಿನ ಪ್ರಚಲಿತ ವಸ್ತುಗಳ ವಿನ್ಯಾಸದ ಪರಿಕಲ್ಪನೆ, ಅವುಗಳಿಗೆ ಅಂದದ ಹೊದಿಕೆ ಜೊತೆಯಲ್ಲಿ ಮುದ್ರಣ ಹಾಗೂ ಡಿಜಿಟಲ್ ವಿನ್ಯಾಸಗಳಲ್ಲಿನ ಅಧ್ಯಯನಕ್ಕೆ ಎಡೆ ಮಾಡಿಕೊಡುತ್ತದೆ. ಶಿಲ್ಪಕಲೆಯೂ ಘನರೂಪದಲ್ಲಿ ಬಹುಮಾಧ್ಯಮಗಳಲ್ಲಿ ಕಲಾ ಕೃತಿಗಳನ್ನು ರಚಿಸುವ ಬೋಧನೆ ಮಾಡುತ್ತದೆ. ಸಾಮಾನ್ಯ ವ್ಯಕ್ತಿ ಶಿಲ್ಪದಿಂದ ಹಿಡಿದು ಕ್ರಿಯಾತ್ಮಕ ಮೂರ್ತ ಶಿಲ್ಪದವರೆಗೂ ವಿದ್ಯಾರ್ಥಿಗಳ ಜ್ಞಾನ ಸಂಪತ್ತನ್ನು ಹೆಚ್ಚಿಸುತ್ತದೆ.

ಗ್ರಾಫಿಕ್ ಕಲೆ ಮೂಲಭೂತವಾಗಿ ಮುದ್ರಣ ಕಲೆಗೆ ಸಂಬಂಧಿಸಿದ್ದು, ವಿದ್ಯಾರ್ಥಿಗಳಿಗಾಗಿ ಮುದ್ರಣದಲ್ಲಿರುವ ಪ್ರಯೋಗಗಳನ್ನು ನವಮಾಧ್ಯಮದಲ್ಲಿ ಹೇಳಿಕೊಡಲಾಗುತ್ತದೆ. ಈ ಮೂಲಭೂತ ವಿಭಾಗಗಳ ಜೊತೆಗೆ ಹೊಸದಾಗಿ ಸೇರ್ಪಡೆಗೊಂಡಿರುವ ಆನಿಮೇಷನ್ ತರಗತಿ ಸಮಕಾಲೀನ ಚಲನಚಿತ್ರದ ಭಾಗವಾಗಿದೆ. ದೃಶ್ಯಕಲೆಯನ್ನು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ಇಂದಿನ ಪ್ರಸ್ತುತ ಸಮಯದಲ್ಲಿ ಅದ್ಭುತ ಅವಕಾಶಗಳು ಅರಸಿಕೊಂಡು ಬಂದಿವೆ.

ವುಡ್‌ಕಾರ್ವಿಂಗ್ ಕೆಲಸದಲ್ಲಿ ಪರಿಣಿತರಾಗಿರುವುದರಿಂದ ಸಾಕಷ್ಟು ಅವಕಾಶಗಳಿವೆ. ದೇಶದಾದ್ಯಂತ ಸಾರ್ವಜನಿಕ ಶಿಲ್ಪಗಳನ್ನು ರಚಿಸುವುದರಲ್ಲಿ ಇವರ ಪಾತ್ರ ಮುಖ್ಯವಾಗಿದೆ. ಕಲಾ ಇತಿಹಾಸ ಅಧ್ಯಯನ ಮಾಡಿದವರಿಗೆ ಯಾವ ರೀತಿ ಕಲಾ ಪ್ರದರ್ಶನ ಮಾಡಬೇಕು ಎಂಬುದರ ಬಗ್ಗೆ ತರಬೇತುದಾರರಾಗಿ, ಗ್ಯಾಲರಿ ನಿರ್ವಹಣೆ, ಮ್ಯೂಸಿಯಂ ಸಂಯೋಜನೆ, ಸ್ವತಂತ್ರ ಕಲಾ ಇತಿಹಾಸಕಾರರಾಗಿ, ಆರ್ಟ್ ಏಜೆನ್ಸಿಯಲ್ಲಿ ಕಾಪಿರೈಟರ್ ಆಗಿ, ಆರ್ಟ್ ಜರ್ನಲಿಸಂ ವಿಭಾಗದಲ್ಲಿ ಬೇಕಾದಷ್ಟು ಅವಕಾಶಗಳಿವೆ.

ಲೋಗೊ ವಿನ್ಯಾಸ

ಅನ್ವಯ ಕಲಾ ವಿಭಾಗದಲ್ಲಿ ಅಧ್ಯಯನ ಮಾಡಿದವರಿಗೆ ಬೇರೆ ಬೇರೆ ವಸ್ತುಗಳ ಡಿಸೈನ್, ಲೋಗೊ ಡಿಸೈನ್ ಮತ್ತು ಬಹುರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಂಪನಿಗಳಲ್ಲಿ ಅವಕಾಶಗಳು ದೊರೆಯುತ್ತವೆ. ಗ್ರಾಫಿಕ್ ಮಾಧ್ಯಮದಲ್ಲಿ ಅಧ್ಯಯನ ಮಾಡಿದವರಿಗೆ ಬುಕ್‌ಇಲ್ಲಸ್ಟ್ರೇಷನ್, ವೆಬ್‌ಡಿಸೈನ್ ಮತ್ತು ಮುದ್ರಣ ತಂತ್ರಗಾರಿಕೆಯಲ್ಲಿ ಅವಕಾಶಗಳಿವೆ. ಹೀಗೆ ಅನಿಮೇಷನ್ ವಿಭಾಗದಲ್ಲಿಯೂ ಕೂಡ ಹೇರಳವಾದ ಅವಕಾಶಗಳಿವೆ. ಇಲ್ಲಿ ಚಿತ್ರಕಲಾ ಅಧ್ಯಯನಕ್ಕಾಗಿ ಬೇರೆ ಬೇರೆ ಕಲಾಕ್ಷೇತ್ರದ ಕುರಿತಾದ ಹೆಚ್ಚಿನ ಮಾಹಿತಿ ಮತ್ತು ಜ್ಞಾನ ವರ್ಧನೆಗೆ ಪ್ರತಿವರ್ಷ ಹೊರದೇಶ ಮತ್ತು ರಾಜ್ಯಗಳಿಂದ ಕ್ಷೇತ್ರ ಪರಿಣಿತರನ್ನು ಆಹ್ವಾನಿಸಿ ವಿದ್ಯಾರ್ಥಿಗಳಿಗೆ ವಿವಿಧ ಕಾರ್ಯಾಗಾರಗಳನ್ನು ಏರ್ಪಡಿಸಲಾಗುತ್ತದೆ. ವಿಶೇಷವಾಗಿ ಎಲ್ಲಾ ವಿಭಾಗಗಳಲ್ಲಿ ಆಯಾ ಸೆಮಿಸ್ಟರ‍್ಸ್ ಗೆ ಅನುಗುಣವಾಗಿ ಕ್ಷೇತ್ರ ಪರಿಣಿತರು ವಿದ್ಯಾರ್ಥಿಗಳೊಂದಿಗೆ ಸಂವಾದ ಏರ್ಪಡಿಸಿ ಕಲಾ ಕೃತಿಗಳ ರಚನೆಗೆ ಮಾರ್ಗದರ್ಶನ ನೀಡುತ್ತಾರೆ. ಪ್ರತಿವರ್ಷ ಹಲವಾರು ಬಹುರಾಷ್ಟ್ರೀಯ ಕಂಪನಿಗಳಲ್ಲಿ ವಿವಿಧ ವಿಭಾಗದ ಕಲಾ ವಿದ್ಯಾರ್ಥಿಗಳು ಉನ್ನತವಾದ ಹುದ್ದೆಯನ್ನು ಅಲಂಕರಿಸಿರುವ ಸಾಕಷ್ಟು ಅವಕಾಶಗಳಿವೆ.

ಇತ್ತೀಚಿನ ದಿನಗಳಲ್ಲಿ ಹಲವಾರು ಐಷಾರಾಮಿ ವಸ್ತುಗಳನ್ನು ನಮ್ಮ ನಮ್ಮ ಇಷ್ಟಕ್ಕೆ ತಕ್ಕಹಾಗೆ ಬಳಸುತ್ತಿದ್ದೇವೆ, ಖರೀದಿಸುತ್ತಿದ್ದೇವೆ. ಇದನ್ನು ಯುವ ಕಲಾವಿದರು ಅತ್ಯದ್ಭುತವಾಗಿ ವಿನ್ಯಾಸ ಮಾಡುತ್ತಾರೆ. ನಮ್ಮ ಜೀವನದ ಪ್ರತಿ
ಯೊಂದು ಘಟ್ಟದಲ್ಲಿಯೂ ಬಳಸುವ ಪಾತ್ರೆಯಿಂದ ಹಿಡಿದು ಪ್ರತಿಯೊಂದು ವಿಷಯದಲ್ಲಿಯೂ ಕಲಾವಿದನ ಕೈಚಳಕವಿದೆ. ದೃಶ್ಯ ಕಲೆಯನ್ನು ಆಯ್ಕೆ ಮಾಡಿಕೊಂಡು ಕಲಿತರೆ ಉತ್ತಮ ಉದ್ಯೋಗ
ವಲ್ಲದೇ, ಸ್ವಂತ ಉದ್ಯೋಗವನ್ನು ಕೂಡ ಮಾಡಬಹುದು.

ಕಲಾ ಶಿಕ್ಷಕರಾಗಲು ಅವಕಾಶ

ಚಿತ್ರಕಲೆಯನ್ನು ಮಾಧ್ಯಮವನ್ನಾಗಿ ಅಧ್ಯಯನ ಮಾಡಿದವರು ಅನಿಮೇಷನ್, ಮ್ಯುರಲ್‌ಡಿಸೈನರ್, ಇನ್‌ಸ್ಟಾಲೇಷನ್ ಕಂಪ್ಯೂಟರ್ ಡಿಸೈನರ್ ಆಗಿ ಕಾರ್ಯ ನಿರ್ವಹಿಸುವ ಅವಕಾಶಗಳು ಇವೆ. ಇದರ ಜೊತೆಗೆ ಬೇರೆ ವಿದ್ಯಾ ಸಂಸ್ಥೆಯಲ್ಲಿ ಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಬಹುದು. ಶಿಲ್ಪಕಲೆ ಹಾಗೂ ದೃಶ್ಯ ಕಲೆಯನ್ನು ಮಾಧ್ಯಮವನ್ನಾಗಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಭಾವ ಶಿಲ್ಪಗಳನ್ನು ತಯಾರು ಮಾಡಬಹುದು. 3ಡಿ ಅನಿಮೇಷನ್ ವಿಭಾಗದಲ್ಲಿ ಕಾರ್ಯ ನಿರ್ವಹಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.