ಬೆಂಗಳೂರು:ದಕ್ಷಿಣ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ರಣತಂತ್ರ ರೂಪಿಸುತ್ತಿರುವ ಕಾಂಗ್ರೆಸ್, ಬಿಬಿಎಂಪಿ ಮಾಜಿ ಉಪ ಮೇಯರ್, ಬಿಜೆಪಿ ಮುಖಂಡ ಲಕ್ಷ್ಮೀನಾರಾಯಣ್ ಅವರನ್ನು ಪಕ್ಷಕ್ಕೆ ಸೆಳೆದುಕೊಂಡಿದೆ.

ಲಕ್ಷ್ಮೀನಾರಾಯಣ್ ಅವರನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪಕ್ಷಕ್ಕೆ ಬರ ಮಾಡಿಕೊಂಡರು. ವಿವಿಧ ವಾರ್ಡ್‌ಗಳ ಬಿಜೆಪಿ ಘಟಕಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರೂ ಸೇರಿ ನೂರಕ್ಕೂ ಹೆಚ್ಚು ಬೆಂಬಲಿಗರೂ ಕಾಂಗ್ರೆಸ್ ಸೇರಿದರು. ಶಾಸಕರಾದ ರಾಮಲಿಂಗಾರೆಡ್ಡಿ, ಎಂ. ಕೃಷ್ಣಪ್ಪ, ದಕ್ಷಿಣದ ಕ್ಷೇತ್ರದ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್ ಈ ವೇಳೆ ಇದ್ದರು.

ಬಳಿಕ ಮಾತನಾಡಿದ ಲಕ್ಷ್ಮೀನಾರಾಯಣ್, ‘ನನಗೆ ಕಾಂಗ್ರೆಸ್ ಪಕ್ಷ ಹೊಸತಲ್ಲ. ಈ ಹಿಂದೆ ನಾನು ಇಲ್ಲೇ ಇದ್ದೆ. ಬಿಜೆಪಿಯ ನೀತಿಗೆ ಬೇಸತ್ತು ಮಾತೃಪಕ್ಷಕ್ಕೆ ಮರಳಿದ್ದೇನೆ. ಯಾವುದೇ ಷರತ್ತು ಇಟ್ಟು ಮರಳಿ ಬಂದಿಲ್ಲ. ಹರಿಪ್ರಸಾದ್ ಅವರ ಋಣ ತೀರಿಸಲು ಇಲ್ಲಿಗೆ ಬಂದಿದ್ದೇನೆ’ ಎಂದರು.

‘ಯಾರನ್ನೊ ನಂಬಿ ಬಿಜೆಪಿಗೆ ಹೋಗಿದ್ದೆ. ನನಗೆ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಅವರು ಯಾರು ಎಂಬ ಬಗ್ಗೆ ಈಗ ಯಾಕೆ ಮಾತನಾಡಲಿ’ ಎಂದು ಪರೋಕ್ಷವಾಗಿ ಬಿಜೆಪಿ ಶಾಸಕ ವಿ. ಸೋಮಣ್ಣ ವಿರುದ್ಧ ಹರಿಹಾಯ್ದರು.

ಸಿದ್ದರಾಮಯ್ಯ ಸಮ್ಮುಖದಲ್ಲಿ ಸೇರ್ಪಡೆ: ರಿಜ್ವಾನ್ ಅರ್ಷದ್ ಪರ ಸಿದ್ದರಾಮಯ್ಯ ಪ್ರಚಾರ ನಡೆಸಿದ ವೇಳೆ ದಯಾನಂದ ನಗರ ವಾರ್ಡ್ ಬಿಜೆಪಿ ಸದಸ್ಯೆ ಕುಮಾರಿ ಅವರ ಪತಿ ಪಳನಿ ಸ್ಚಾಮಿ, ಪಾಲಿಕೆಯ ಮಾಜಿ ಸದಸ್ಯ ಕೃಷ್ಣಪ್ಪ ಅವರು ಕಾಂಗ್ರೆಸ್ ಸೇರಿದರು. ಅವರೆಲ್ಲರನ್ನು ಶಾಲು ಹೊದಿಸಿ ಸಿದ್ದರಾಮಯ್ಯ ಪಕ್ಷಕ್ಕೆ ಬರಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.