ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Lok Sabha Election 2024: ಎಂಥಾ ಮಾತು...

Published 22 ಮಾರ್ಚ್ 2024, 4:54 IST
Last Updated 22 ಮಾರ್ಚ್ 2024, 4:54 IST
ಅಕ್ಷರ ಗಾತ್ರ

ಜೆಡಿಎಸ್‌ ವರಿಷ್ಠರಾದ ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ನನ್ನನ್ನು ಮತ್ತು ಪಕ್ಷದ ಕಾರ್ಯಕರ್ತರನ್ನು ಇತ್ತೀಚೆಗೆ ಭಿನ್ನಾಭಿಪ್ರಾಯಗಳ ಕಾರಣದಿಂದ ಕಡೆಗಣಿಸುತ್ತಿದ್ದರು. ಯಾವ ಮಾತಿಗೂ ಸ್ಪಂದಿಸುತ್ತಿರಲಿಲ್ಲ. ಮಂಡ್ಯದಿಂದ ನಿಖಿಲ್‌ ಕುಮಾರಸ್ವಾಮಿ ಬದಲು ಪಕ್ಷದ ಕಾರ್ಯಕರ್ತರಿಗೆ ಟಿಕೆಟ್‌ ನೀಡಲು ಹೇಳಿದೆ. ಇದರಿಂದ ಸಿಟ್ಟಿಗೆದ್ದ ಅವರು ನನ್ನನ್ನು ಪಕ್ಷದ ಯಾವ ಕಾರ್ಯಕ್ರಮಕ್ಕೂ ಕರೆಯಲಿಲ್ಲ. ಸಭೆಗೂ ಆಹ್ವಾನಿಸಲಿಲ್ಲ.

–ಮರಿತಿಬ್ಬೇಗೌಡ, ಜೆಡಿಎಸ್ ಮುಖಂಡ (ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ)

***

ಬಿಜೆಪಿಗೆ ಬರುವುದಿಲ್ಲ ಎಂದಿದ್ದ ಜೆ.ಸಿ.ಮಾಧುಸ್ವಾಮಿ ಅವರನ್ನು ಈ ಪಕ್ಷಕ್ಕೆ ಕರೆ ತಂದಿದ್ದೇ ನಾನು. ಈಗ ನನಗೇ ವಿರೋಧ ಮಾಡುತ್ತಿದ್ದಾರೆ. ನೀನು ಬುದ್ಧಿವಂತ, ಪ್ರಜ್ಞಾವಂತ ಎಂದು ಹೇಳಿ ಕರೆದುಕೊಂಡು ಬಂದವರಲ್ಲಿ ನಾನು ಮೊದಲಿಗನಾಗಿದ್ದೆ. ಈಗ ಪದೇ ಪದೇ ಸೋಮಣ್ಣನನ್ನು ಸೋಲಿಸುತ್ತೇನೆ ಎಂದು ಅವರು ಹೇಳುವುದು ಎಷ್ಟರಮಟ್ಟಿಗೆ ಸರಿ? ಅವರ ಅಸಮಾಧಾನವನ್ನು ವರಿಷ್ಠರ ಗಮನಕ್ಕೆ ತಂದಿರುವೆ. ಅವರು ಹೇಳಿದಂತೆ ನಡೆದುಕೊಳ್ಳುವೆ. ನಾನು ಹರಿಯುವ ನೀರು. ಇನ್ಯಾರಿಗೋಸ್ಕರನೋ ಬದುಕಿದವನಲ್ಲ.

ವಿ.ಸೋಮಣ್ಣ, ತುಮಕೂರು ಬಿಜೆಪಿ ಅಭ್ಯರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT