ಹೈದರಾಬಾದ್: 2,188 ಚುನಾವಣಾ ಬಾಂಡ್ಗಳ ಮೂಲಕ ₹ 1,322 ಕೋಟಿ ದೇಣಿಗೆ ಸ್ವೀಕರಿಸಿರುವುದಾಗಿ ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್) ಪಕ್ಷ ತಿಳಿಸಿದೆ.

ಸುಪ್ರೀಂ ಕೋರ್ಟ್ ನಿರ್ದೇಶನದ ಅನುಸಾರ ಚುನಾವಣಾ ಆಯೋಗವು, 2023ರ ಸೆಪ್ಟೆಂಬರ್ 30ರ ವರೆಗೆ ಸ್ವೀಕರಿಸಿದ ಚುನಾವಣಾ ಬಾಂಡ್ಗಳ ಕುರಿತು ವರದಿ ನೀಡುವಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ಸೂಚನೆ ನೀಡಿತ್ತು. ಅದರಂತೆ, ಬಿಆರ್ಎಸ್ ಪಕ್ಷವು 2023ರ ನವೆಂಬರ್ 14ರಂದು ಆಯೋಗಕ್ಕೆ ಪ್ರತಿಕ್ರಿಯೆ ಸಲ್ಲಿಸಿದೆ.

ಪ್ರತಿ ಬಾಂಡ್ನಿಂದ ಸ್ವೀಕರಿಸಲಾದ ಹಣ, ಬಾಂಡ್ ಸಂಖ್ಯೆ ಮತ್ತು ಬಾಂಡ್ ಸ್ವೀಕರಿಸಿದ ದಿನಾಂಕ ಸಹಿತ ಮಾಹಿತಿಯನ್ನು ಹಂಚಿಕೊಂಡಿದೆ.

'ಎಸ್ಬಿಐನಲ್ಲಿರುವ ನಮ್ಮ ಪಕ್ಷದ ಖಾತೆಗೆ 2018ರ ಅಕ್ಟೋಬರ್ 11ರಿಂದ 2023ರ ಸೆಪ್ಟೆಂಬರ್ 30ರ ವರೆಗೆ ಚುನಾವಣಾ ಬಾಂಡ್ಗಳ ಮೂಲಕ ₹ 1,322 ಕೋಟಿ ಜಮೆಯಾಗಿದೆ' ಎಂದು ಬಿಆರ್ಎಸ್ ಹೇಳಿದೆ.
.Electoral Bonds: ಸುಪ್ರೀಂ ಕೋರ್ಟ್ ತರಾಟೆ ಬಳಿಕ ಎಲ್ಲ ದಾಖಲೆ ಸಲ್ಲಿಸಿದ ಎಸ್ಬಿಐ.ಆಳ–ಅಗಲ | Electoral Bond : ಬಸ್ ಮಾರಾಟ ಒಪ್ಪಂದದ ಆಸುಪಾಸಿನಲ್ಲಿ ಬಾಂಡ್ ಖರೀದಿ.
ಇದರಲ್ಲಿ ಅರ್ಧದಷ್ಟು ಹಣವನ್ನು (₹ 661 ಕೋಟಿ) 2018ರ ಅಕ್ಟೋಬರ್ 11ರಿಂದ 2023ರ ಸೆಪ್ಟೆಂಬರ್ 30ರ ನಡುವೆ ನಾಲ್ಕು ಬೇರೆ ಬೇರೆ ದಿನಗಳಲ್ಲಿ ನಗದೀಕರಿಸಿಕೊಂಡಿರುವುದಾಗಿ ತಿಳಿಸಿದೆ.

'ಚುನಾವಣಾ ಬಾಂಡ್ ಯೋಜನೆಯ ನಿಯಮದಂತೆ ಬಾಂಡ್ ಮೂಲಕ ದೇಣಿಗೆ ನೀಡಿದವರ ಮಾಹಿತಿ ನಮಗೆ ದೊರೆತಿಲ್ಲ. ಹಾಗಾಗಿ, ಪ್ರತಿ ಬಾಂಡ್ನ ಖರೀದಿದಾರ ಯಾರು ಎಂಬ ವಿವರ ನಮ್ಮಲ್ಲಿ ಲಭ್ಯವಿಲ್ಲ' ಎಂದೂ ವಿವರಿಸಿದೆ.

ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್ಎಸ್ ಪಕ್ಷವು, 2014ರ ಜನವರಿ 2ರಿಂದ 2023ರ ಡಿಸೆಂಬರ್ ವರೆಗೆ ತೆಲಂಗಾಣದಲ್ಲಿ ಅಧಿಕಾರದಲ್ಲಿತ್ತು.
.PM ಹಫ್ತಾ ವಸೂಲಿ ಯೋಜನೆ: ಚುನಾವಣಾ ಬಾಂಡ್ ವಿಷಯವಾಗಿ ಸರ್ಕಾರದ ವಿರುದ್ಧ 'ಕೈ' ಕಿಡಿ.ಚುನಾವಣಾ ಬಾಂಡ್: SBIಗೆ ಸುಪ್ರೀಂ ಕೋರ್ಟ್ ಕೇಳಿದ ಆಲ್ಫಾ ನ್ಯೂಮರಿಕ್ ಸಂಖ್ಯೆ ಏನು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.