ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶದಾದ್ಯಂತ 31.2 ಕೋಟಿ ಮಹಿಳಾ ಮತದಾರರು ಸೇರಿ 64.2 ಕೋಟಿ (ಒಟ್ಟು ಮತದಾರರ ಸಂಖ್ಯೆ 96.88 ಕೋಟಿ) ಮತದಾರರು ಹಕ್ಕು ಚಲಾಯಿಸಿದ್ದು, ವಿಶ್ವ ದಾಖಲೆಯಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಸೋಮವಾರ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಏಳು ಹಂತಗಳಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ 68 ಸಾವಿರ ಮೇಲ್ವಿಚಾರಣಾ ತಂಡಗಳು, 1.5 ಕೋಟಿ ಮತಗಟ್ಟೆ ಮತ್ತು ಭದ್ರತಾ ಸಿಬ್ಬಂದಿ ಭಾಗಿಯಾಗಿದ್ದಾರೆ. 4 ಲಕ್ಷ ವಾಹನಗಳು, 135 ವಿಶೇಷ ರೈಲು, 1,692 ವಾಯುಸೇನೆಯ ವಾಹನಗಳನ್ನು ಬಳಸಲಾಗಿದೆ. ನಾಲ್ಕು ದಶಕಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ದಾಖಲೆಯ ಶೇ 58.58ರಷ್ಟು ಮತದಾನವಾಗಿದೆ’ ಎಂದರು.

ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಚುನಾವಣೆ ಮುಗಿಯುವ ವೇಳೆಗೆ ₹10 ಸಾವಿರ ಕೊಟಿ ನಗದು, ಉಡುಗೊರೆಗಳು, ಮಾದಕ ದ್ರವ್ಯ ಮತ್ತು ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
.ನಾಳೆ ಮತ ಎಣಿಕೆ; ಮೊದಲ ಬಾರಿಗೆ ಚುನಾವಣೋತ್ತರ ಪತ್ರಿಕಾಗೋಷ್ಠಿ ಕರೆದ ಚುನಾವಣಾ ಆಯೋಗ.ಮತ ಎಣಿಕೆ ಮಾರ್ಗಸೂಚಿ ಪಾಲನೆ ಖಾತ್ರಿಪಡಿಸಿ: ‘ಇಂಡಿಯಾ’ ಕೂಟದ ಮುಖಂಡರ ನಿಯೋಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.