ನವದೆಹಲಿ: ‘ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಪರಸ್ಪರ ಅಥವಾ ವಿರುದ್ಧವಾಗಿ ಮತಪ್ರಚಾರ ಮಾಡುತ್ತಿದ್ದು, ಚುನಾವಣೆ ನಂತರ ಕೈಜೋಡಿಸಲಿದ್ದಾರೆ. ಇಂಡಿಯಾ ಬ್ಲಾಕ್‌ನಿಂದ ಎಲ್ಲಾ ಪಕ್ಷಗಳ ಒಮ್ಮತದ ಅಭ್ಯರ್ಥಿ ಪ್ರಧಾನಿಯಾಗಲಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಹೇಳಿದ್ದಾರೆ.

ಪಿಟಿಐ ಸಂಪಾದಕರೊಂದಿಗಿನ ಸಂವಾದದಲ್ಲಿ ಈ ವಿಷಯ ಹಂಚಿಕೊಂಡ ತರೂರ್, ‘ಜೂನ್ 4ರ ನಂತರ ತೃಣಮೂಲ ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳೂ ಜತೆಗೂಡಲಿವೆ. ಸಮ್ಮಿಶ್ರ ಸರ್ಕಾರದ ಕುರಿತು ಯಾವುದೇ ಭಯ ಇಟ್ಟುಕೊಳ್ಳುವ ಅಗತ್ಯವಿಲ್ಲ. ಏಕಪಕ್ಷದ ಸರ್ಕಾರಕ್ಕಿಂತ ಸಮ್ಮಿಶ್ರ ಸರ್ಕಾರ ಇದ್ದಲ್ಲಿ ದೇಶದ ಆರ್ಥಿಕ ಅಭಿವೃದ್ಧಿ ಇನ್ನಷ್ಟು ಉತ್ತಮಗೊಳ್ಳಲಿದೆ’ ಎಂದಿದ್ದಾರೆ.

‘ಇದು ಬದಲಾವಣೆಯ ಚುನಾವಣೆ. ಬಿಜೆಪಿ ಈಗಾಗಲೇ ತನ್ನ ಹಿಡಿತ ಕಳೆದುಕೊಳ್ಳಲಾರಂಭಿಸಿದೆ’ ಎಂದ ತರೂರ್ ಅಯೋಧ್ಯ ರಾಮಮಂದಿರದಲ್ಲಿ ನಡೆದ ಬಾಲರಾಮನ ಪ್ರಾಣಪತ್ರಿಷ್ಠಾಪನೆ ಕಾರ್ಯಕ್ರಮಕ್ಕೆ ಬಂದ ಆಹ್ವಾನವನ್ನು ಕಾಂಗ್ರೆಸ್ ತಿರಸ್ಕರಿಸಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. ‘ನರೇಂದ್ರ ಮೋದಿ ಅವರನ್ನು ವೈಭವೀಕರಿಸುವ ರಾಜಕೀಯ ಕಾರ್ಯಕ್ರಮ ಅದಾಗಿದ್ದರಿಂದ, ಆ ಕಾರ್ಯಕ್ರಮದಿಂದ ದೂರ ಉಳಿಯುವ ನಿರ್ಧಾರ ಸಮರ್ಥನೀಯ’ ಎಂದಿದ್ದಾರೆ.

'ಸಮ್ಮಿಶ್ರ ಸರ್ಕಾರದ ಮತ್ತೊಂದು ಲಾಭವೆಂದರೆ, ಇಲ್ಲಿ ಯಾರೇ ಪ್ರಧಾನಿಯಾದರೂ ಸರ್ವಾಧಿಕಾರಿಗಳು ಆಗಲು ಸಾದ್ಯವಿಲ್ಲ. ಇದು ಸರಿಯಾದ ಸಂಸದೀಯ ವ್ಯವಹಾರಗಳ ಪದ್ಧತಿ. ಸದ್ಯ ನಡೆಯುತ್ತಿರುವುದು ಏಕವ್ಯಕ್ತಿಯ ಆಡಳಿತ ವ್ಯವಸ್ಥೆ. ಇದು ಸರ್ಕಾರ ಹಾಗೂ ದೇಶ ಎರಡಕ್ಕೂ ಮಾರಕ’ ಎಂದು ತರೂರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.