ನವದೆಹಲಿ: ಮುಂಬೈ ಉತ್ತರ ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದ ದಿ. ಪ್ರಮೋದ ಮಹಾಜನ್ ಪುತ್ರಿ ಪೂನಂ ಅವರ ಹೆಸರು ಕೈಬಿಟ್ಟ ಬಿಜೆಪಿ, 26/11 ದಾಳಿ ಪ್ರಕರಣದಲ್ಲಿ ಸರ್ಕಾರಿ ವಕೀಲರಾಗಿದ್ದ ಉಜ್ವಲ್ ನಿಕ್ಕಂ ಅವರನ್ನು ಕಣಕ್ಕಿಳಿಸುತ್ತಿರುವುದಾಗಿ ಘೋಷಿಸಿದೆ.

ಮುಂಬೈ ಮೇಲೆ 2011ರಲ್ಲಿ ನಡೆದ ದಾಳಿಯ ಪ್ರಕರಣದಲ್ಲಿ ನಿಕ್ಕಂ ಅವರು ಸರ್ಕಾರಿ ವಕೀಲರಾಗಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು. ಮತ್ತೊಂದೆಡೆ ಪೂನಂ ಮಹಾಜನ್ ಅವರು 2014ರಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿದ್ದರು. ಅವರು ಬಿಜೆಪಿ ಯುವ ಘಟಕದ ಮಾಜಿ ಅಧ್ಯಕ್ಷರೂ ಹೌದು.

ಆದರೆ ಪಕ್ಷದ ಸಂಘಟನಾ ವಲಯದಿಂದ ವ್ಯಕ್ತವಾದ ಅಭಿಪ್ರಾಯಗಳನ್ನು ದಾಖಲಿಸಿ, ಪೂನಂ ಅವರ ಹೆಸರನ್ನು ಕೈಬಿಡಲಾಗಿದೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.

‘ಆದರೆ, ಮಹಾಜನ್ ಅವರ ಹೆಸರನ್ನು ಕೈಬಿಡುವ ಯೋಜನೆ ಪಕ್ಷಕ್ಕೆ ಮೊದಲೇ ಇತ್ತು. ಸೂಕ್ತ ಅಭ್ಯರ್ಥಿಯ ಹುಡುಕಾಟ ನಡೆಯುತ್ತಿತ್ತು. ನಿಕ್ಕಂ ಅವರು ಒಪ್ಪಿದ್ದರಿಂದ ಪೂನಂ ಹೆಸರು ಕೈಬಿಡಲಾಗಿದೆ’ ಎಂದು ಮೂಲಗಳು ಹೇಳಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದೇ ಕ್ಷೇತ್ರಕ್ಕೆ ಧಾರಾವಿ ಶಾಸಕಿ ವರ್ಷಾ ಗಾಯಕ್ವಾಡ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಲೋಕಸಭಾ ಚುನಾವಣೆಯ 5ನೇ ಹಂತದಲ್ಲಿ ಮೇ 20ರಂದು ಇಲ್ಲಿ ಮತದಾನ ನಡೆಯಲಿದೆ.
.LS polls: ಮತ ಚಲಾಯಿಸದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ LDF ಟೀಕೆ.LS Polls 2024 | ಶೇ 65ರಷ್ಟು ವಿದ್ಯಾವಂತ ಯುವಕರಿಗೆ ಉದ್ಯೋಗವಿಲ್ಲ: ಖರ್ಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.