ಪುರಿ: ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು ಪುರಿಯ ಕಡಲ ಕಿನಾರೆಯಲ್ಲಿ 500 ಕೆ.ಜಿ ಮಾವಿನ ಹಣ್ಣುಗಳನ್ನು ಬಳಸಿ ಕಲಾಕೃತಿಯನ್ನು ರಚಿಸುವ ಮೂಲಕ ಮತದಾನದ ಜಾಗೃತಿ ಮೂಡಿಸಿದ್ದಾರೆ.

ಲೋಕಸಭಾ ಚುನಾವಣೆಯ ಆರನೇ ಹಂತದ ಮತದಾನ ಇಂದು (ಶನಿವಾರ) ನಡೆಯುತ್ತಿದ್ದು, ಮತದಾರರು ತಪ್ಪದೆ ತಮ್ಮ ಹಕ್ಕು ಚಲಾಯಿಸುವಂತೆ ಮನವಿ ಮಾಡಿದ್ದಾರೆ.

2,000 ಚದರ ಅಡಿ ಪ್ರದೇಶದಲ್ಲಿ ರಚಿಸಿರುವ ಕಲಾಕೃತಿ ಮೇಲೆ ‘ಚುನಾವ್ ಕಾ ಪರ್ವ್ ದೇಶ್ ಕಾ ಗರ್ವ್’ ಮತ್ತು ‘ನಿಮ್ಮ ಮತ ನಿಮ್ಮ ಧ್ವನಿ’ ಎಂದು ಬರೆದಿದ್ದಾರೆ.

ಪಟ್ನಾಯಕ್ ಅವರು ತಮ್ಮ ಸಂಸ್ಥೆಯ ವಿದ್ಯಾರ್ಥಿಗಳ ಸಹಾಯದೊಂದಿಗೆ ಸುಮಾರು ಐದು ಗಂಟೆಗಳಲ್ಲಿ ಮರಳು ಕಲಾಕೃತಿಯನ್ನು ರಚಿಸಿದ್ದಾರೆ.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಇದು ಬೇಸಿಗೆಯ ಸಮಯ. ಮಾವು ಎಲ್ಲರಿಗೂ ಅಚ್ಚುಮೆಚ್ಚಿನದ್ದಾಗಿದೆ. ಆದ್ದರಿಂದ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮಾವಿನ ಹಣ್ಣುಗಳನ್ನೇ ಬಳಸಿ ಕಲಾಕೃತಿ ರಚಿಸಲಾಗಿದೆ’ ಎಂದು ಹೇಳಿದ್ದಾರೆ.
.LS polls 2024 | ದಾಖಲೆ ಪ್ರಮಾಣದಲ್ಲಿ ಮತದಾನ ಮಾಡಿ: ಪ್ರಧಾನಿ ಮೋದಿ ಕರೆ.LS polls | ಏಕತೆ, ನ್ಯಾಯಕ್ಕಾಗಿ ಹಕ್ಕು ಚಲಾಯಿಸಿ: ಮಲ್ಲಿಕಾರ್ಜುನ ಖರ್ಗೆ ಕರೆ.ಮೋದಿ ಲೆಕ್ಕವಿಲ್ಲದೇ ಏನನ್ನೂ ಹೇಳುವುದಿಲ್ಲ; NDAಗೆ 400 ಸೀಟು ಬರುತ್ತೆ: ಸಂಬಿತ್.Lok Sabha Election 2024 | 6ನೇ ಹಂತ ಮುಕ್ತಾಯ: ಶೇ 58.82 ರಷ್ಟು ಮತದಾನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.