ನವದೆಹಲಿ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ತಾವು ನಡೆಸಿದ ಮತಗಟ್ಟೆಗಳ ಸಮೀಕ್ಷೆಯಂತೆ ಫಲಿತಾಂಶ ಬಾರದ ಕಾರಣ ಬೇಸರಗೊಂಡ ಆ್ಯಕ್ಸಿಸ್ ಮೈ ಇಂಡಿಯಾದ ಮುಖ್ಯಸ್ಥ ಪ್ರದೀಪ್ ಗುಪ್ತಾ ಟಿ.ವಿ. ಕಾರ್ಯಕ್ರಮದಲ್ಲೇ ಭಾವುಕರಾದ ಸನ್ನಿವೇಶ ಮಂಗಳವಾರ ನಡೆದಿದೆ.

ಬಿಜೆಪಿ ನೇತೃತ್ವದ ಎನ್ಡಿಎ ಸುಮಾರು 400 ಸ್ಥಾನಗಳನ್ನು ಗೆಲ್ಲಲಿದೆ ಎಂದು ಆ್ಯಕ್ಸಿಸ್ ಮೈ ಇಂಡಿಯಾ ಸೇರಿದಂತೆ ಬಹುತೇಕ ಸಂಸ್ಥೆಗಳ ವರದಿಗಳು ಹೇಳಿದ್ದವು.

ಮಂಗಳವಾರ ಬೆಳಿಗ್ಗೆ ಮತ ಎಣಿಕೆ ಆರಂಭವಾಗುತ್ತಿದ್ದಂತೆ ಇಂಡಿಯಾ ಟುಡೆ ಸುದ್ದಿವಾಹಿನಿಯ ಸ್ಟುಡಿಯೊದಲ್ಲಿ ಚರ್ಚೆಯಲ್ಲಿ ಪಾಲ್ಗೊಂಡ ಸಮೀಕ್ಷೆ ನಡೆಸಿದ್ದ ಆ್ಯಕ್ಸಿಸ್ ಮೈ ಇಂಡಿಯಾದ ಮುಖ್ಯಸ್ಥ ಪ್ರದೀಪ್ ಗುಪ್ತಾ ಅವರು ಒಂದು ಕ್ಷಣ ಭಾವುಕರಾದರು.

ತಮ್ಮ ಫಲಿತಾಂಶ ಲೆಕ್ಕಾಚಾರದಂತೆ ಬಾರದ ಕಾರಣ, ಅರೆಕ್ಷಣ ಮಾತು ನಿಲ್ಲಿಸಿ ಕಣ್ಣೀರು ಹಾಕಿದರು. ತಕ್ಷಣ ಚರ್ಚೆಯಲ್ಲಿ ಪಾಲ್ಗೊಂಡವರು, ನಿರೂಪಕರು ಹಾಗೂ ಸ್ಟುಡಿಯೊ ಸಿಬ್ಬಂದಿ ಅವರನ್ನು ಸಮಾಧಾನಪಡಿಸಿದರು.

ಈ ಬಾರಿ ಎನ್ಡಿಎ 361ರಿಂದ 401 ಸ್ಥಾನಗಳನ್ನು ಹಾಗೂ ಇಂಡಿಯಾ ಒಕ್ಕೂಟ 131ರಿಂದ 166 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಆ್ಯಕ್ಸಿಸ್ ಮೈ ಇಂಡಿಯಾ ಹೇಳಿತ್ತು.
.LS Polls: NDAಗೆ ಸಿಗದ ನಿರೀಕ್ಷಿತ ಸ್ಥಾನ: ಸರ್ಕಾರ ರಚಿಸಲು INDIA ದಿಂದಲೂ ಯತ್ನ.LS Poll Result 2024: ಸ್ಮೃತಿ ಇರಾನಿ, ಒಮರ್ ಸೇರಿ ಸೋತ ಪ್ರಮುಖರು....LS Polls Results| ಷೇರುಪೇಟೆಯಲ್ಲಿ ಆರಂಭಿಕ ಕುಸಿತ: ಸೆನ್ಸೆಕ್ಸ್, ನಿಫ್ಟಿ ಇಳಿಕೆ.Karnataka Lok Sabha Results 2024 ಬಿಜೆಪಿ- 17, ಕಾಂಗ್ರೆಸ್-09, ಜೆಡಿಎಸ್-02 .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.