ಕೊಹಿಮಾ: ಪ್ರತ್ಯೇಕ ರಾಜ್ಯದ ಬೇಡಿಕೆ ಈಡೇರುವವರೆಗೆ ಲೋಕಸಭಾ ಚುನಾವಣೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎನ್ನುವ ತಮ್ಮ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಷನ್ (ಇಎನ್‌ಪಿಒ) ಮುಖಂಡರು ಶುಕ್ರವಾರ ಹೇಳಿದರು.

ಇಎನ್‌ಪಿಒ ತಮ್ಮ ಪ್ರಾಂತ್ಯದ 20 ಶಾಸಕರು ಮತ್ತು ಏಕೈಕ ಸಂಸದರೊಂದಿಗೆ ಗುರುವಾರ ತುಯೆನ್ಸಾಂಗ್‌ನಲ್ಲಿ ಗುಪ್ತ ಸಭೆ ನಡೆಸಿತು.

‘ಗಡಿ ನಾಗಾಲ್ಯಾಂಡ್ (ಫ್ರಾಂಟಿಯರ್ ನಾಗಾಲ್ಯಾಂಡ್) ಪ್ರಾಂತ್ಯದ ತಮ್ಮ ಬೇಡಿಕೆಯನ್ನು ಕೇಂದ್ರ ಸರ್ಕಾರವು ಈಡೇರಿಸುವವರೆಗೆ ಲೋಕಸಭಾ ಚುನಾವಣೆಯಿಂದ ದೂರವುಳಿಯಲು ಮತ್ತು ತಮ್ಮ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ಕೆ ಅವಕಾಶ ನೀಡದಿರಲು ತೀರ್ಮಾನಿಸಿದ್ದೇವೆ’ ಎಂದು ಇಎನ್‌ಪಿಒ ಉಪಾಧ್ಯಕ್ಷ ಡಬ್ಲ್ಯು.ಬೆಂಡಾಂಗ್ ಚಾಂಗ್ ಪಿಟಿಐಗೆ ತಿಳಿಸಿದರು.

ಏಳು ನಾಗಾ ಬುಡಕಟ್ಟುಗಳ ಸಂಘಟನೆಯಾಗಿರುವ ಇಎನ್‌ಪಿಒ ಪೂರ್ವ ನಾಗಾಲ್ಯಾಂಡ್‌ನ ಆರು ಜಿಲ್ಲೆಗಳನ್ನೊಳಗೊಂಡಂತೆ ಪ್ರತ್ಯೇಕ ರಾಜ್ಯದ ಸ್ಥಾಪನೆಗಾಗಿ 2010ರಿಂದಲೂ ಹೋರಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.