ನವದೆಹಲಿ: ಹೆದ್ದಾರಿಗಳಲ್ಲಿ ಬಳಕೆದಾರರ ಶುಲ್ಕ (ಟೋಲ್) ಹೆಚ್ಚಳದ ಲೆಕ್ಕಾಚಾರವನ್ನು ಮುಂದುವರಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್ಎಚ್ಐಎ) ಹೇಳಿರುವ ಚುನಾವಣಾ ಆಯೋಗವು, ಹೊಸ ದರಗಳು ಏ. 1ರ ಬದಲು ಲೋಕಸಭಾ ಚುನಾವಣೆಯ ನಂತರವೇ ಅನ್ವಯವಾಗಬೇಕು ಎಂದು ಹೇಳಿದೆ.

ಚುನಾವಣಾ ಆಯೋಗ ಟೋಲ್ ಹೆಚ್ಚಳ ಜಾರಿಗೆ ತರುವುದನ್ನು ಮುಂದೂಡುವಂತೆ ಎನ್ಎಚ್ಐಎ ಅನ್ನು ಕೇಳಿಕೊಂಡಿದೆ. ಈ ಸಂಬಂಧ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ನಡೆಸಿದ ಸಂವಹನಕ್ಕೆ ಆಯೋಗವು ಪ್ರತಿಕ್ರಿಯಿಸಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆಗಳು ಸುದ್ದಿಸಂಸ್ಥೆಗೆ ಲಭ್ಯವಾಗಿವೆ.

ವಿದ್ಯುತ್ ಸೇವಾಶುಲ್ಕಕ್ಕೆ ಸಂಬಂಧಿಸಿದ ಅಗತ್ಯ ಪ್ರಕ್ರಿಯೆಗಳನ್ನು ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗಗಳು ಮುಂದುವರಿಸಬಹುದು. ಆದರೆ, ಇದರ ಅನುಷ್ಠಾನವು ಆಯಾ ರಾಜ್ಯಗಳಲ್ಲಿ ಮತದಾನ ಮುಗಿದ ನಂತರವೇ ನಡೆಯಬೇಕು ಎಂದು ಚುನಾವಣಾ ಆಯೋಗವು ಏ. 1ರಂದು ರಸ್ತೆ ಸಚಿವಾಲಯದೊಟ್ಟಿಗೆ ನಡೆಸಿರುವ ಸಂವಹನದಲ್ಲಿ ತಿಳಿಸಿದೆ.

ಏ. 19ರಂದು ಮೊದಲ ಹಂತದ ಮತದಾನ ನಡೆಯಲಿದೆ. ಜೂನ್ 1ರಂದು ಏಳನೇ ಹಂತದ ಮತದಾನ ನಡೆಯಲಿದ್ದು, 4ರಂದು ಮತ ಎಣಿಕೆ ನಡೆಯಲಿದೆ.

ದೇಶದಾದ್ಯಂತ ಇರುವ ಹೆದ್ದಾರಿಗಳು ಮತ್ತು ಎಕ್ಸ್ಪ್ರೆಸ್ ಹೈವೇಗಳಲ್ಲಿ ಏ. 1ರಿಂದ ಹೊಸ ಟೋಲ್ ದರ ಜಾರಿಗೊಳ್ಳಲಿದ್ದು, ಟೋಲ್ನ ವಾರ್ಷಿಕ ಪರಿಷ್ಕರಣೆ ಶೇ 5ರ ಆಸುಪಾಸಿನಲ್ಲಿರಲಿದೆ ಎಂದು ನಿರೀಕ್ಷಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.