ಬೆಳಗಾವಿ: ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡಲು ಹಾಲಿ ಶಾಸಕ ಮಹೇಶ ಕುಮಠಳ್ಳಿ ಸಿದ್ಧತೆ ಮಾಡಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಅವರಿಗೇ ಟಿಕೆಟ್ ಸಿಗುವುದು ಖಾತ್ರಿಯಾದ ಕಾರಣ ತಯಾರಿ ಮಾಡಿಕೊಳ್ಳಲು ತಿಳಿಸಿದ್ದಾರೆ ಎಂದು ಅವರ ಆಪ್ತರು ಮಾಹಿತಿ ನೀಡಿದ್ದಾರೆ.

ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಠಿಕಾಣೆ ಹೂಡಿದ್ದ ಮಹೇಶ ಕುಮಠಳ್ಳಿ ಶುಕ್ರವಾರ ಕ್ಷೇತ್ರಕ್ಕೆ ಮರಳಿದರು. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ ಮಾಧ್ಯಮದವರೊಂದಿಗೂ ಅವರು ಮಾತನಾಡಲಿಲ್ಲ.

ಆದರೆ, ಚುನಾವಣೆ ಪ್ರಚಾರಕ್ಕೆ ಬೇಕಾದ ವಾಹನಗಳು, ಲೌಡ್ಸ್ಪೀಕರ್, ಮೈಕುಗಳಿಗೆ ಅವರ ಆಪ್ತರು ‘ಬುಕಿಂಗ್’ ಮಾಡಿದರು. ಬಿಜೆಪಿ ಧ್ವಜಗಳು, ಟೊಪ್ಪಿಗೆ, ಕಟೌಟ್, ಬಂಟಿಂಗ್ಸ್, ಶಾಲುಗಳನ್ನು ಪ್ರಿಂಟ್ ಮಾಡಲು ಸಾಂಗ್ಲಿಯ ವ್ಯಾಪಾರಿಗಳನ್ನು ಬುಕ್ ಮಾಡಿದ್ದಾಗಿ ಶಾಸಕರ ಆಪ್ತರು ತಿಳಿಸಿದರು.

ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ಗಾಗಿ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹಾಗೂ ಕುಮಠಳ್ಳಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.