ಮೈಸೂರು: ‘ಮೂಲ ಕಾಂಗ್ರೆಸ್ಸಿನ ಕೆಲ ಕಿಡಿಗೇಡಿಗಳು ಸಿದ್ದರಾಮಯ್ಯ ಅವರಿಗೆ ಸುಳ್ಳು ಹೇಳಿದ್ದಾರೆ. ಉಪ್ಪಿನ ಮೇಲೆ ಕೈಯಿಟ್ಟು ಹೇಳುತ್ತಿದ್ದೇನೆ, ಸಾಮಾನ್ಯ ರೈತನ ಮಗನಿಗೆ ಟಿಕೆಟ್ ನೀಡಿದ ಪಕ್ಷಕ್ಕೆ ನಾನು ದ್ರೋಹ ಬಗೆದಿಲ್ಲ’ ಎಂದು ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಎಸ್.ಸಿದ್ದೇಗೌಡ ಪ್ರಮಾಣ ಮಾಡಿದರು.

‘ಸಿದ್ದೇಗೌಡ ಮೋಸಗಾರ ಎಂದು ಗೊತ್ತಿರಲಿಲ್ಲ. ಅವನು ಇಂಥವನು ಎಂದು ಗೊತ್ತಿದ್ದಿದ್ದರೆ ನಮ್ ಹುಡುಗನನ್ನೇ ನಿಲ್ಲಿಸುತ್ತಿದ್ದೆ’ ಎಂದು ಸಿದ್ದರಾಮಯ್ಯ ಅವರು ಹೇಳಿದ್ದ ವಿಡಿಯೊ ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಹಿನ್ನೆಲೆಯಲ್ಲಿ ನಗರದಲ್ಲಿ ಗುರುವಾರ ಅವರು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು.

‘ಜಿ.ಟಿ.ದೇವೇಗೌಡ ಅವರೊಂದಿಗೆ ಬುಕ್ ಆಗಿದ್ದಾರೆ ಎಂದು ನನ್ನ ಮೇಲೆ ದೂರು ಹೇಳಿದವರು ಎಷ್ಟು ಮತವನ್ನು ಪಕ್ಷಕ್ಕೆ ತಂದಿದ್ದಾರೆ ಎಂಬುದು ಮತ ಎಣಿಕೆ ದಿನ ಗೊತ್ತಾಗಲಿದೆ’ ಎಂದು ತಿರುಗೇಟು ನೀಡಿದರು.

‘11 ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದರೂ, ಜೆಡಿಎಸ್ ಬಿಟ್ಟು ಪಕ್ಷಕ್ಕೆ ಸೇರಿದ ನನಗೆ ‘ಬಿ’ ಫಾರಂ ಕೊಟ್ಟು ಕಣಕ್ಕಿಳಿಸಲು ಡಿ.ಕೆ.ಶಿವಕುಮಾರ್ ಅವರಿಗೆ ಸೂಚಿಸಿದ ಸಿದ್ದರಾಮಯ್ಯ ಅವರೇ ನನ್ನ ನಾಯಕರು. ಟಿಕೆಟ್ ಸಿಗದ್ದಕ್ಕೆ ಕೆ.ಮರೀಗೌಡ ಸೇರಿದಂತೆ ಹಲವರು ಅಪಪ್ರಚಾರದಲ್ಲಿ ತೊಡಗಿದ್ದರು’ ಎಂದು ಆರೋಪಿಸಿದರು.

‘ಸಿದ್ದೇಗೌಡ ಮೋಸಗಾರನೆಂದು ಗೊತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಬೇರೆಯವರ ಮಾತನ್ನು ಕೇಳಬೇಡಿ. ಸ್ವಾಭಿಮಾನಕ್ಕಾಗಿ ಕಾಂಗ್ರೆಸ್ಗೆ ಬಂದಿದ್ದೇನೆ. ಪರಿಶೀಲಿಸಿ, ತಪ್ಪು ಮಾಡಿದ್ದರೆ ನನ್ನ ಕತ್ತು ಕತ್ತರಿಸಿಕೊಳ್ಳುವೆ’ ಎಂದರು.

‘ಕಾಂಗ್ರೆಸ್ ಸೇರಿದ ನಂತರ ನಾನು ಹಾಗೂ ನನ್ನ ಸಹೋದರರು ಜೆಡಿಎಸ್ ಕಡೆ ತಿರುಗಿ ನೋಡಿಲ್ಲ. ಮರೀಗೌಡ ಪ್ರಚಾರಕ್ಕೂ ಸರಿಯಾಗಿ ಸಹಕರಿಸಲಿಲ್ಲ. ಕ್ಷೇತ್ರದ 165 ಹಳ್ಳಿಗಳಲ್ಲಿ 161 ಗ್ರಾಮಗಳಲ್ಲಿ ನಾನೇ ಪಕ್ಷದ ಕಾರ್ಯಕರ್ತರೊಂದಿಗೆ ಮನೆ–ಮನೆ ಪ್ರಚಾರ ನಡೆಸಿದ್ದೇನೆ. ಗೆಲ್ಲುವ ವಾತಾವರಣ ಇದ್ದಾಗ ಅವರೊಂದಿಗೆ ಇನ್ನೂ ಕೆಲವರು ದ್ರೋಹ ಬಗೆದರು. ಆದರೂ, ಕ್ಷೇತ್ರದ ಜನರು ಕೈಬಿಡುವುದಿಲ್ಲ’ ಎಂದು ಹೇಳಿದರು.

ನಾನೇಕೆ ಬುಕ್ ಮಾಡಲಿ: ಜಿ.ಟಿ.ದೇವೇಗೌಡ

‘ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರವೇ ಗೊತ್ತಿಲ್ಲ. ಅವರಿಗೆ ಅಭ್ಯರ್ಥಿ ಆಯ್ಕೆ ಮಾಡುವುದೇ ಗೊತ್ತಿಲ್ಲ. ತಾಲ್ಲೂಕು ಪಂಚಾಯಿತಿ ಎಪಿಎಂಸಿ ಚುನಾವಣೆಗಳಲ್ಲಿ ಸೋತ ಸಿದ್ದೇಗೌಡ ಅವರನ್ನು ಕರೆದುಕೊಂಡು ಬಂದು ಅಭ್ಯರ್ಥಿ ಮಾಡುತ್ತಾರೆ. ಅವರಿಗೇ ಕ್ಷೇತ್ರವೇ ಗೊತ್ತಿಲ್ಲ’ ಎಂದು ಶಾಸಕ ಜಿ.ಟಿ.ದೇವೇಗೌಡ ತಿರುಗೇಟು ನೀಡಿದರು.

‘ಅಭ್ಯರ್ಥಿಯ ಸ್ವಗ್ರಾಮ ಮಾವಿನಹಳ್ಳಿ ಜಯಪುರದಲ್ಲೇ ಅವರಿಗೆ ಮತಗಳಿಲ್ಲ. ಅವರನ್ನು ನಾನೇಕೆ ಬುಕ್ ಮಾಡಲಿ’ ಎಂದರು. ‘2006ರ ಉಪಚುನಾವಣೆಯಲ್ಲಿ ಪ್ರಚಾರಕ್ಕೆ ಹೋಗಿದ್ದರೆ ಅವರು ಗೆಲ್ಲುತ್ತಿರಲಿಲ್ಲ. ರಾಜಕೀಯ ಅಂದೇ ಮುಗಿದುಹೋಗುತ್ತಿತ್ತು. ಜಿ.ಟಿ.ದೇವೇಗೌಡ ದುಡಿದಿದ್ದಾನೆ ಎಂದು ಒಂದು ದಿನ ಹೇಳುವುದಿಲ್ಲ’ ಎಂದು ಹರಿಹಾಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.