ಕೆ.ಆರ್.ಪೇಟೆ (ಮಂಡ್ಯ ಜಿಲ್ಲೆ): ‘ಪ್ರಚಾರದ ಕಡೆಯ ದಿನ ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಇಬ್ಬರೂ ಅಳುತ್ತಾರೆ. ಅಳುವೇ ಅಪ್ಪ- ಮಕ್ಕಳ ಕೊನೆಯ ಅಸ್ತ್ರ. ಅವರ ಕಣ್ಣೀರಿಗೆ ಈ ಬಾರಿ ಮಂಡ್ಯ ಜನ ಕರಗುವುದಿಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ವ್ಯಂಗ್ಯವಾಡಿದರು.

ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿ, ‘ಜನರನ್ನು ನೋಡಿದರೆ ಸಾಕು ಇಬ್ಬರಿಗೂ ಅಳು ಬಂದುಬಿಡುತ್ತದೆ. ನಮಗ್ಯಾಕೆ ಬರುವುದಿಲ್ಲ? ನರೇಂದ್ರ ಮೋದಿಯಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಒಂದು ದಿನವೂ ಪ್ರಶ್ನಿಸಲಿಲ್ಲ. ಬೆಳೆ ನಷ್ಟ ಪರಿಹಾರ ಕೊಡಿ ಎಂದು ಧೈರ್ಯದಿಂದ ಕೇಳಲಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಮೈತ್ರಿ ಪಕ್ಷದಲ್ಲಿ ಕುರುಬರಿಗೆ, ಮುಸ್ಲಿಮರಿಗೆ ಟಿಕೆಟ್ ಕೊಟ್ಟಿಲ್ಲ, ಪ್ರತಾಪ್ ಸಿಂಹ, ಸಿ.ಟಿ.ರವಿ, ಡಿ.ವಿ.ಸದಾನಂದಗೌಡ ಸೇರಿ ಹಲವು ಒಕ್ಕಲಿಗರಿಗೆ ಅನ್ಯಾಯ ಮಾಡಿದ್ದಾರೆ. ನಾವು ಇಬ್ಬರು ಕುರುಬರಿಗೆ, ಒಬ್ಬರು ಮುಸ್ಲಿಮರಿಗೆ, 8 ಒಕ್ಕಲಿಗರಿಗೆ ಟಿಕೆಟ್ ಕೊಟ್ಟಿದ್ದೇವೆ’ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ ‘ತೆನೆ ಹೊತ್ತ ಹೆಣ್ಣು ಮಗಳನ್ನು ಬಿಜೆಪಿಗೆ ಮಾರಾಟ ಮಾಡಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಭಾವನನ್ನು ಬಿಜೆಪಿಯಿಂದ ನಿಲ್ಲಿಸಿ, ಮಂಡ್ಯಕ್ಕೆ ಬಂದು ಜೆಡಿಎಸ್‌ಗೆ ಮತ ಕೇಳುತ್ತಿರುವ ಕುಮಾರಸ್ವಾಮಿಗೆ ಏನನ್ನಬೇಕು? ಮಗ, ಅಳಿಯ, ಮೊಮ್ಮಗನಿಗಾಗಿ ಪಕ್ಷವನ್ನೇ ಬಿಜೆಪಿ ಜೊತೆ ಸೇರಿಸಿರುವ ದೇವೇಗೌಡರಿಗೆ ಏನನ್ನಬೇಕು’ ಎಂದು ಪ್ರಶ್ನಿಸಿದರು.

‘ಅಧಿಕಾರ ಇದ್ದಾಗಲೇ ಕುಮಾರಸ್ವಾಮಿ ಏನೂ ಮಾಡಲಿಲ್ಲ, ನಿನ್ನದು ಬರೀ ಖಾಲಿ ಟ್ರಂಕ್’ ಎಂದು ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.