ಪೀಣ್ಯ ದಾಸರಹಳ್ಳಿ: ದಾಸರಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರಾಜು ಪರವಾಗಿ ಕೇರಳದ ನಟ ಸುರೇಶ್ ಗೋಪಿ ಅವರು ರೋಡ್ ಶೋ ಮೂಲಕ ಮತಯಾಚಿಸಿದರು.

ಮಲ್ಲಸಂದ್ರದ ಸರ್ಕಾರಿ ಶಾಲೆಯ ಸಮೀಪದಿಂದ ರೋಡ್ ಶೋ ನಡೆಯಿತು.

ಸುರೇಶ್ ಗೋಪಿ ಮಾತನಾಡಿ, ‘ದೇಶದಲ್ಲಿ ಮೋದಿಯವರ ಆಡಳಿತ ವೈಖರಿ ಹಾಗೂ ಅವರ ಅನೇಕ ಯೋಜನೆಗಳು ವಿಶ್ವಕ್ಕೆ ಮಾದರಿಯಾಗಿದೆ. ಈ ಕ್ಷೇತ್ರದಲ್ಲಿ ಮುನಿರಾಜು ಅವರನ್ನು ಗೆಲ್ಲಿಸುವ ಮೂಲಕ ನೀವೆಲ್ಲರೂ ಬಿಜೆಪಿ ಗೆಲ್ಲಿಸಬೇಕು’ ಎಂದು ಕೇರಳದ ನಾಗರಿಕರಿಗೆ ಮನವಿ ಮಾಡಿದರು.

ಮುನಿರಾಜು ಮಾತನಾಡಿ, ‘ಈ ಭಾಗದಲ್ಲಿ ಕೇರಳ ಸಮಾಜದವರು ಸಾವಿರಾರು ಸಂಖ್ಯೆಯಲ್ಲಿ ಇದ್ದಾರೆ. ನಮ್ಮ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳ ಮೆಚ್ಚಿ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಪರ ಒಲವು ತೋರಿಸಿದ್ದಾರೆ’ ಎಂದರು.

ಮಲ್ಲಸಂದ್ರದ ಸರ್ಕಾರಿ ಶಾಲೆಯ ಸಮೀಪದಿಂದ ಪೈಪ್‌ಲೈನ್ ಮಾರ್ಗವಾಗಿ ಶನಿಮಹಾತ್ಮ ದೇವಸ್ಥಾನದ ರಸ್ತೆ, ಸೆಲೆಕ್ಷನ್ ಕಾರ್ನರ್‌ವರೆಗೂ ಚುನಾವಣಾ ಪ್ರಚಾರ ನಡೆಸಿದರು. ಕೇರಳದ ಬಿಜೆಪಿ ಮಾಜಿ ಅಧ್ಯಕ್ಷ ಪಿ.ಕೆ. ಕೃಷ್ಣದಾಸ್, ಕೇರಳ ಸಮಾಜದ ಮುಖಂಡರಾದ ಆರ್.ಆರ್. ರವಿ, ಬಿಜು ಮೇಲಪ್ಪನ್, ಬಿಜು ರವಿ ಚಂದ್ರನ್, ಶಿವಪ್ರಕಾಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.