ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜೀವನಚರಿತ್ರೆಯನ್ನು ಆಧರಿಸಿದ ‘ಪಿಎಂ ನರೇಂದ್ರ ಮೋದಿ’ ಚಲನಚಿತ್ರ ಬಿಡುಗಡೆಗೆ ಚುನಾವಣಾ ಆಯೋಗವು ತಡೆ ನೀಡಿದೆ.

ಹಾಗೆಯೇ ‘ನಮೋ ಟಿವಿ’ಯ ಪ್ರಸಾರಕ್ಕೂ ಲೋಕಸಭೆ ಚುನಾವಣೆ ಮುಗಿಯುವವರೆಗೆ ನಿರ್ಬಂಧ ಹೇರಲಾಗಿದೆ. ‘ನಮೋ ಟಿ.ವಿ’ಯಲ್ಲಿ ಪ್ರಧಾನಿ ಮೋದಿ ಅವರ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿತ್ತು ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು.

ಪಿ.ಎಂ. ಮೋದಿ ಚಲನಚಿತ್ರವು ಏಪ್ರಿಲ್ 11ರಂದು ಬಿಡುಗಡೆಯಾಗಬೇಕಿತ್ತು. ಲೋಕಸಭೆಯ ಮೊದಲ ಹಂತದ ಮತದಾನವೂ ಅಂದೇ ನಡೆಯಲಿದೆ. ಆದರೆ ಅದಕ್ಕೂ ಒಂದು ದಿನ ಮೊದಲಷ್ಟೇ ಆಯೋಗವು ಈ ನಿರ್ಬಂಧ ಹೇರಿದೆ.

ಈ ಚಲನಚಿತ್ರವು ಮತದಾರರ ಮೇಲೆ ಪ್ರಭಾವ ಬೀರಲಿದೆ ಎಂದು ವಿರೋಧ ಪಕ್ಷಗಳು ಚುನಾವಣಾ ಆಯೋಗದ ಮೊರೆ ಹೋಗಿದ್ದವು.

ರಾಜಕೀಯ ವ್ಯಕ್ತಿಗಳು, ಪಕ್ಷಗಳು ಮತ್ತು ಲೋಕಸಭಾ ಚುನಾವಣೆಯ ಅಭ್ಯರ್ಥಿಗಳಿಗೆ ಸಂಬಂಧಿಸಿದ ಚಲನಚಿತ್ರಗಳನ್ನು ಚುನಾವಣೆ ಮುಗಿಯುವವರೆಗೆ ಪ್ರದರ್ಶನ ಮಾಡುವಂತಿಲ್ಲ ಎಂದು ಆಯೋಗವು ಹೇಳಿದೆ.

‘ಪಿಎಂ ನರೇಂದ್ರ ಮೋದಿ, ಎನ್ಟಿಆರ್ ಲಕ್ಷ್ಮೀ ಮತ್ತು ಉದ್ಯಮ ಸಿಂಹಂ ಚಲನಚಿತ್ರಗಳ ಬಗ್ಗೆ ನಮಗೆ ದೂರುಗಳು ಬಂದಿವೆ. ಈ ನಿರ್ಬಂಧವು ಚುನಾವಣೆ ಮುಗಿಯುವವರೆಗೂ ಜಾರಿಯಲ್ಲಿ ಇರಲಿದೆ’ ಎಂದು ಆಯೋಗವು ಹೇಳಿದೆ.

ನಿರ್ಬಂಧಗಳು

* ರಾಜಕಾರಣಿಗಳು ಮತ್ತು ಚುನಾವಣಾ ಅಭ್ಯರ್ಥಿಗಳಿಗೆ ಸಂಬಂಧಿಸಿದ ಚಲನಚಿತ್ರ, ಕಿರುಚಿತ್ರಗಳಿಗೆ ಈ ನಿರ್ಬಂಧ ಅನ್ವಯವಾಗಲಿದೆ

* ಚಲನಚಿತ್ರ, ಟಿವಿ, ಸಾಮಾಜಿಕ ಜಾಲತಾಣ ಸೇರಿದಂತೆ ಯಾವುದೇ ವಿದ್ಯುನ್ಮಾನ ಮಾಧ್ಯಮಗಳಲ್ಲೂ ಇವನ್ನು ಪ್ರದರ್ಶಿಸುವಂತಿಲ್ಲ

* ಚಲನಚಿತ್ರಗಳಿಗೆ ಸಂಬಂಧಿಸಿದ ಪೋಸ್ಟರ್ ಮತ್ತು ಜಾಹೀರಾತುಗಳನ್ನು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಪ್ರಕಟಿಸುವಂತಿಲ್ಲ. ದೇಶದಲ್ಲಿ ಏಳು ಹಂತದಲ್ಲಿ ಮತದಾನ ನಡೆಯಲಿದೆ. ಆಯಾ ಪ್ರದೇಶದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇರುವವರೆಗೂ ಈ ನಿರ್ಬಂಧ ಜಾರಿಯಲ್ಲಿ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.