ರಣಜೀತ್ ಸಿಂಗ್ ಚೌಟಾಲ (ಬಿಜೆಪಿ)

ಹರಿಯಾಣದ ಹಿಸಾರ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯು ರಣಜೀತ್ ಸಿಂಗ್ ಚೌಟಾಲ ಅವರನ್ನು ಸ್ಪರ್ಧೆಗಿಳಿಸಿದೆ. ಉದ್ಯಮಿ ಹಾಗೂ ರಾಜಕಾರಣಿಯಾಗಿರುವ ರಣಜೀತ್ ಅವರು ಈ ಹಿಂದೆ ಶಾಸಕರಾಗಿದ್ದರು. ವಿಧಾನ ಪರಿಷತ್ ಸದಸ್ಯರಾಗಿಯೂ ಆಯ್ಕೆಯಾಗಿದ್ದರು. ಐಎನ್ಎಲ್ಡಿ ಮತ್ತು ಕಾಂಗ್ರೆಸ್ನಲ್ಲಿ ಹಲವು ಕಾಲ ಇದ್ದ ಅವರು ಅನಂತರ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. 2019ರ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿಯ ಬ್ರಿಜೇಂದ್ರ ಸಿಂಗ್ ಅವರು 3,14,068 ಮತಗಳ ಅಂತರದಿಂದ ‘ಜನನಾಯಕ ಜನತಾ ಪಕ್ಷ’ದ (ಜೆಜೆಪಿ) ದುಷ್ಯಂತ ಚೌಟಾಲ ಅವರನ್ನು ಪರಾಭವಗೊಳಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮುಂದಿರಿಸಿಕೊಂಡು ರಣಜೀತ್ ಅವರು ಮತ ಯಾಚಿಸುತ್ತಿದ್ದಾರೆ. ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ರೈತರು ನಡೆಸಿರುವ ಪ್ರತಿಭಟನೆಯು ಈ ಬಾರಿ ಚುನಾವಣೆಯ ಮೇಲೂ ಪ್ರಬಾವ ಬಿರುವ ಸಾಧ್ಯತೆ ಇದೆ ಎಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ನೈನಾ ಚೌಟಾಲ (ಜೆಜೆಪಿ)

ಹಿಸಾರ್ ಕ್ಷೇತ್ರದಿಂದ ಜೆಜೆಪಿಯು ಈ ಬಾರಿ ಶಾಸಕಿ ನೈನಾ ಚೌಟಾಲ ಅವರನ್ನು ಅಖಾಡಕ್ಕಿಳಿಸಿದೆ. ನೈನಾ ಅವರು ಜೆಜೆಪಿ ಮುಖ್ಯಸ್ಥ ಅಜಯ್ ಸಿಂಗ್ ಚೌಟಾಲ ಅವರ ಪತ್ನಿ ಹಾಗೂ ಹರಿಯಾಣದ ಮಾಜಿ ಉಪ ಮುಖ್ಯಮಂತ್ರಿ ದುಷ್ಯಂತ ಚೌಟಾಲ ಅವರ ತಾಯಿಯಾಗಿದ್ದಾರೆ. ನೈನಾ ಅವರು, ರೈತರ ಸಮಸ್ಯೆಗಳನ್ನು ಪರಿಹರಿಸುವ ಭರವಸೆಯನ್ನು ನೀಡಿ ಮತ ಯಾಚಿಸುತ್ತಿದ್ದಾರೆ. ಈ ಹಿಂದೆ ವಿಧಾನಸಭಾ ಚುನಾವಣೆಗಾಗಿ ಜೆಜೆಪಿಯು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿತ್ತು. ಮನೋಹರ್ ಲಾಲ್ ಖಟ್ಟರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಈ ಮೈತ್ರಿಯೂ ಕೊನೆಗೊಂಡಿತ್ತು. ಈ ಬಾರಿ ಹಿಸಾರ್ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷವು ಜೈಪ್ರಕಾಶ್ ಅವರನ್ನು ಹಾಗೂ ಐಎನ್ಎಲ್ಡಿ ಸುನೈನಾ ಚೌಟಾಲ ಅವರನ್ನು ಕಣಕ್ಕಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.