ತುಮಕೂರು: ಮಾಜಿ ಶಾಸಕ ಬಿ.ಸುರೇಶ್ಗೌಡ ತಿಕ್ಲಾ.. ಇವನೊಬ್ಬ ಬಾಯಿ ಬಡುಕ (ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜ್ ಹೆಸರ ಹೇಳದೇ ಪ್ರಸ್ತಾಪ) ಎಂದು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ಟೀಕಿಸಿದರು.

ನಗರದ ಶಿರಾಗೇಟ್ನಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ಗೊಲ್ಲ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದರು.

ಹೇಮಾವತಿ ನೀರು ಜಿಲ್ಲೆಗೆ ಹರಿಸುವಲ್ಲಿ ಅನ್ಯಾಯ ಆಯಿತು ಎಂದು ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜ್ ಸುಳ್ಳು ಮಾಹಿತಿ ಹರಡುತ್ತಿದ್ದಾರೆ. ಯಾರಾದರೂ ಮಾಹಿತಿ ಹಕ್ಕಿನಡಿ ಅರ್ಜಿ ಹಾಕಿ ಎಷ್ಟು ನೀರು ತುಮಕೂರು ಜಿಲ್ಲೆಗೆ ಹರಿದಿದೆ ಎಂಬುದನ್ನು ಪಡೆಯಬಹುದು. ಬಿಜೆಪಿಯವರಿಗೆ ಬರೀ ಸುಳ್ಳು ಹೇಳುವುದು ತಪ್ಪು ದಾರಿಗೆಳೆಯುವುದೇ ಕೆಲಸ. ಆ ಸುರೇಶ್ಗೌಡ ತಿಕ್ಲಾ, ಇವನೊಬ್ಬ ಬಾಯಿಬಡುಕ ಎಂದು ಟೀಕಿಸಿದರು.

‘ಕಳೆದ ಬಾರಿ ಈ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎ.ಕೃಷ್ಣಪ್ಪನವರನ್ನು ಕೊಂದಿದ್ದೇ ಜೆಡಿಎಸ್ ಎಂದು ಬಸವರಾಜ್ ಆರೋಪಿಸುತ್ತಿದ್ದಾರೆ. ಕೃಷ್ಣಪ್ಪನವರಿಗೆ ಜೆಡಿಎಸ್ ಯಾವುದೇ ರೀತಿ ಮೋಸ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.