ಮುಂಬೈ: ಬಾಲಿವುಡ್‌ನ ‘12th ಫೇಲ್’ ಸಿನಿಮಾ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಸ್ವತಂತ್ರವಾಗಿ ನಾಮಿನೇಷನ್ ಸಲ್ಲಿಸಲಾಗಿದೆ ಎಂದು ಈ ಸಿನಿಮಾದ ನಾಯಕ ನಟ ವಿಕ್ರಾಂತ್ ಮಾಸ್ಸಿ ಹೇಳಿದ್ದಾರೆ.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಈ ವಿಷಯವನ್ನು ಬಹಿರಂಗಪಡಿಸಿದರು. 2023ರಲ್ಲಿ ಆರ್‌ಆರ್‌ಆರ್ ಸಿನಿಮಾದ ‘ನಾಟು ನಾಟು..’ ಹಾಡು ಆಸ್ಕರ್ ಪ್ರಶಸ್ತಿ ಪಡೆದುಕೊಂಡಿತು. ಈ ಚಿತ್ರ ಕೂಡ ಸ್ವತಂತ್ರವಾಗಿ ನಾಮಿನೇಟ್ ಆಗಿತ್ತು.

ಈಗ ಇದೇ ಪ್ರಯತ್ನದಲ್ಲಿ ‘12th ಫೇಲ್’ ಸಿನಿಮಾ ಕೂಡ ಇದೆ. ಈಗಾಗಲೇ ಭಾರತದಿಂದ ಅಧಿಕೃತವಾಗಿ ಮಲಯಾಳಂನ ‘2018’ ಚಿತ್ರ ಆಸ್ಕರ್ ಸ್ಪರ್ಧೆಗೆ ನಾಮಿನೇಟ್ ಆಗಿದೆ.

ಅನುರಾಗ್ ಪಾಠಕ್ ಅವರು ಬರೆದ ಕಾದಂಬರಿಯನ್ನು ಆಧರಿಸಿ ‘12th ಫೇಲ್’ ಸಿನಿಮಾ ನಿರ್ಮಾಣವಾಗಿದೆ. ಇದು ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಅವರ ಜೀವನವನ್ನು ಆಧರಿಸಿದ ಸಿನಿಮಾವಾಗಿದೆ. ಚಿತ್ರದಲ್ಲಿ ಮೇಧಾ ಶಂಕರ್ ನಾಯಕಿಯಾಗಿ ನಟಿಸಿದ್ದಾರೆ.

ಖ್ಯಾತ ನಿರ್ದೇಶಕ ವಿಧು ವಿನೋದ್ ಚೋಪ್ರಾ ಅವರು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

‘12th ಫೇಲ್’ ಸಿನಿಮಾ ಈಗಾಗಲೇ ಬಿಡುಗಡೆಯಾಗಿದ್ದು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಿನಿಮಾ ಕನ್ನಡಕ್ಕೂ ಡಬ್ ಆಗಿದೆ.
.ಚಿತ್ರಪಟ | ಆಸ್ಕರ್ ಕದ ತಟ್ಟಿದ ‘2018’.ಸಂಪಾದಕೀಯ | ಆಸ್ಕರ್ ಪ್ರಶಸ್ತಿಗಳ ಪುಳಕ, ಬದಲಾದ ದೃಷ್ಟಿಕೋನದ ಫಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.